‘ಪರಮ ಸುಂದರಿ’ ಚಿತ್ರದಲ್ಲಿ ಇದೆಂಥಾ ತಪ್ಪು; ಇದನ್ನು ಕ್ಷಮಿಸಲು ಸಾಧ್ಯವೇ ಇಲ್ಲ
ಹಿಂದಿ ಚಿತ್ರ ‘ಪರಮ ಸುಂದರಿ’ ದಕ್ಷಿಣ ಭಾರತದ ಸಂಸ್ಕೃತಿಯನ್ನು ತಪ್ಪಾಗಿ ಚಿತ್ರಿಸಿ ವಿವಾದಕ್ಕೆ ಸಿಲುಕಿದೆ. ಜಾನ್ವಿ ಕಪೂರ್ ಅನ್ನ ಬಡಿಸಲು ಉಪ್ಪಿನಕಾಯಿ ಪಾತ್ರೆ ಬಳಸಿದ ದೃಶ್ಯ ಟ್ರೋಲ್‌ಗೆ ಗುರಿಯಾಗಿದೆ. ಸಂಸ್ಕೃತಿಯ ಬಗ್ಗೆ ಅಧ್ಯಯನವಿಲ್ಲದೆ ಮಾಡಿದ ಈ ಸಿನಿಮಾ ಕೇರಳದಲ್ಲಿ ಪ್ರತಿಭಟನೆ ಎದುರಿಸಿ, ಗಲ್ಲಾಪೆಟ್ಟಿಗೆಯಲ್ಲಿಯೂ ಸೋತಿದೆ.

ಒಂದು ಜಾಗದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ, ಅಲ್ಲಿನ ಸಂಸ್ಕೃತಿ ವಿಚಾರವನ್ನು ಹೇಳಲಾಗುತ್ತಿದೆ ಎಂದಾಗ ಅದರ ಬಗ್ಗೆ ಒಂದಷ್ಟು ಅಧ್ಯಯನ ಬೇಕೇ ಬೇಕು. ಇಲ್ಲವಾದಲ್ಲಿ ಆ ಭಾಗದ ಜನರಿಂದ ಸಾಕಷ್ಟು ಟೀಕೆಗೆ ಒಳಗಾಗಬೇಕಾಗುತ್ತದೆ. ಹಿಂದಿಯ ‘ಪರಮ ಸುಂದರಿ’ ಸಿನಿಮಾ ಕೂಡ ಇದೇ ರೀತಿ ಟೀಕೆಗೆ ಒಳಗಾಗಿದೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಸಿನಿಮಾದಲ್ಲಿ ನಡೆದ ದೊಡ್ಡ ತಪ್ಪೊಂದು ಎದ್ದು ಕಾಣಿಸಿದೆ.
‘ಚೆನ್ನೈ ಎಕ್ಸ್ಪ್ರೆಸ್’, ‘2 ಸ್ಟೇಟ್ಸ್’ ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ದಕ್ಷಿಣ ಭಾರತದ ಸಂಸ್ಕೃತಿಯನ್ನು ತೋರಿಸುವ ಪ್ರಯತ್ನ ನಡೆದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ಈ ಚಿತ್ರಗಳಲ್ಲಿ ಅಂತಹ ತಪ್ಪುಗಳು ಏನು ನಡೆದಿರಲಿಲ್ಲ. ಆದರೆ, ‘ಪರಮ ಸುಂದರಿ’ ಸಿನಿಮಾ ಇದಕ್ಕೆ ಭಿನ್ನ. ಈ ಸಿನಿಮಾದಲ್ಲಿ ಭಾಷೆಗೆ ಅವಮಾನ ಆಗಿದೆ ಎಂದು ಕೇರಳದವರು ಪ್ರತಿಭಟನೆ ಮಾಡಿದ್ದು ನಿಮಗೆ ನೆಪಿರಬಹುದು. ಈಗ ‘ಪರಮ ಸುಂದರಿ’ ಸಿನಿಮಾದ ಮತ್ತೊಂದು ತಪ್ಪು ಕಾಣಿಸಿದೆ.
View this post on Instagram
‘ಪರಮ ಸುಂದರಿ’ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ಇದರಲ್ಲಿ ಕಥಾ ನಾಯಕಿ ಜಾನ್ವಿ ಕಪೂರ್ ಅವರು ಅನ್ನ ಬಡಿಸಲು ತೆರಳುತ್ತಾರೆ. ಈ ವೇಳೆ ಅವರು ಹಿಡಿದುಕೊಂಡ ಪಾತ್ರೆ ಟೀಕೆಗೆ ಒಳಗಾಗುವ ರೀತಿಯಲ್ಲಿ ಇದೆ. ಅನ್ನವನ್ನು ಯಾವಾಗಲೂ ದೊಡ್ಡ ಪಾತ್ರೆಯಲ್ಲಿ ಬಡಿಸಲಾಗುತ್ತದೆ. ಆದರೆ, ಜಾನ್ವಿ ಮಾತ್ರ ಉಪ್ಪು ಹಾಗೂ ಉಪ್ಪಿನಕಾಯಿ ಬಡಿಸೋ ಪಾತ್ರೆವನ್ನು ಅನ್ನ ಬಡಿಸಲು ಬಳಕೆ ಮಾಡಿದ್ದರು. ಇದು ಟ್ರೋಲಿಗರಿಗೆ ಆಹಾರ ಆಗಿದೆ.
ಇದನ್ನೂ ಓದಿ: ಜಾನ್ಹವಿ ಕಪೂರ್ ಗೆ ಸಿಕ್ಕಿತಾ ಗೆಲುವು ‘ಪರಮ ಸುಂದರಿ’ ಗಳಿಸಿದ್ದೆಷ್ಟು?
‘ಪರಮ ಸುಂದರಿ’ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ನಾಯಕಿ ಪಾತ್ರ ಮಾಡಿದ್ದಾರೆ. ಕಥಾ ನಾಯಕಿಯನ್ನು ಹುಡುಕಿ ಕಥಾ ನಾಯಕ ಕೇರಳಕ್ಕೆ ಬರುತ್ತಾನೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ನಂತರ ಏನಾಗುತ್ತದೆ ಎಂಬುದು ಸಿನಿಮಾದ ಕಥೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಕೇವಲ 50 ಕೋಟಿ ರೂಪಾಯಿ. ಇದು ಸಿನಿಮಾದ ಸೋಲನ್ನು ತೋರಿಸುತ್ತದೆ. ಚಿತ್ರದ ಬಜೆಟ್ 50 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಜಾನ್ವಿ ಅವರು ತೆಲುಗು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ‘ದೇವರ’ ಬಳಿಕ ರಾಮ್ ಚರಣ್ ಜೊತೆ ‘ಪೆದ್ದಿ’ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



