ಹುಡುಗಿ ರೀತಿ ಮಾತಾಡುತ್ತಿದ್ದ ಕರಣ್ ಜೋಹರ್; ಧ್ವನಿ ಬದಲಾವಣೆಗೆ ಮಾಡಿದ್ದೇನು?

ಕರಣ್ ಜೋಹರ್ ಅವರು ಹುಡುಗಿ ರೀತಿ ನಡೆಯುತ್ತಿದ್ದರು. ಅವರು ಧ್ವನಿ ಕೂಡ ಹುಡುಗಿಯರ ರೀತಿ ಇತ್ತು. ಆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಧ್ವನಿ ಮತ್ತು ನಡೆಯುವ ಶೈಲಿ ಬದಲಾಯಿಸಿಕೊಳ್ಳಲು ಅವರು ಮೂರು ವರ್ಷ ತರಬೇತಿ ಪಡೆದುಕೊಂಡಿದ್ದರು. ಇತ್ತೀಚೆಗಿನ ಸಂದರ್ಶನದಲ್ಲಿ ಕರಣ್ ಜೋಹರ್ ಈ ವಿಷಯದ ಬಗ್ಗೆ ಮಾತಾಡಿದ್ದಾರೆ.

ಹುಡುಗಿ ರೀತಿ ಮಾತಾಡುತ್ತಿದ್ದ ಕರಣ್ ಜೋಹರ್; ಧ್ವನಿ ಬದಲಾವಣೆಗೆ ಮಾಡಿದ್ದೇನು?
Karan Johar

Updated on: May 07, 2025 | 5:00 PM

ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ (Karan Johar) ಅವರನ್ನು ಹಲವು ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತದೆ. ಹಾಗಂತ ಇದು ಅವರಿಗೆ ಹೊಸದೇನೂ ಅಲ್ಲ. ಚಿಕ್ಕ ವಯಸ್ಸಿನಿಂದಲೂ ಜನರು ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ಬಾಡಿ ಶೇಮಿಂಗ್ ಕೂಡ ಮಾಡುತ್ತಿದ್ದರು. ಆ ಬಗ್ಗೆ ಕರಣ್ ಜೋಹರ್ ಅವರು ಈಗ ಮೌನ ಮುರಿದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. ಮೊದಲು ಕರಣ್ ಜೋಹರ್ ಅವರ ಧ್ವನಿ (Karan Johar Voice) ಹುಡುಗಿಯರ ರೀತಿ ಇತ್ತು! ಅಲ್ಲದೇ ಅವರು ನಡೆಯುವುದು ಕೂಡ ಹಾಗೆಯೇ ಇತ್ತು. ಅದನ್ನು ಬದಲಾಯಿಸಿಕೊಳ್ಳಲು ಅವರು ತರಬೇತಿ ಪಡೆದುಕೊಂಡರು.

‘ನಾನು ಪಬ್ಲಿಕ್ ಸ್ಪೀಕಿಂಗ್ ಕ್ಲಾಸ್​ಗೆ ಹೋಗಿದ್ದೆ. ಕ್ಲಾಸ್ ಮುಗಿದ ಬಳಿಕ ಅವರು ನನ್ನನ್ನು ತಡೆದು ನಿಲ್ಲಿಸಿ ಒಂದು ಮಾತು ಹೇಳಿದರು. ನಿಮ್ಮ ಧ್ವನಿ ಹುಡುಗಿಯರ ರೀತಿ ಇದೆ. ಹಾಗಾಗಿ ಈ ಸಮಾಜದಲ್ಲಿ ನಿಮಗೆ ತುಂಬ ತೊಂದರೆಗಳು ಎದುರಾಗಲಿವೆ. ನಿಮ್ಮ ಧ್ವನಿ ಗಂಡಸರ ರೀತಿ ಆಗಬೇಕು. ಅದಕ್ಕಾಗಿ ನಾವು ನಿಮಗೆ ಅಭ್ಯಾಸ ಮಾಡಿಸುತ್ತೇವೆ ಅಂತ ಸಲಹೆ ನೀಡಿದ್ದರು’ ಎಂದಿದ್​ದಾರೆ ಕರಣ್ ಜೋಹರ್.

‘ಗಂಡಸರ ರೀತಿ ಧ್ವನಿ ಬರಬೇಕು ಎಂಬ ಕಾರಣಕ್ಕೆ ನಾನು ಆ ತರಗತಿಗೆ ಎರಡು, ಮೂರು ವರ್ಷ ಹೋದೆ. ಕಂಪ್ಯೂಟರ್ ಕ್ಲಾಸ್​ಗೆ ಹೋಗುತ್ತಿದ್ದೇನೆ ಅಂತ ಅಪ್ಪನಿಗೆ ಹೇಳಿದ್ದೆ. ಯಾಕೆಂದರೆ ನಿಜ ಹೇಳಲು ನನಗೆ ನಾಚಿಕೆ ಆಗುತ್ತಿತ್ತು. ಮೂರು ವರ್ಷಗಳ ಬಳಿಕ ನನಗೆ ಗಡುಸು ಧ್ವನಿ ಬಂತು. ಹೇಗೆ ನಡೆಯಬೇಕು? ಗಂಡಸರ ರೀತಿ ಕಾಣುವುದು ಹೇಗೆ ಎಂಬುದನ್ನು ನನಗೆ ಕಲಿಸಿಕೊಟ್ಟರು’ ಎಂದು ಕರಣ್ ಜೋಹರ್ ಹೇಳಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ಈ ಎಲ್ಲ ಘಟನೆಗಳಿಂದ ಕರಣ್ ಜೋಹರ್ ಅವರು ಅನುಭವ ಪಡೆದಿದ್ದಾರೆ. ‘ಈಗ ನಾನು ಯಾರಿಗೂ ಈ ರೀತಿ ಸಲಹೆ ಕೊಡುವುದಿಲ್ಲ. ನೀವು ನೀವಾಗಿಯೇ ಇರಿ ಅಂತ ನಾನು ಹೇಳುತ್ತೇನೆ. ನೀವು ಒಂದು ರೀತಿ ನಡೆಯುತ್ತೀರಿ ಎಂದರೆ ಹಾಗೆಯೇ ಇರಿ. ಅದೇ ರೀತಿ ಮುಂದುವರಿಯಿರಿ. ಬೇರೆಯವರಿಗಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಡಿ ಎನ್ನುತ್ತೇನೆ’ ಎಂಬುದು ಕರಣ್ ಜೋಹರ್ ಮಾತುಗಳು.

ಇದನ್ನೂ ಓದಿ: ‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ

ಬಾಲಿವುಡ್​ನಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕರಣ್ ಜೋಹರ್ ಅವರು ಯಶಸ್ಸು ಕಂಡಿದ್ದಾರೆ. ‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹ್ನಾ’, ‘ಮೈ ನೇಮ್ ಈಸ್ ಖಾನ್’, ‘ಸ್ಟೂಡೆಂಟ್ ಆಫ್​ ದಿ ಇಯರ್’, ‘ಬಾಂಬೆ ಟಾಕೀಸ್’, ‘ಯೇ ದಿಲ್​ ಹೈ ಮುಷ್ಕಿಲ್’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.