‘ಪಠಾಣ್​’ ಚಿತ್ರದಲ್ಲಿರಲ್ಲ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ದೃಶ್ಯ; ಕತ್ತರಿ ಹಾಕಿಸಿದ ಶಾರುಖ್​

| Updated By: ರಾಜೇಶ್ ದುಗ್ಗುಮನೆ

Updated on: Jan 05, 2023 | 10:50 AM

Pathan Movie Controversy: ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದರು. ಈ ದೃಶ್ಯ ತೆಗೆಯಲಾಗಿದೆ. ಇದಲ್ಲದೆ ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡ ಇನ್ನೂ ಕೆಲ ದೃಶ್ಯಗಳಿಗೆ ಶಾರುಖ್ ಕತ್ತರಿ ಹಾಕಿದ್ದಾರೆ.

‘ಪಠಾಣ್​’ ಚಿತ್ರದಲ್ಲಿರಲ್ಲ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ದೃಶ್ಯ; ಕತ್ತರಿ ಹಾಕಿಸಿದ ಶಾರುಖ್​
ಶಾರುಖ್​-ದೀಪಿಕಾ
Follow us on

ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿ, ‘ಬೇಷರಂ ರಂಗ್​..’ (ನಾಚಿಕೆ ಇಲ್ಲದ ಬಣ್ಣ) ಎಂದು ಹೇಳಿದ್ದು ಈ ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ. ಅಚ್ಚರಿಯ ವಿಷಯ ಎಂದರೆ ‘ಪಠಾಣ್​’ ಚಿತ್ರದಲ್ಲಿ (Pathan Movie)  ಈ ದೃಶ್ಯ ಇರುವುದಿಲ್ಲವಂತೆ! ಶಾರುಖ್ ಖಾನ್ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸುದ್ದಿ ಆಗಿದೆ.

ಶಾರುಖ್ ಖಾನ್ ಅವರು ವಿವಾದದಿಂದ ದೂರ ಇರಲು ಬಯಸುತ್ತಾರೆ. ಆದರೆ, ವಿವಾದ ಅವರನ್ನು ಬಿಡುವುದಿಲ್ಲ. ಕಳೆದ ವರ್ಷ ಆರ್ಯನ್ ಖಾನ್ ಡ್ರಗ್ ಕೇಸ್​ನಲ್ಲಿ​ ಅರೆಸ್ಟ್​ ಆದಾಗ ಶಾರುಖ್ ಸಾಕಷ್ಟು ಸುದ್ದಿ ಆದರು. ಈಗ ‘ಪಠಾಣ್​’ ಚಿತ್ರದ ವಿವಾದದಿಂದ ಅವರು ಸುದ್ದಿ ಆಗುತ್ತಿದ್ದಾರೆ. ಇದನ್ನು ತಡೆಯಲು ಶಾರುಖ್ ತಾವೇ ಖುದ್ದು ಕೆಲ ದೃಶ್ಯಗಳಿ​ಗೆ ಕತ್ತರಿ ಹಾಕಿಸಿದ್ದಾರೆ.

‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದರು. ಈ ದೃಶ್ಯ ತೆಗೆಯಲಾಗಿದೆ. ಇದಲ್ಲದೆ ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡ ಇನ್ನೂ ಕೆಲ ದೃಶ್ಯಗಳಿಗೆ ಶಾರುಖ್ ಕತ್ತರಿ ಹಾಕಿದ್ದಾರೆ. ಒಟ್ಟಾರೆ ‘ಬೇಷರಂ ರಂಗ್​..’ ಹಾಡಿನ ಒಟ್ಟಾರೆ ಒಂದು ನಿಮಿಷ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ಇದರಿಂದ ವಿವಾದ ತಣ್ಣಗಾಗಲೂ ಬಹುದು.

ಇದನ್ನೂ ಓದಿ
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಬಾಲಿವುಡ್​ನ ಹಲವು ಸಿನಿಮಾಗಳು ಬೈಕಾಟ್ ಟ್ರೆಂಡ್​ಗೆ ತುತ್ತಾಗಿವೆ. ಆ ಸಾಲಿನಲ್ಲಿ ‘ಪಠಾಣ್​’ ಸಿನಿಮಾ ಕೂಡ ಇದೆ. ಇದರಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿದ ದೃಶ್ಯವನ್ನು ಕತ್ತರಿಸಿ ತೆಗೆದಿದ್ದರ ಹಿಂದೆ ಇದೇ ಕಾರಣ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Shah Rukh Khan: ನಿಗದಿತ ದಿನದಂದೇ ರಿಲೀಸ್ ಆಗಲಿದೆ ‘ಪಠಾಣ್​’; ಅಡ್ವಾನ್ಸ್ ಬುಕಿಂಗ್ ಆರಂಭಕ್ಕೆ ದಿನಾಂಕ ಫಿಕ್ಸ್

‘ಪಠಾಣ್​’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶಾರುಖ್ ನಾಲ್ಕು ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿರುವುದರಿಂದ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇದೆ. ಈ ಚಿತ್ರದ ಟೈಟಲ್ ವಿಚಾರವಾಗಿಯೂ ಕೆಲವರು ಅಪಸ್ವರ ತೆಗೆದಿದ್ದರು. ‘ಪಠಾಣ್​’ ಟೈಟಲ್​ನಿಂದ ಪಠಾಣ್ ಸಮುದಾಯದವರಿಗೆ ಅವಮಾನ ಮಾಡಿದಂತಾಗುತ್ತಿದೆ ಎಂದು ಕೆಲವರು ದೂರಿದ್ದರು. ಆದರೆ, ಟೈಟಲ್ ಬದಲಾವಣೆ ಮಾಡದೆ ಇರಲು ತಂಡ ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ