ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಇತ್ತೀಚಿನ ಸೋಲುಗಳ ನಂತರ, ಸಲ್ಮಾನ್ ಖಾನ್ 'ಮಾತೃಭೂಮಿ' ಚಿತ್ರದ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾವನ್ನು ಸುಭಾಷ್ ಘಾಯ್, ಕಬೀರ್ ಖಾನ್ ಸೇರಿದಂತೆ ಅನೇಕ ಗಣ್ಯರು ವೀಕ್ಷಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಭಾರತ-ಚೀನಾ ಸೈನಿಕರ ಶಾಂತಿ-ಗೌರವದ ಕಥಾಹಂದರ ಹೊಂದಿರುವ ಈ ಚಿತ್ರ ಸಲ್ಮಾನ್ ಖಾನ್ ಕಮ್‌ಬ್ಯಾಕ್‌ಗೆ ಭರವಸೆ ಮೂಡಿಸಿದೆ.

ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ
ಸಲ್ಮಾನ್ ಖಾನ್
Edited By:

Updated on: May 29, 2026 | 3:11 PM

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಅದೆಷ್ಟು ಸೋಲುಗಳನ್ನು ಕಂಡರೋ. ಬಹುಶಃ ಅವರಿಗೂ ಅದರ ಲೆಕ್ಕ ತಪ್ಪಿ ಹೋಗಿರಬಹುದು. ಒಂದು ಕಾಲದಲ್ಲಿ ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ಪಾರುಪತ್ಯ ನಡೆಸಿದ್ದ ಅವರು, ಈಗ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಅವರು ‘ಮಾತೃಭೂಮಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಿರುವಾಗಲೇ ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್​’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವಾಗಲೇ ಸಲ್ಮಾನ್ ಖಾನ್ ಆಪ್ತ ಬಳಗದವರು ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.

ನಿರ್ದೇಶಕ ಸುಭಾಷ್ ಘಾಯ್, ಕಬೀರ್ ಖಾನ್, ರಿತೇಶ್ ದೇಶ್​ಮುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕೂಡ ಸಿನಿಮಾ ಪ್ರದರ್ಶನದ ವೇಳೆ ಇದ್ದರು. ಈ ಸಿನಿಮಾ ನೋಡಿದ ಬಳಿಕ ಸುಭಾಷ್ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

‘ನನ್ನ ನೆಚ್ಚಿನ ನಿರ್ದೇಶಕರೆಲ್ಲರೂ ಇಂದು ಫುಡ್ ಸ್ಕ್ವೇರ್​ನಲ್ಲಿ ಒಂದಾಗಿ, ಅಪೂರ್ವ ಲಖಿಯಾ ಅವರ ‘ಮಾತೃಭೂಮಿ’ ಚಿತ್ರದ ಪ್ರಾಥಮಿಕ ಆವೃತ್ತಿ ವೀಕ್ಷಿಸಿದೆವು. ಸಿನಿಮಾ ಅದ್ಭುತವಾಗಿದೆ. ಭಾರತ ಮತ್ತು ಚೀನಾದ ಸೈನಿಕರು ತಮ್ಮ ದೇಶ ಹಾಗೂ ಕುಟುಂಬಗಳ ಮೇಲಿಟ್ಟಿರುವ ಶಾಂತಿ-ಗೌರವದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್‌, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?

ಸಿನಿಮಾದ ಕಥಾವಸ್ತು ಬದಲಾವಣೆ ಹಾಗೂ ಚಿತ್ರ ಪದೇ ಪದೇ ತಡವಾಗುತ್ತಿರುವ ಬಗ್ಗೆ ಅನೇಕರು ಟೀಕೆ ಹೊರಹಾಕಿದ್ದರು. ಹೀಗಿರುವಾಗಲೇ ಸಿನಿಮಾ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಸಲ್ಮಾನ್ ಖಾನ್ ಚಿತ್ರಕ್ಕೆ ದೊಡ್ಡ ಶಕ್ತಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us