ಫೋಟೋದಲ್ಲಿರುವ ಈ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?

ಕಿಯಾರಾ ಚಿಕ್ಕ ಫ್ರಾಕ್ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ. ಇದಲ್ಲದೆ, ಬಾಲ್ಯದ ಕೆಲ ಕ್ಯೂಟ್ ಫೋಟೋಗಳು ಕೂಡ ಇದರಲ್ಲಿವೆ. ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘

ಫೋಟೋದಲ್ಲಿರುವ ಈ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 14, 2022 | 7:36 PM

ಅಭಿಮಾನಿಗಳು ಸೆಲೆಬ್ರಿಟಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುವುದರ ಜತೆಗೆ ಅನೇಕ ಫ್ಯಾನ್​ಪೇಜ್​​ಗಳನ್ನು ಕ್ರಿಯೇಟ್ ಮಾಡುತ್ತಾರೆ. ಸೆಲೆಬ್ರಿಟಿಗಳ ಬಾಲ್ಯದ ಫೋಟೋ ಸಿಕ್ಕರೆ ಅದನ್ನು ಫ್ಯಾನ್ ಪೇಜ್​ಗಳಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಇಂದು (ನವೆಂಬರ್ 14) ಮಕ್ಕಳ ದಿನಾಚರಣೆ. ಈ ವಿಶೇಷ ದಿನದಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಿದೆ. ಸದ್ಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರೋದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani). ಅವರ ಬಾಲ್ಯದ ಫೋಟೋ ಹಾಗೂ ವಿಡಿಯೋಗಳನ್ನು ಸೇರಿಸಿ ರೀಲ್ಸ್ ಮಾಡಲಾಗಿದೆ. ಇದನ್ನು ಅಭಿಮಾನಿಗಳ ಪೇಜ್​​ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಸ್ಟೇಟಸ್​​ನಲ್ಲಿ ಹಂಚಿಕೊಂಡಿರುವ ಕಿಯಾರಾ ಅವರು ‘ಮಕ್ಕಳ ದಿನಾಚರಣೆಯ ಶುಭಾಶಯ’ ಎಂದಿದ್ದಾರೆ.

ಕಿಯಾರಾ ಚಿಕ್ಕ ಫ್ರಾಕ್ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ. ಇದಲ್ಲದೆ, ಬಾಲ್ಯದ ಕೆಲ ಕ್ಯೂಟ್ ಫೋಟೋಗಳು ಕೂಡ ಇದರಲ್ಲಿವೆ. ಈ ವಿಡಿಯೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಎಷ್ಟೊಂದು ಕ್ಯೂಟ್​’ ಎಂದು ಕೆಲವರು ಬರೆದರೆ, ಇನ್ನೂ ಕೆಲವರು ‘ಕಿಯಾರಾ ಸಾಕಷ್ಟು ಬದಲಾಗಿದ್ದಾರೆ. ಬಾಲ್ಯಕ್ಕೆ ಹಾಗೂ ಈಗಿನ ಕಿಯಾರಾಗೆ ತುಂಬಾ ವ್ಯತ್ಯಾಸವಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಪಡ್ಡೆಗಳ ನಿದ್ದೆ ಕದ್ದ ಕಿಯಾರಾ ಅಡ್ವಾಣಿ; ಇಲ್ಲಿದೆ ಫೋಟೋ ಗ್ಯಾಲರಿ
Image
ಬ್ರೇಕಪ್​ ಗಾಸಿಪ್​ಗೆ ಕಿವಿಗೊಡದೇ ‘ಭೂಲ್​ ಭುಲಯ್ಯ 2’ ಪ್ರಮೋಷನ್​ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ
Image
ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
Image
ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್

2014ರಲ್ಲಿ ತೆರೆಗೆ ಬಂದ ‘ಫಗ್ಲಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಕಿಯಾರಾ. ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’, ‘ಕಬೀರ್ ಸಿಂಗ್​’, ‘ಶೇರ್ಷಾ’ ಸೇರಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ‘ಶಂಷೇರಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಬೇರೆ ಆದರು ಎಂದು ಒಮ್ಮೆ ವರದಿ ಆಗಿತ್ತು. ಅದಾದ ಬಳಿಕ ಸ್ವಲ್ಪ ಸಮಯ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಈ ಮೂಲಕ ಇಬ್ಬರೂ ಮತ್ತೆ ಒಂದಾದರು. ಶೀಘ್ರದಲ್ಲೇ ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್