ಬಾಲಿವುಡ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಅವರು ಹೆಚ್ಚು ಸುದ್ದಿ ಆಗುವುದೇ ವೈಯಕ್ತಿಕ ಕಾರಣಗಳಿಂದ. ನಟ ಅರ್ಜುನ್ ಕಪೂರ್ (Arjun Kapoor) ಅವರ ಜೊತೆ ಮಲೈಕಾ ಅರೋರಾ ಲಿವ್-ಇನ್-ರಿಲೇಷನ್ಶಿಪ್ನಲ್ಲಿ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದೆ. ಹಾಗಾಗಿ ಅವರು ಬ್ರೇಕಪ್ (Breakup) ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ಮಲೈಕಾ ಅರೋರಾ (Malaika Arora) ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿ ಆಗಿದೆ. ಸದ್ಯಕ್ಕೆ ಬ್ರೇಪಕ್ ಆಗಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ ಬ್ರೇಕಪ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ‘ಇಂಡಿಯಾ ಟುಡೆ’ ಯತ್ನಿಸಿದೆ. ಮಲೈಕಾ ಅರೋರಾ ಅವರ ಮ್ಯಾನೇಜರ್ಗೆ ಈ ಬಗ್ಗೆ ಕೇಳಿದಾಗ, ‘ಇಲ್ಲ ಇಲ್ಲ.. ಎಲ್ಲವೂ ವದಂತಿ’ ಎಂದು ಉತ್ತರಿದ್ದಾರೆ ಎಂದು ವರದಿ ಆಗಿದೆ. ಹಾಗಾಗಿ ಸದ್ಯಕ್ಕಂತೂ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವೆ ಬ್ರೇಕಪ್ ಆಗಿಲ್ಲ ಎನ್ನಲಾಗುತ್ತಿದೆ.
ಸೆಲೆಬ್ರಿಟಿಗಳ ನಡುವೆ ಪ್ರೀತಿ-ಪ್ರೇಮ ಚಿಗುರುವುದು, ಮದುವೆ ಆಗುವುದು, ಬ್ರೇಕಪ್, ವಿಚ್ಛೇದನ ಆಗುವುದು ತುಂಬ ಕಾಮನ್. ಹಾಗಾಗಿ ಪದೇ ಪದೇ ಇಂಥ ಗಾಸಿಪ್ಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಂತಾರೆ. ಹಾಗಾಗಿ ಗಾಸಿಪ್ ಮಂದಿ ಈ ವದಂತಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದಷ್ಟು ಬೇಗ ಸ್ವತಃ ಮಲೈಕಾ ಅರೋರಾ ಅಥವಾ ಅರ್ಜುನ್ ಕಪೂರ್ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: 50ರಲ್ಲೂ 30ರಂತೆ ಕಾಣುವ ಮಲೈಕಾ ಅರೋರಾ, ಪಾಲಿಸುವ ಡಯಟ್ ಯಾವುದು?
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಹಾಗಿದ್ದರೂ ಕೂಡ ಅವರು ಪರಸ್ಪರ ಆಕರ್ಷಿತರಾಗಿದ್ದಾರೆ. 2019ರಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಆದರೆ ಮದುವೆ ಆಗುವ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಈಗ ಅವರ ಬ್ರೇಕಪ್ ಬಗ್ಗೆ ಗಾಸಿಪ್ ಹಬ್ಬಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.