ಕಂಗನಾ ರಣಾವತ್ ‘ಎಮರ್ಜೆನ್ಸಿ’ಗೆ ಮಿಲಿಂದ್ ಸೋಮನ್ ಸೇರ್ಪಡೆ; ಅವರ ಪಾತ್ರ ಏನು?

ಭಾರತ ಹಾಗೂ ಪಾಕಿಸ್ತಾನದ ನಡುವೆ 1971ರಲ್ಲಿ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಸ್ಯಾಮ್ ಅವರು ಭಾರತ ಸೇನೆಯ ಮುಖ್ಯಸ್ಥರಾಗಿದ್ದರು. ಕಂಗನಾ ನಿರ್ದೇಶನದ ಸಿನಿಮಾದಲ್ಲಿ ಈ ಕಥೆ ಕೂಡ ಹೈಲೈಟ್ ಆಗಲಿದೆ.

ಕಂಗನಾ ರಣಾವತ್ ‘ಎಮರ್ಜೆನ್ಸಿ’ಗೆ ಮಿಲಿಂದ್ ಸೋಮನ್ ಸೇರ್ಪಡೆ; ಅವರ ಪಾತ್ರ ಏನು?
ಮಿಲಿಂದ್
Edited By:

Updated on: Aug 25, 2022 | 5:15 PM

ಕಂಗನಾ ರಣಾವತ್ (Kangana Ranaut) ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದು ಪಾಲಿಟಿಕಲ್ ಡ್ರಾಮಾ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಹಾಗೂ ಅದರ ಸುತ್ತಲ ವಿಚಾರ ಇಟ್ಟುಕೊಂಡು ಈ ಸಿನಿಮಾದ ತಯಾರಾಗುತ್ತಿದೆ. ನಿತ್ಯ ಹೊಸ ಹೊಸ ಕಲಾವಿದರು ಚಿತ್ರತಂಡಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಈಗ ಮಿಲಿಂದ್ ಸೋಮನ್ (Milind Soman) ಅವರು ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್​ಶಾ ಪಾತ್ರಕ್ಕೆ ಮಿಲಿಂದ್ ಜೀವ ತುಂಬಲಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ 1971ರಲ್ಲಿ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಸ್ಯಾಮ್ ಅವರು ಭಾರತ ಸೇನೆಯ ಮುಖ್ಯಸ್ಥರಾಗಿದ್ದರು. ಕಂಗನಾ ನಿರ್ದೇಶನದ ಸಿನಿಮಾದಲ್ಲಿ ಈ ಕಥೆ ಕೂಡ ಹೈಲೈಟ್ ಆಗಲಿದೆ. ಈ ಕಾರಣಕ್ಕೆ ಮಿಲಿಂದ್ ನಿರ್ವಹಿಸುತ್ತಿರುವ ಈ ಪಾತ್ರ ಮುಖ್ಯವಾಗಲಿದೆ ಎನ್ನಲಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಪೋಸ್ಟರ್​ ಅನ್ನು ಕಂಗನಾ ರಣಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ

‘1971ರ ಇಂಡೋ-ಪಾಕ್ ವಾರ್​ನಲ್ಲಿ ಸ್ಯಾಮ್ ಹೀರೋ ಆಗಿದ್ದರು. ಈ ಪಾತ್ರಕ್ಕೆ ಮಿಲಿಂದ್ ಹೊಂದಿಕೆ ಆಗಿದ್ದಾರೆ. ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿ ಹಾಗೂ ಸ್ಯಾಮ್ ಒಟ್ಟಾಗಿ ಕೆಲಸ ಮಾಡಿದ್ದರು. ಮಿಲಿಂದ್ ಸರ್ ಈ ಪಾತ್ರ ಮಾಡುತ್ತಾರೆ ಎಂದಾಗ ಖುಷಿ ಆಯಿತು’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಕಂಗನಾ ಜತೆ ಕೆಲಸ ಮಾಡುತ್ತಿರುವುದಕ್ಕೆ ಮಿಲಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಕಂಗನಾ ಜತೆ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ಅವರ ಕೆಲಸ ನನಗೆ ಇಷ್ಟವಾಗುತ್ತದೆ. ಕ್ವೀನ್ ಹಾಗೂ ತನು ವೆಡ್ಸ್ ಮನು ಚಿತ್ರಗಳು ನನಗೆ ಇಷ್ಟ. ಫೀಲ್ಡ್ ಮಾರ್ಷಲ್ ಸ್ಯಾಮ್ ಪಾತ್ರ ಮಾಡುತ್ತಿರುವುದು ನಿಜಕ್ಕೂ ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​

ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ. ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಅನುಪಮ್ ಖೇರ್ ಅವರು ಜಯಪ್ರಕಾಶ್ ನಾರಾಯಣ್ ಪಾತ್ರ ಮಾಡುತ್ತಿದ್ದಾರೆ. ಶ್ರೇಯಸ್ ತಲ್ಪಡೆ ಅವರು ಅಟಲ್ ಬಿಹಾರಿ ವಾಜ್​ಪೇಯಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

Published On - 2:46 pm, Thu, 25 August 22