ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Mar 03, 2025 | 10:55 AM

ಬಾಲಿವುಡ್‌ನ ಜನಪ್ರಿಯ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹೊರಬಿದ್ದಿದೆ. ಕಿಯಾರಾ ಮತ್ತು ಸಿದ್ದಾರ್ಥ್ ಅವರ ಆಸ್ತಿ ನೂರಾರು ಕೋಟಿ ರೂಪಾಯಿ ಬಾಳುತ್ತದೆ. ಈ ಜನಪ್ರಿಯ ದಂಪತಿಯ ಆರ್ಥಿಕ ಸ್ಥಿತಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?
ಕಿಯಾರಾ-ಸಿದ್ದಾರ್ಥ್
Follow us on

ಬಾಲಿವುಡ್‌ ದಂಪತಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ತಿಳಿದಿದೆ. ಈ ದಂಪತಿಗಳು ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡರು. ‘ನಮ್ಮ ಜೀವನದಲ್ಲಿ ಮತ್ತೊಂದು ಅದ್ಭುತ ಉಡುಗೊರೆ ಬರುತ್ತಿದೆ’ ಎಂದು ಕಿಯಾರಾ ಅವರಿಬ್ಬರೂ ಮಗುವಿನ ಸಾಕ್ಸ್‌ಗಳನ್ನು ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಮೂಲಕ ಪಾಲಕರಾಗುತ್ತಿರುವುದಾಗಿ ಅವರು ಹೇಳಿಕೊಂಡರು. ಈಗ ದಂಪತಿಯ ಆಸ್ತಿ ಬಗ್ಗೆ ತಿಳಿದುಕೊಳ್ಳೋಣ.

ಕಿಯಾರಾ ಮತ್ತು ಸಿದ್ಧಾರ್ಥ್ ಹೆಸರುಗಳು ಟ್ರೆಂಡಿಂಗ್ ಆಗಿವೆ. ದಂಪತಿಗಳ ವೈಯಕ್ತಿಕ ವಿವರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಫ್ಯಾನ್ಸ್ ಕುತೂಹಲದಿಂದ ಕೂಡಿದ್ದಾರೆ. ಬಾಲಿವುಡ್‌ನಲ್ಲಿ ಪವರ್ ಕಪಲ್ ಆಗಿರುವುದಲ್ಲದೆ, ಕಿಯಾರಾ ಮತ್ತು ಸಿದ್ಧಾರ್ಥ್ ಕೂಡ ಚಿತ್ರರಂಗದ ಅತ್ಯಂತ ಶ್ರೀಮಂತ ತಾರೆಗಳಲ್ಲಿ ಒಬ್ಬರು.

ನಾಯಕಿ ಕಿಯಾರಾ ಚಲನಚಿತ್ರಗಳು, ಬ್ರಾಂಡ್ ಮತ್ತು ವ್ಯವಹಾರ ಹೂಡಿಕೆಗಳ ಮೂಲಕ ಬಹಳಷ್ಟು ಸಂಪಾದಿಸುತ್ತಾರೆ. ಅವರ ಇದುವರೆಗಿನ ಆಸ್ತಿ 40 ಕೋಟಿ ರೂ.ಗಳೆಂದು ವರದಿಯಾಗಿದೆ. ಕಿಯಾರಾ ಪ್ರತಿ ಚಿತ್ರಕ್ಕೆ ಸುಮಾರು 1 ಕೋಟಿ ರೂಪಾಯಿ ಪಡೆಯುತ್ತಾರೆ. ಬ್ರ್ಯಾಂಡ್​ಗಳಿಗೆ ಅವರು. 1.5 ಕೋಟಿ ರೂಪಾಯಿ ಪಡೆಯುತ್ತಾರೆ. ಈ ನಟಿ ಸೆಂಕೊ ಗೋಲ್ಡ್, ಗ್ಯಾಲಕ್ಸಿ ಚಾಕೊಲೇಟ್‌ಗಳು ಮತ್ತು ಮಿಂತ್ರಾದಂತಹ ಪ್ರಮುಖ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.

ಇದನ್ನೂ ಓದಿ
ವಿಚ್ಛೇದನ ವದಂತಿಗೆ ಸ್ಪಷ್ಟನೆ ನೀಡಿದ ಗೋವಿಂದ; ಒಪ್ಪಿಕೊಂಡ್ರಾ?
37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ನಯನತಾರಾ
ಪ್ರಭುದೇವ ಮದುವೆ ಆಗಲು ನಯನತಾರಾ ಹೊರಟಾಗ; ಕೋರ್ಟ್ ಮೆಟ್ಟಿಲೇರಿತ್ತು ಪ್ರಕರಣ

ಕಿಯಾರಾ ಅವರು ಕನ್ನಡದ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕನ್ನಡದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ ಅನ್ನೋದು ವಿಶೇಷ.

ಕಿಯಾರಾ ಅವರ ಪತಿ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಆಸ್ತಿ 105 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರ ಆದಾಯವು ಬ್ಲಾಕ್ಬಸ್ಟರ್ ಚಲನಚಿತ್ರಗಳು, ಹೆಚ್ಚು ಸಂಭಾವನೆ ಪಡೆಯುವ ಅನುಮೋದನೆಗಳು ಮತ್ತು ಹೂಡಿಕೆಗಳಿಂದ ಬರುತ್ತದೆ. ಅವರು ಪ್ರತಿ ಚಿತ್ರಕ್ಕೆ 15 ಕೋಟಿಯಿಂದ ರೂಪಾಯಿಯಿಂದ 20 ಕೋಟಿವರೆಗೆ ಪಡೆಯುತ್ತಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ‘ಟಾಕ್ಸಿಕ್’ ಶೂಟಿಂಗ್ ನಡೆಯುವಾಗಲೇ ಪ್ರೆಗ್ನೆನ್ಸಿ ಘೋಷಿಸಿದ ಕಿಯಾರಾ; ಮುಂದೇನು?  

‘ಶೇರ್ಷಾ’ ಅಂತಹ ಹಿಟ್ ಚಿತ್ರಗಳಿಂದ ಸಿದ್ಧಾರ್ಥ್ ಅವರು ನಟಿಸಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರ ಒಟ್ಟು ಆಸ್ತಿ 145 ಕೋಟಿ ರೂಪಾಯಿ. ಈಗ ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕಿಯಾರಾ ಹಾಗೂ ಸಿದ್ದಾರ್ಥ್ 2023ರ ಫೆಬ್ರವರಿಯಲ್ಲಿ ವಿವಾಹ ಆದರು. ವಿವಾಹ ಸರಿಯಾಗಿ ಎರಡು ವರ್ಷಕ್ಕೆ ಅವರು ಹೊಸ ಸುದ್ದಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.