ಬಾಲಿವುಡ್ ಮತ್ತು ಸೌತ್ ಸಿನಿಮಾ ಎಂಬ ಪೈಪೋಟಿ ಏನೇ ಇರಬಹುದು. ಆದರೆ ಹಿಂದಿ ಚಿತ್ರರಂಗದ ಸ್ಟಾರ್ ನಟರು ದಕ್ಷಿಣದ ಹೀರೋಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ರಾಮ್ ಚರಣ್ ಮತ್ತು ಶಾರುಖ್ ಖಾನ್ (Shah Rukh Khan) ನಡುವಿನ ಸ್ನೇಹ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರಾಮ್ ಚರಣ್ (Ram Charan) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್ ಅವರು ಆತ್ಮೀಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಈ ಮಾತಿನ ಮಧ್ಯೆ ಆಸ್ಕರ್ ಪ್ರಶಸ್ತಿ (Oscar 2023) ವಿಚಾರ ಪ್ರಸ್ತಾಪ ಆಗಿದೆ!
ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಪ್ರಶಸ್ತಿ ಪಡೆಯಲು ಹಣಾಹಣಿ ನಡೆಸುತ್ತಿದೆ. ಖಂಡಿತವಾಗಿಯೂ ಈ ಚಿತ್ರಕ್ಕೆ ಆಸ್ಕರ್ ಒಲಿಯಲಿದೆ ಎಂಬ ಭರವಸೆ ಶಾರುಖ್ ಖಾನ್ ಅವರಿಗೆ ಇದೆ. ಅದೇ ನಂಬಿಕೆ ಮೇಲೆ ಅವರು ಟ್ವೀಟ್ ಮಾಡಿದ್ದಾರೆ. ‘ಆಸ್ಕರ್ ಪ್ರಶಸ್ತಿಯನ್ನು ಆರ್ಆರ್ಆರ್ ಚಿತ್ರತಂಡ ಭಾರತಕ್ಕೆ ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್’ ಎಂದು ಶಾರುಖ್ ಖಾನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Oscar 2023: ಆಸ್ಕರ್ ಪ್ರಶಸ್ತಿ ಕಣದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಖುಷಿ ಸುದ್ದಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ
ಶಾರುಖ್ ಖಾನ್ ಅವರು ಈ ಮಾತಿಗೆ ಪ್ರತಿಕ್ರಿಯಿಸಿರುವ ರಾಮ್ ಚರಣ್ ಅವರು, ‘ಖಂಡಿತವಾಗಿಯೂ ಶಾರುಖ್ ಸರ್. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು’ ಎಂದು ಟ್ವೀಟ್ ಮಾಡಿದ್ದಾರೆ. ಈ ನಟರಿಬ್ಬರ ನಡುವಿನ ಈ ಟ್ವಿಟರ್ ಮಾತುಕಥೆ ವೈರಲ್ ಆಗಿದೆ. ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಸ್ನೇಹವನ್ನು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.
Thank u so much my Mega Power Star @alwaysramcharan. When ur RRR team brings Oscar to India, please let me touch it!!
(Mee RRR team Oscar ni intiki tecchinappudu okkasaari nannu daanini touch cheyyanivvandi! )
Love you.— Shah Rukh Khan (@iamsrk) January 10, 2023
‘ಇಡೀ ಪಠಾಣ್ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ. ಹಿಂದೆಂದೂ ಕಾಣದ ರೀತಿಯಲ್ಲಿ ಶಾರುಖ್ ಖಾನ್ ಅವರನ್ನು ಸಾಹಸ ದೃಶ್ಯಗಳಲ್ಲಿ ನೋಡಲು ಕಾದಿದ್ದೇನೆ’ ಎಂದು ಟ್ವೀಟ್ ಮಾಡಿರುವ ರಾಮ್ ಚರಣ್ ಅವರು ‘ಪಠಾಣ್’ ಟ್ರೇಲರ್ ಹಂಚಿಕೊಂಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.
ಇದನ್ನೂ ಓದಿ: RRR: ಆಸ್ಕರ್ ಪ್ರಶಸ್ತಿ ಪಡೆಯುತ್ತಾ ‘ಆರ್ಆರ್ಆರ್’ ಸಿನಿಮಾ? ಜಾಗತಿಕ ಮಟ್ಟದಲ್ಲಿ ರಾಜಮೌಳಿ ಚಿತ್ರದ ಬಗ್ಗೆ ಚರ್ಚೆ
ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ಗೆ ಜೋಡಿಯಾಗಿ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಜಾನ್ ಅಬ್ರಾಹಂ ಅವರು ಅಬ್ಬರಿಸಲಿದ್ದಾರೆ. ವಿವಿಧ ದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.