ನಟಿ ಉರ್ಫಿ ಜಾವೇದ್ (Urfi Javed) ಅವರು ತಮ್ಮ ಬಟ್ಟೆಯ ಕಾರಣಕ್ಕೆ ಫೇಮಸ್ ಆಗಿದ್ದಾರೆ. ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸುವ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಉರ್ಫಿ ಜಾವೇದ್ ಫೋಟೋಗಳು (Urfi Javed Photos) ಪ್ರತಿ ದಿನ ವೈರಲ್ ಆಗುತ್ತವೆ. ಅವುಗಳಿಗೆ ಅನೇಕರು ಬಹಳ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಇನ್ನೂ ಕೆಲವರು ಅತಿರೇಕದ ವರ್ತನೆ ತೋರುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ, ವ್ಯಕ್ತಿಯೊಬ್ಬ ಉರ್ಫಿ ಜಾವೇದ್ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ (Death Threat) ಹಾಕಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯನ್ನು ನವೀನ್ ಗಿರಿ ಎಂದು ಗುರುತಿಸಲಾಗಿದೆ.
ಮುಂಬೈನಲ್ಲಿ ವಾಸಿಸುತ್ತಿರುವ ನವೀನ್ ಗಿರಿ ಎಂಬಾತನು ಉರ್ಫಿ ಜಾವೇದ್ ಅವರಿಗೆ ವಾಟ್ಸಪ್ ಮೂಲಕ ಹಲವು ಸಂದೇಶಗಳನ್ನು ಕಳುಹಿಸಿ, ಕಿರುಕುಳ ನೀಡಿದ್ದಾನೆ ಎಂಬ ಆರೋಪ ಎದುರಾಗಿದೆ. ವಾಟ್ಸಪ್ ಮೂಲಕ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎಂದು ಉರ್ಫಿ ಜಾವೇದ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಆರೋಪಿ ನವೀನ್ ಗಿರಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಎ), 354 (ಡಿ), 506, 509 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Urfi Javed: ಚಿಕ್ಕ ಹುಡುಗರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದ ಉರ್ಫಿ ಜಾವೇದ್; ಬಾಲಕರ ತಪ್ಪೇನು?
ವಿವಾದಕ್ಕೂ ಉರ್ಫಿ ಜಾವೇದ್ ಅವರಿಗೆ ಬಹಳ ನಂಟು ಬೆಳೆದಿದೆ. ಅವರ ವಿರುದ್ಧ ಅನೇಕರು ಕೇಸ್ ದಾಖಲು ಮಾಡಿದ್ದಾರೆ. ಇತ್ತೀಚೆಗೆ ಅವರು ದುಬೈನಲ್ಲಿ ಅರೆಬೆತ್ತಲಾಗಿ ಫೋಟೋಶೂಟ್ ಮಾಡುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂಬ ಸುದ್ದಿ ಹರಡಿತ್ತು. ಆ ಬಗ್ಗೆ ಮಾಧ್ಯಮಗಳಿಗೆ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ಫೋಟೋಶೂಟ್ ನಡೆಯುತ್ತಿದ್ದ ಸ್ಥಳದಲ್ಲಿ ಅನುಮತಿ ಪಡೆಯುವ ವಿಚಾರದಲ್ಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆಯೇ ಹೊರತು ಬಟ್ಟೆಯ ಬಗ್ಗೆ ಯಾವುದೇ ತಕರಾರು ವ್ಯಕ್ತವಾಗಿಲ್ಲ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
ಇದನ್ನೂ ಓದಿ: Urfi Javed: ಉರ್ಫಿ ಜಾವೇದ್ ಜತೆ ಹಿಂದುಸ್ತಾನಿ ಭಾವು ಕಿರಿಕ್; ಈ ರೀತಿ ಬಟ್ಟೆ ಧರಿಸಿದ್ದಕ್ಕೆ ನಟಿಗೆ ಬೆದರಿಕೆ
ಒಂದಷ್ಟು ದಿನಗಳ ಹಿಂದೆ ಉರ್ಫಿ ಜಾವೇದ್ ಅವರು ಮಾದಕವಾಗಿ ಸೀರೆಯುಟ್ಟು ಮ್ಯೂಸಿಕ್ ವಿಡಿಯೋ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಅವರು ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಅವರ ವಿರುದ್ಧ ಕೆಲವರು ಕೇಸ್ ಹಾಕಿದ್ದರು. ಆ ಬಗ್ಗೆ ಉರ್ಫಿ ಜಾವೇದ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: Urfi Javed: ಇದು ಬಟ್ಟೆಯೋ, ಬಲೆಯೋ? ಉರ್ಫಿ ಜಾವೇದ್ ಹೊಸ ವೇಷ ನೋಡಿ ನೆಟ್ಟಿಗರಿಗೆ ಅನುಮಾನ
‘ನಾನು ಇದನ್ನೆಲ್ಲ ಪ್ರಚಾರಕ್ಕೆ ಮಾಡ್ತೀನಿ ಅಂತ ಹೇಳುವ ಜನರೇ ನನ್ನ ಹೆಸರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅತ್ಯಾಚಾರಿಗಳಿಗಿಂತಲೂ ಹೆಚ್ಚಿನ ಎಫ್ಐಆರ್ಗಳು ನನ್ನ ಮೇಲೆ ಆಗುತ್ತಿವೆ. ಹುಡುಗಿಯರು ಏನು ಧರಿಸಬೇಕು ಅಂತ ನೀವು ನಿರ್ಧಾರ ಮಾಡೋಕೆ ಇದು ತಾಲಿಬಾನ್ ಅಲ್ಲ. ಇದು ಅಫ್ಘಾನಿಸ್ತಾನ್ ಅಲ್ಲ’ ಎಂದು ಉರ್ಫಿ ಜಾವೇದ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:26 pm, Thu, 22 December 22