ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡು ಫೋಟೋ ಪೋಸ್ಟ್ ಮಾಡಿದ ನಟಿ; ನಂತರ ಏನಾಯ್ತು?

| Updated By: ರಾಜೇಶ್ ದುಗ್ಗುಮನೆ

Updated on: May 05, 2022 | 4:57 PM

ಕೆಲ ದಿನಗಳ ಹಿಂದೆ ನುಸ್ರುತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಜೀನ್ಸ್​ ಪ್ಯಾಂಟ್​ನ ಹಿಂದಿನ ಪಾಕೆಟ್​ನಲ್ಲಿ ಕಾಂಡೋಮ್​ ಕಾಣುವ ರೀತಿಯಲ್ಲಿ ಈ ಫೋಟೋ ಇತ್ತು.

ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡು ಫೋಟೋ ಪೋಸ್ಟ್ ಮಾಡಿದ ನಟಿ; ನಂತರ ಏನಾಯ್ತು?
ನುಸ್ರತ್
Follow us on

ಬಾಲಿವುಡ್​ನಲ್ಲಿ (Bollywood) ನುಸ್ರತ್​ ಬರುಚಾ (Nushrratt Bharucha) ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ‘ಸೋನು ಕೆ ಟಿಟ್ಟೂ ಕಿ ಸ್ವೀಟಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ‘ಜನ್​​ಹಿತ್​ ಮೆ ಜಾರಿ’ ಸಿನಿಮಾದಲ್ಲಿ (Janhit Mein Jaari) ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್ ಪಾತ್ರ ಮಾಡಿದ್ದಾರೆ. ಕಲಾವಿದರು ಮಡಿವಂತಿಕೆ ಬಿಟ್ಟು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಾಗ ಟೀಕೆಗಳು ಎದುರಾಗುತ್ತವೆ. ಸುಸ್ರತ್ ವಿಚಾರದಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ.

ಕಥಾ ನಾಯಕಿ ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೇಲ್ಸ್​ ಎಕ್ಸಿಕ್ಯೂಟಿವ್​ ಕೆಲಸ​ ಸಿಗುತ್ತದೆ. ಪ್ರತಿ ಮೆಡಿಕಲ್​ ಸ್ಟೋರ್​ಗೆ ಹೋಗಿ ಕಾಂಡೋಮ್​ ಮಾರುವ ಕೆಲಸ ಕಥಾ ನಾಯಕಿಯದ್ದು. ‘ಜನ್​​ಹಿತ್​ ಮೆ ಜಾರಿ’ ಚಿತ್ರದಲ್ಲಿ ಇದುವೇ ಹೈಲೈಟ್​. ಈ ಪಾತ್ರವನ್ನು ನುಸ್ರತ್ ನಿಭಾಯಿಸಿದ್ದಾರೆ. ಅವರ ಪಾತ್ರಕ್ಕೆ ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ
ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?
Mandira Bedi: ಗಂಡ ಸತ್ತು ವರ್ಷ ಕಳೆದಿಲ್ಲ, ಬೇರೆ ಪುರುಷನ ಜತೆ ಹಿಂಗೆಲ್ಲ ಪೋಸ್​ ನೀಡಿದ್ದಕ್ಕೆ ಮಂದಿರಾ ಬೇಡಿ ಸಖತ್​ ಟ್ರೋಲ್​
ಖ್ಯಾತ ನಟಿಯ ಜೀವನ ಡೇಂಜರ್​ನಲ್ಲಿದೆ ಎಂದ ನಿರ್ದೇಶಕ ಪೊಲೀಸರ ವಶಕ್ಕೆ
Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್

ಕೆಲ ದಿನಗಳ ಹಿಂದೆ ನುಸ್ರುತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಜೀನ್ಸ್​ ಪ್ಯಾಂಟ್​ನ ಹಿಂದಿನ ಪಾಕೆಟ್​ನಲ್ಲಿ ಕಾಂಡೋಮ್​ ಕಾಣುವ ರೀತಿಯಲ್ಲಿ ಈ ಫೋಟೋ ಇತ್ತು.  ‘ಜನ್​​ಹಿತ್​ ಮೆ ಜಾರಿ’ ಸಿನಿಮಾದ ರಿಲೀಸ್ ಡೇಟ್​ ಘೋಷಣೆ ಮಾಡಲು ಈ ರೀತಿಯ ಪೋಸ್ಟರ್ ಸಿದ್ಧಪಡಿಸಲಾಗಿತ್ತು. ಆದರೆ, ಇದನ್ನು ನುಸ್ರತ್ ಫ್ಯಾನ್ಸ್ ಬೇರೆಯದೇ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಈ ಪೋಸ್ಟ್​ಗೆ ಬಂದ ಕೆಟ್ಟ ಕಮೆಂಟ್​ಗಳನ್ನು ಪಟ್ಟಿ ಮಾಡಿ ತೋರಿಸಿದ್ದಾರೆ ನುಸ್ರತ್.

ವಿಡಿಯೋ ಒಂದನ್ನು ಹಂಚಿಕೊಂಡಿರುವ ನುಸ್ರತ್​, ‘ಎಲ್ಲರೂ ತಮ್ಮ ಪೋಸ್ಟ್​ಗೆ ಬಂದ ಬೆಸ್ಟ್ ಕಮೆಂಟ್​ ಸೆಲೆಕ್ಟ್ ಮಾಡುತ್ತಾರೆ. ಆದರೆ, ನಾನು ಇಲ್ಲಿ ಅತಿ ಕೆಟ್ಟ ಕಮೆಂಟ್​​ಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವಿಡಿಯೋದಲ್ಲಿ ಕೆಟ್ಟ ಕಮೆಂಟ್​ಗಳ ಪಟ್ಟಿ ಮಾಡಿದ್ದಾರೆ.

‘ಕಾಂಡೋಮ್​ ಜೀನ್ಸ್​ಗೆ ಹಾಕಿಕೊಳ್ಳುವುದಲ್ಲ’ ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದಾನೆ. ಇನ್ನೂ ಕೆಲವರು ಅವರ ದೇಹದ ಖಾಸಗಿ ಭಾಗದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ‘ನಿಮಗೆ ಯಾವ ಫ್ಲೇವರ್​ ಇಷ್ಟವಾಗುತ್ತದೆ’ ಎಂಬಿತ್ಯಾದಿ ಕಮೆಂಟ್​ಗಳು ಕೂಡ ಬಂದಿವೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Published On - 4:55 pm, Thu, 5 May 22