Pooja Hegde: ಪೂಜಾ ಹೆಗ್ಡೆಗೆ ನಿರ್ಮಾಪಕರು ಕಾರು ಕೊಡಿಸಿದ್ದು ನಿಜವೇ? ಮೌನ ಮುರಿದ ಬಹುಬೇಡಿಕೆಯ ನಟಿ

|

Updated on: Apr 16, 2023 | 7:56 AM

Kisi Ka Bhai Kisi Ki Jaan: ಬಾಲಿವುಡ್​ ಮತ್ತು ದಕ್ಷಿಣ ಭಾರತದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಬಗ್ಗೆ ಹಲವಾರು ಗಾಸಿಪ್​ಗಳು ಪ್ರಕಟ ಆಗುತ್ತಿವೆ.

Pooja Hegde: ಪೂಜಾ ಹೆಗ್ಡೆಗೆ ನಿರ್ಮಾಪಕರು ಕಾರು ಕೊಡಿಸಿದ್ದು ನಿಜವೇ? ಮೌನ ಮುರಿದ ಬಹುಬೇಡಿಕೆಯ ನಟಿ
ಪೂಜಾ ಹೆಗ್ಡೆ
Follow us on

​ಪ್ರಚಲಿತದಲ್ಲಿ ಇರುವ ಹೀರೋಯಿನ್​ಗಳ ಬಗ್ಗೆ ಒಂದಿಲ್ಲ ಒಂದು ಗಾಸಿಪ್​ ಕೇಳಿಬರುತ್ತಲೇ ಇರುತ್ತದೆ. ಲವ್​, ಡೇಟಿಂಗ್​, ಸಂಭಾವನೆ ಇತ್ಯಾದಿ ವಿಷಯಗಳ ಬಗ್ಗೆ ಅಂತೆ-ಕಂತೆಗಳು ಹಬ್ಬಿರುತ್ತವೆ. ನಟಿ ಪೂಜಾ ಹೆಗ್ಡೆ (Pooja Hegde) ವಿಚಾರದಲ್ಲೂ ಹಾಗೆಯೇ ಆಗಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳನ್ನು ಹಬ್ಬಿಸಲಾಗಿದೆ. ಈಗ ಅವುಗಳಿಗೆಲ್ಲ ಅವರು ಸ್ಪಷ್ಟನೆ ನೀಡುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಸಲ್ಮಾನ್​ ಖಾನ್​ ಜೊತೆಯಾಗಿ ನಟಿಸಿದ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈದ್​ ಪ್ರಯುಕ್ತ ಏಪ್ರಿಲ್​ 21ರಂದು ಈ ಚಿತ್ರ ತೆರೆಕಾಣಲಿದೆ. ಆ ಸಲುವಾಗಿ ಅನೇಕ ಮಾಧ್ಯಮಗಳಿಗೆ ಪೂಜಾ ಹೆಗ್ಡೆ ಸಂದರ್ಶನ ನೀಡಿದ್ದಾರೆ. ತಮಗೆ ನಿರ್ಮಾಪಕರೊಬ್ಬರಿಂದ ಕಾರು ಉಡುಗೊರೆಯಾಗಿ ಸಿಕ್ಕಿದೆ ಎಂಬ ಗಾಸಿಪ್​ (Gossip) ಬಗ್ಗೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟ-ನಟಿಯರ ಕೆಲಸ ಬಹಳ ಮೆಚ್ಚುಗೆ ಆದಾಗ ಅವರಿಗೆ ನಿರ್ಮಾಪಕರು ದುಬಾರಿ ಬೆಲೆಯ ಗಿಫ್ಟ್​ ನೀಡುತ್ತಾರೆ. ಅದೇ ರೀತಿ ಪೂಜಾ ಹೆಗ್ಡೆ ಅವರಿಗೆ ನಿರ್ಮಾಪಕರು ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಗಾಸಿಪ್​ ಹಬ್ಬಿತ್ತು. ಆದರೆ ಅದು ನಿಜವಲ್ಲ ಎಂದು ‘ಬಾಲಿವುಡ್​ ಬಬಲ್​’ಗೆ ನೀಡಿದ ಸಂದರ್ಶನದಲ್ಲಿ ಪೂಜಾ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ: Pooja Hegde: ‘ನಾನು ಸಿಂಗಲ್​’; ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಪೂಜಾ ಹೆಗ್ಡೆ

ಇದನ್ನೂ ಓದಿ
Pooja Hegde: ನ್ಯೂಯಾರ್ಕ್​​ನಲ್ಲಿ ಪೂಜಾ ಹೆಗ್ಡೆ ಮಸ್ತಿ; ಇಲ್ಲಿವೆ ಫೋಟೋಗಳು
Pooja Hegde: ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ; ಕ್ಷಮೆ ಕೇಳಿದ ಸಂಸ್ಥೆ
JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ
ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?

‘ನಾನು ಇಂಥ ಗಾಸಿಪ್​ಗಳನ್ನೆಲ್ಲ ಓದುತ್ತಾ ಇರುತ್ತೇನೆ. ನನ್ನ ಪಾಲಕರು ಅದನ್ನು ನನಗೆ ಕಳಿಸುತ್ತಾರೆ. ಇದೆಲ್ಲ ನಿಜವೇ ಎಂದು ಪ್ರಶ್ನಿಸುತ್ತಾರೆ. ನನ್ನನ್ನು ಕಂಫರ್ಟ್​ ಆಗಿಡಲು ನಿರ್ಮಾಪಕರೊಬ್ಬರು ಕಾರು ಗಿಫ್ಟ್​ ನೀಡಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಪ್ರಕಟ ಆಗಿತ್ತು. ಅದರ ಸ್ಕ್ರೀನ್​ ಶಾಟ್​ ಅನ್ನು ನಾನು ನಿರ್ಮಾಪಕರಿಗೆ ಕಳಿಸಿದೆ. ನನಗೆ ನೀವು ಕೊಡಬೇಕು ಎಂದುಕೊಂಡಿದ್ದ ಸರ್ಪ್ರೈಸ್​ ಹಾಳಾಗಿದೆ ಅಂತ ಅವರಿಗೆ ಹೇಳಿದೆ. ಹೀಗೆ ಅಪಪ್ರಚಾರ ಮಾಡುವುದೇ ಹೌದಾದರೆ ಕಡೇಪಕ್ಷ ನನಗೆ ಆ ಕಾರನ್ನಾದರೂ ಕೊಡಿ’ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ: Pooja Hegde: ಬಹುಭಾಷಾ ನಟಿ ಪೂಜಾ ಹೆಗ್ಡೆ ಹೊಸ ಲುಕ್​​ ಹೇಗಿದೆ ನೋಡಿ

ಬಾಲಿವುಡ್​ ಮತ್ತು ದಕ್ಷಿಣ ಭಾರತದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಇತ್ತೀಚೆಗೆ ಅವರು ನಟಿಸಿದ ಯಾವ ಸಿನಿಮಾಗಳೂ ಗೆಲ್ಲುತ್ತಿಲ್ಲ. ಪ್ರಭಾಸ್​ ಜೊತೆ ನಟಿಸಿದ ‘ರಾಧೆ ಶ್ಯಾಮ್​’, ರಣವೀರ್​ ಸಿಂಗ್​ ಜೊತೆ ನಟಿಸಿದ ‘ಸರ್ಕಸ್​’ ಮುಂತಾದ ಚಿತ್ರಗಳು ಸೋತವು. ಹಾಗಿದ್ದರೂ ಪೂಜಾ ಹೆಗ್ಡೆಗೆ ಅವಕಾಶಗಳು ಕಡಿಮೆ ಆಗಿಲ್ಲ.

ಇದನ್ನೂ ಓದಿ: Pooja Hegde: ‘ಬಜರಂಗಿ ಭಾಯಿಜಾನ್​’ ಚಿತ್ರದ ಸೀಕ್ವೆಲ್​ನಲ್ಲಿ ಕರೀನಾ ಕಪೂರ್​ ಖಾನ್​ ಬದಲಿಗೆ ಪೂಜಾ ಹೆಗ್ಡೆ?

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರೇಕ್ಷಕರನ್ನೂ ಸೆಳೆಯುವ ಪ್ರಯತ್ನ ಆಗಿದೆ. ತೆಲುಗಿನ ಸ್ಟಾರ್​ ನಟ ದಗ್ಗುಬಾಟಿ ವೆಂಕಟೇಶ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ, ಜಗಪತಿ ಬಾಬು ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ. ತೆಲುಗು ಹುಡುಗಿ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ‘ಯೆಂಟಮ್ಮಾ..’ ಹಾಡಿನಲ್ಲಿ ರಾಮ್​ ಚರಣ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.