ವಿವಾಹಕ್ಕೂ ಮುನ್ನ ಜಯಾಗೆ ಒಂದು ಕಠಿಣ ಷರತ್ತು ವಿಧಿಸಿದ್ದ ಅಮಿತಾಭ್  

ಅಮಿತಾಭ್ ಮತ್ತು ಜಯಾ ಬಚ್ಚನ್ ಅವರು ವಿವಾಹ ಆಗಿ 52 ವರ್ಷಗಳು ಕಳೆದಿವೆ. ಜಯಾ ಅವರು ತಮ್ಮ ಮದುವೆಗೆ ಮುಂಚೆ ಅಮಿತಾಭ್ ಒಂದು ಷರತ್ತು ವಿಧಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅಮಿತಾಭ್, ಜಯಾ ಪೂರ್ಣ ಸಮಯದ ಕೆಲಸ ಮಾಡಬಾರದು ಎಂದು ಬಯಸಿದ್ದರು. ಆದರೆ, ಜಯಾ ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನವನ್ನು ಸಮತೋಲನಗೊಳಿಸಿದ್ದಾರೆ.

ವಿವಾಹಕ್ಕೂ ಮುನ್ನ ಜಯಾಗೆ ಒಂದು ಕಠಿಣ ಷರತ್ತು ವಿಧಿಸಿದ್ದ ಅಮಿತಾಭ್  
ಅಮಿತಾಭ್-ಜಯಾ
Edited By:

Updated on: Mar 27, 2025 | 9:53 AM

ಅಮಿತಾಭ್​ ಬಚ್ಚನ್ (Amitabh Bachchan) ಮತ್ತು ಜಯಾ ಬಚ್ಚನ್ ಅವರ ವಿವಾಹವಾಗಿ 52 ವರ್ಷಗಳಾಗಿದೆ. ಇವರಿಬ್ಬರೂ ಜೂನ್ 3, 1973 ರಂದು ವಿವಾಹವಾದರು. ವಿವಾಹ ಸಮಾರಂಭವು ಜಯಾ ಬಚ್ಚನ್ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ನಡೆಯಿತು. ಅಮಿತಾಭ್ ಮತ್ತು ಜಯಾ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಆದರೆ ಬಿಗ್ ಬಿ ಮದುವೆಗೂ ಮುನ್ನ ಜಯಾಗೆ ಒಂದು ಷರತ್ತು ವಿಧಿಸಿದ್ದರು ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿದೆ. ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಜಯಾ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ.

ಮದುವೆಯ ನಂತರ ಪತ್ನಿ ಪೂರ್ಣಾವಧಿ ಕೆಲಸ ಮಾಡಬಾರದು ಎಂಬುದು ಅಮಿತಾಭ್​ ಬಚ್ಚನ್ ಅವರ ಆಸೆ ಆಗಿತ್ತು. ಈ ಬಗ್ಗೆ ಅವರು ದೃಢ ನಿಶ್ಚಯ ಹೊಂದಿದ್ದರು. ‘ವಾಟ್ ದಿ ಹೆಲ್ ನವ್ಯಾ’ ಪಾಡ್​ಕಾಸ್ಟ್​ನಲ್ಲಿ ಜಯಾ ಮಾತನಾಡಿದ್ದಾರೆ. ‘ನಾವು ಅಕ್ಟೋಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆವು. ಏಕೆಂದರೆ ಆಗ ನನ್ನ ಕೆಲಸದ ಹೊರೆ ಕಡಿಮೆ ಇರುತ್ತದೆ. ಆದರೆ 9ರಿಂದ 5 ರವರೆಗೆ ಕೆಲಸ ಮಾಡುವ ಹೆಂಡತಿ ನನಗೆ ಬೇಡ ಎಂದು ಅವರು ಆಗಲೇ ನನಗೆ ಹೇಳಿದ್ದರು. ನೀವು ಕೆಲಸ ಮಾಡಿ, ಆದರೆ ಪ್ರತಿದಿನ ಅಲ್ಲ. ನೀವು ನಿಮ್ಮ ಯೋಜನೆಗಳನ್ನು ಆರಿಸಿಕೊಳ್ಳಿ ಮತ್ತು ಸರಿಯಾದ ಜನರೊಂದಿಗೆ ಕೆಲಸ ಮಾಡಿ ಎಂದು ಅಮಿತಾಭ್ ನನಗೆ ಹೇಳಿದ್ದರು’ ಎಂದು ಜಯಾ ವಿವರಿಸಿದ್ದರು.

ಜಯಾ ಮತ್ತು ಅಮಿತಾಭ್ ಮೊದಲ ಬಾರಿಗೆ 1971ರಲ್ಲಿ ಹೃಷಿಕೇಶ್ ಮುಖರ್ಜಿ ಅವರ ‘ಗುಡ್ಡಿ’ ಚಿತ್ರದ ಸೆಟ್​ನಲ್ಲಿ ಭೇಟಿಯಾದರು. ಅದಾದ ನಂತರ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಜನಪ್ರಿಯ ಜೋಡಿ ‘ಜಂಜೀರ್’, ‘ಅಭಿಮಾನ್’, ‘ಚುಪ್ಕೆ ಚುಪ್ಕೆ’, ‘ಶೋಲೆ’, ‘ಕಭಿ ಖುಷಿ ಕಭಿ ಗಮ್’, ‘ಸಿಲ್ಸಿಲಾ’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಜಯಾ ಮತ್ತು ಬಿಗ್ ಬಿ ಅವರ ಮೊದಲ ಭೇಟಿಯ ಎರಡು ವರ್ಷಗಳ ನಂತರ, ಜೂನ್ 3, 1973ರಂದು ವಿವಾಹವಾದರು.

ಇದನ್ನೂ ಓದಿ
ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್; ಮತ್ತೆ ಮಾಸ್ ಲುಕ್​
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್
ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

ಇದನ್ನೂ ಓದಿ: 82ನೇ ವಯಸ್ಸಲ್ಲಿ ದಿನಕ್ಕೆ 1 ಕೋಟಿ ರೂ. ದುಡಿಯುತ್ತಾರೆ ಅಮಿತಾಭ್; ವರದಾನವಾಯ್ತು ಆ ಪ್ರಾಜೆಕ್ಟ್

ಜಯಾ ಬಚ್ಚನ್ ಅವರನ್ನು ಮದುವೆಯಾದ ನಂತರ ಅಮಿತಾಭ್​ ಬಾಲಿವುಡ್ ಉದ್ಯಮದಲ್ಲಿ ಸೂಪರ್ ಸ್ಟಾರ್ ಆದರು. ಮತ್ತೊಂದೆಡೆ, ಜಯಾ ಆಯ್ದ ಕೆಲವೇ ಚಿತ್ರಗಳನ್ನು ಮಾಡಿದರು. ಅವರು ತಮ್ಮ ಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಡಲು ಆದ್ಯತೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.