ದೀಪಿಕಾ ಪತಿ ರಣ್ವೀರ್ ವಿರುದ್ಧ ಸೇಡಿಗೆ ಮುಂದಾದ ಪ್ರಿಯಾಂಕಾ, ಏಕೆ ಗೊತ್ತಾ?
ನಟಿ ಪ್ರಿಯಾಂಕಾ ಚೋಪ್ರಾ ದೀಪಿಕಾ ಪತಿ ರಣವೀರ್ ಸಿಂಗ್ ವಿರುದ್ಧ ಜಿದ್ದಿಗೆ ಬಿದ್ದಿದ್ದಾರಂತೆ. ಸೇಡು ತೀರಿಸಿಕೊಳ್ಳೋಕೆ ಹಪಹಪಿಸುತ್ತಿದ್ದಾರಂತೆ. ಇದಕ್ಕೆಲ್ಲಾ ಕಾರಣ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಈ ಸೇಡಿನ ಕಥೆ ನಿಜ ಜೀವನದಲ್ಲಲ್ಲ: ಹೌದು ಈ ಸೇಡಿನ ಕಥೆ ನಿಜ ಜೀವನದಲ್ಲಲ್ಲ. ಬದಲಾಗಿ ಸಿನಿಮಾ ಕಥೆ. ಬಿಟೌನ್ನ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇಡಿನ ಪ್ರೇಮ ಕಥೆಯೊಂದನ್ನ ಬರೆದಿದ್ದಾರಂತೆ. ಈಗಾಗ್ಲೆ ಬೈಜೂ ಬೌರಾ ಅನ್ನೋ ಚಿತ್ರದ ಶೀರ್ಷಿಯನ್ನೂ ರಿವೀಲ್ ಮಾಡಿದ್ದಾರೆ. ಈ ಚಿತ್ರಕ್ಕೆ ರಣ್ವೀರ್ ಮತ್ತು […]
ನಟಿ ಪ್ರಿಯಾಂಕಾ ಚೋಪ್ರಾ ದೀಪಿಕಾ ಪತಿ ರಣವೀರ್ ಸಿಂಗ್ ವಿರುದ್ಧ ಜಿದ್ದಿಗೆ ಬಿದ್ದಿದ್ದಾರಂತೆ. ಸೇಡು ತೀರಿಸಿಕೊಳ್ಳೋಕೆ ಹಪಹಪಿಸುತ್ತಿದ್ದಾರಂತೆ. ಇದಕ್ಕೆಲ್ಲಾ ಕಾರಣ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ.
ಈ ಸೇಡಿನ ಕಥೆ ನಿಜ ಜೀವನದಲ್ಲಲ್ಲ: ಹೌದು ಈ ಸೇಡಿನ ಕಥೆ ನಿಜ ಜೀವನದಲ್ಲಲ್ಲ. ಬದಲಾಗಿ ಸಿನಿಮಾ ಕಥೆ. ಬಿಟೌನ್ನ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇಡಿನ ಪ್ರೇಮ ಕಥೆಯೊಂದನ್ನ ಬರೆದಿದ್ದಾರಂತೆ. ಈಗಾಗ್ಲೆ ಬೈಜೂ ಬೌರಾ ಅನ್ನೋ ಚಿತ್ರದ ಶೀರ್ಷಿಯನ್ನೂ ರಿವೀಲ್ ಮಾಡಿದ್ದಾರೆ. ಈ ಚಿತ್ರಕ್ಕೆ ರಣ್ವೀರ್ ಮತ್ತು ಪ್ರಿಯಾಂಕಾರನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಹಾಲಿವುಡ್ಗೆ ಹಾರಿದ ಬಳಿಕಾ ಪಿಗ್ಗಿಯ ಬಾಲಿವುಡ್ ಸಿನಿಮಾಗಳು ಕಡಿಮೆ ಆಗಿವೆ. ಅದ್ರಲ್ಲೂ ನಿಕ್ ಕೈಹಿಡಿದ ಮೇಲಂತೂ ಪಿಗ್ಗಿ ಬಿಟೌನ್ ಮಂದಿಯ ಕೈಗೆ ಸಿಗ್ತಿಲ್ಲ. ಈ ವರ್ಷ ದಿ ಸ್ಕೈ ಈಸ್ ಪಿಂಕ್ ಚಿತ್ರದ ಮೂಲಕ ಒಂದು ಸಂದೇಶ ಬಿಟ್ರೆ ಬಹುತೇಕ ಬಾಲಿವುಡ್ ಸಿನಿಮಾಗಳನ್ನ ಪ್ರಿಯಾಂಕ ರಿಜೆಕ್ಟ್ ಮಾಡಿದ್ದಾರೆ. ಅದ್ರಲ್ಲಿ ಸಲ್ಮಾನ್ ಖಾನ್ ಅಭಿನಯದ ಭಾರತ್ ಕೂಡ ಒಂದು.
ಬನ್ಸಾಲಿ ಅಳೆದು ತೂಗಿ ಇವರನ್ನ ಆಯ್ಕೆ ಮಾಡಿದ್ದಾರೆ: ಸದ್ಯ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದ ನಂತ್ರ ಬನ್ಸಾಲಿ ಬೈಜೂ ಬೌರಾ ಸಿನಿಮಾವನ್ನ ಕೈತ್ತಿಕೊಳ್ಳಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಪ್ರೇಮ ಕಥೆಯ ಜೊತೆಗೆ ಸೇಡಿನ ತಿರುಳಿರೋ ಸಿನಿಮಾ. ಹಾಗಾಗಿ ಬನ್ಸಾಲಿ ಅಳೆದು ತೂಗಿ ಈ ಪ್ರೇಮಿಗಳನ್ನ ಆಯ್ಕೆ ಮಾಡಿದ್ದಾರೆ.
ಕೊನೆಯದಾಗಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರೋದು ಬನ್ಸಾಲಿ ನಿರ್ದೇಶನದ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ. ಈ ಚಿತ್ರಕ್ಕೂ ಸೈ ಅಂದ್ರೆ ಇದು ಪ್ರಿಯಾಂಕ ರಣ್ವೀರ್ ಜೋಡಿಯಾ ನಾಲ್ಕನೇ ಸಿನಿಮಾ ಆಗಲಿದೆ. ಬನ್ಸಾಲಿ ಚಿತ್ರಕ್ಕೆ ರಣ್ವೀರ್ ನೋ ಅನ್ನೋಕೆ ಚಾನ್ಸೇ ಇಲ್ಲ. ಅಧಿಕೃತವಾಗಿ ಈ ಚಿತ್ರಕ್ಕೆ ಪಿಗ್ಗಿ ಗ್ರೀನ್ ಸಿಗ್ನಲ್ ನೀಡಬೇಕಿದೆ.
Published On - 8:29 am, Fri, 1 November 19