AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಗಂಭೀರವಾಗಿ ಸ್ವೀಕರಿಸಿ; ಕೋರಿಕೊಂಡ ಪಂಕಜ್ ತ್ರಿಪಾಠಿ

ಪಂಕಜ್ ತ್ರಿಪಾಠಿ ವೈರಲ್ ವಿಡಿಯೋದಲ್ಲಿ 'ನನ್ನನ್ನು ಗಂಭೀರವಾಗಿ ಸ್ವೀಕರಿಸಿ' ಎಂದು ಕೇಳಿಕೊಂಡಿದ್ದಾರೆ. ಒಟಿಟಿ ಕ್ರಾಂತಿಯ ಜನಕ ತಾವೇ ಎಂದು ಅವರು ಹೇಳಿಕೊಂಡಿದ್ದು, 'ಮಿರ್ಜಾಪುರ್', 'ಸೇಕ್ರೆಡ್ ಗೇಮ್ಸ್'ನಂತಹ ಹಿಟ್ ಸೀರಿಸ್‌ಗಳನ್ನು ಉಲ್ಲೇಖಿಸಿದ್ದಾರೆ. ಹೊಸ ಹೀರೋಗಳ ಅಹಂಕಾರದ ಬಗ್ಗೆ ಹಾಸ್ಯಭರಿತವಾಗಿ ಪಂಕಜ್ ತ್ರಿಪಾಠಿ ಚುಚ್ಚಿದರು. ಅವರ ಈ ಹೇಳಿಕೆ ಹಿಂದೆ ಹಲವು ಆಯಾಮಗಳಿವೆ.

ನನ್ನನ್ನು ಗಂಭೀರವಾಗಿ ಸ್ವೀಕರಿಸಿ; ಕೋರಿಕೊಂಡ ಪಂಕಜ್ ತ್ರಿಪಾಠಿ
ಪಂಕಜ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Dec 09, 2025 | 8:13 AM

Share

ಪಂಕಜ್ ತ್ರಿಪಾಠಿ (Pankaj Tripathi) ಓರ್ವ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಟಿಟಿಯಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಾಸ್ಯದ ರೀತಿಯಲ್ಲಿ ಒಂದು ಗಂಭೀರ ವಿಷಯ ಹೇಳಿದ್ದಾರೆ. ‘ನನ್ನನ್ನು ಗಂಭೀರವಾಗಿ ಸ್ವೀಕರಿಸಿ’ ಎಂದು ಅವರು ಕೋರಿಕೊಂಡಿದ್ದಾರೆ. ಅಷ್ಟಕ್ಕೂ ಈ ಸ್ಥಿತಿ ಬಂದಿದ್ದು ಏಕೆ? ಆ ಬಗ್ಗೆ ಇಲ್ಲಿದೆ ವಿವರ.

ಇಂದು ಒಟಿಟಿಯಲ್ಲಿ ಸಾಕಷ್ಟು ಕ್ರಾಂತಿ ಆಗಿದೆ. ಅನೇಕ ಹೀರೋಗಳು ನಿರ್ದೇಶಕರು ಹುಟ್ಟಿಕೊಂಡಿದ್ದಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಒಟಿಟಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಒಟಿಟಿ ಕ್ರಾಂತಿ ಆಗಿದ್ದು ಕೊವಿಡ್ ಬಳಿಕ. ಭಾರತದಲ್ಲಿ ಒಟಿಟಿ ಜನಕ ತಾವು ಎಂಬುದು ಪಂಕಜ್ ಅವರ ಅಭಿಪ್ರಾಯ.

‘ಅಮೇಜಾನ್ ಪ್ರೆಮ್​ನಲ್ಲಿ ಬಂದ ಮೊದಲ ವೆಬ್ ಸೀರಿಸ್ ಮಿರ್ಜಾಪುರ್ ನನ್ನದೆ. ನೆಟ್​​ಫ್ಲಿಕ್ಸ್​ನಲ್ಲಿ ಬಂದ ಇಂಡಿಯಾದ ಸೀರಿಸ್​ಗಳಲ್ಲಿ ಸೇಕ್ರೇಡ್ ಗೇಮ್ಸ್, ಅದು ಕೂಡ ನನ್ನದೇ. ಹಾಟ್​ಸ್ಟಾರ್​ನಲ್ಲಿ ಬಂದ ಕ್ರಿಮಿನಲ್ ಜಸ್ಟಿಸ್ ಕೂಡ ನನ್ನದೆ’ ಎಂದು ಪಂಕಜ್ ತ್ರಿಪಾಠಿ ಅವರು ಹೇಳಿದರು. ಈ ವೇಳೆ ಅವರು ತಮ್ಮನ್ನು ಗಂಭೀರವಾಗಿ ಸ್ವೀಕರಿಸಬೇಕು ಎಂದು ಮನವಿ ಮಾಡಿಕೊಂಡರು. ಅನೇಕರು ಇದನ್ನು ಫನ್ ಆಗಿಯೇ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಸಾಕಷ್ಟು ವೆಬ್ ಸೀರಿಸ್​ಗಳು ಬರುತ್ತಿವೆ. ಹಲವು ಸೀರಿಸ್​ಗಳು ಬಂದು ಹಿಟ್ ಕೂಡ ಆಗಿವೆ. ಆ ಬಳಿಕ ಆ ನಿರ್ದೇಶಕರು ಹಾಗೂ ಹೀರೋಗಳನ್ನು ಹಿಡಿಯೋಕೆ ಸಾಧ್ಯವಿಲ್ಲ ಎಂಬಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಅವರು ಈ ರೀತಿ ಹೇಳಿರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಇದ್ದಿದ್ದರೆ ರೈತನಾಗುತ್ತಿದ್ದ ಪಂಕಜ್ ತ್ರಿಪಾಠಿ; ಆದರೆ ಅಲ್ಲಾಗಿದ್ದೇ ಬೇರೆ

ಪಂಕಜ್ ತ್ರಿಪಾಠಿ ಅವರು ಕನ್ನಡದಲ್ಲೂ ನಟಿಸಿದ್ದರು. ಶಿವರಾಜ್​ಕುಮಾರ್ ನಟನೆಯ ‘ಚಿಗುರಿದ ಕನಸು’ ಸಿನಿಮಾದಲ್ಲಿ ಪಂಕಜ್ ಅಭಿನಯಿಸಿದ್ದರು. ಪಂಕಜ್ ಅವರು ನಟನೆ ಕಲಿತಿದ್ದು ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ದಲ್ಲಿ. ಅವರು ಇದರಲ್ಲಿ ನಟನಾ ಶಿಕ್ಷಣ ಪಡೆಯುತ್ತಿರುವಾಗಲ ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರ ಮಾಡಿದ್ದರು. ಅದರಲ್ಲಿ ‘ಚಿಗುರಿದ ಕನಸು’ ಕೂಡ ಒಂದು. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಗೆಳೆಯನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:11 am, Tue, 9 December 25