
ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಟಾಲಿವುಡ್ನಲ್ಲಿ ಹಲವು ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಮಹೇಶ್ ಬಾಬು (Mahesh Babu) ಜೊತೆ ಕೈ ಜೋಡಿಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ಅವರಿಗೆ ಬಾಲಿವುಡ್ ನಿರ್ದೇಶಕರ ಮೇಲೆ ಮುನಿಸು ಬಂದಿದೆ ಎಂದು ವರದಿ ಆಗಿದೆ. ಅದು ಏಕೆ ಅಂತೀರಾ? ಅದಕ್ಕೂ ಉತ್ತರ ಇದೆ.
ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಫರ್ಫೆಕ್ಷನ್ ಹುಡುಕುತ್ತಾರೆ ಎಂದೇ ಹೇಳಬಹುದು. ಅವರ ಈ ಹಿಂದಿನ ಸಿನಿಮಾಗಳಲ್ಲಿ ಅದು ಸಾಬೀತಾಗಿದೆ. ಈ ಮೊದಲು ಅವರು ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ ಮತ್ತು ಅವುಗಳು ಉತ್ತಮ ಗುಣಮಟ್ಟದಲ್ಲಿ ಇವೆ. ಆದರೆ, ರಾಜಮೌಳಿ ಜೊತೆ ಕೆಲಸ ಮಾಡಿದ ಜೂನಿಯರ್ ಎನ್ಟಿಆರ್ಗೆ ಬಾಲಿವುಡ್ನಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿಲ್ಲ. ಇದು ರಾಜಮೌಳಿ ಬೇಸರಕ್ಕೆ ಕಾರಣ.
‘ವಾರ್ 2’ ಚಿತ್ರದಲ್ಲಿ ಕೆಲವು ಗ್ರಾಫಿಕ್ಸ್ಗಳು ತೀರಾ ಕಳಪೆ ಆಗಿ ಮೂಡಿ ಬಂದಿದೆ. ಇದು ರಾಜಮೌಳಿ ಬೇಸರಕ್ಕೆ ಕಾರಣ ಆಗಿದೆಯಂತೆ. ಅದರಲ್ಲೂ ಜೂನಿಯರ್ ಎನ್ಟಿಆರ್ ಅವರ ದೃಶ್ಯವೊಂದರ ವಿಎಫ್ಎಕ್ಸ್ ನೋಡಿ ಫ್ಯಾನ್ಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ದೃಶ್ಯದಿಂದ ರಾಜಮೌಳಿ ಕೂಡ ಅಸಮಾಧಾನಗೊಂಡಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಅಂದು ಹೇಳಿದ್ದು ನಿಜವಾಯ್ತು; ‘ವಾರ್ 2’ ಕಳಪೆ ವಿಮರ್ಶೆ ಬೆನ್ನಲ್ಲೇ ಹಳೆಯ ಹೇಳಿಕೆ ವೈರಲ್
‘ವಾರ್ 2’ ಚಿತ್ರದ ಗಳಿಕ 200 ಕೋಟಿ ರೂಪಾಯಿ ಸಮೀಪಿಸುತ್ತಿದೆ. ಆದರೆ, ಚಿತ್ರಕ್ಕೆ ಕಳಪೆ ವಿಮರ್ಶೆ ಸಿಕ್ಕಿದೆ. ಮೊದಲ ನಾಲ್ಕು ದಿನ ಮಾತ್ರ ಸಿನಿಮಾ ಅಬ್ಬರಿಸಿದೆ. ಈಗ ಚಿತ್ರವು ಒಂದಂಕಿ ಕಲೆಕ್ಷನ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಒಟ್ಟಾರೆ ಆಗಿ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಜೂನಿಯರ್ ಎನ್ಟಿಆರ್ ಅವರು ಬ್ರೇಕ್ನಲ್ಲಿ ಇದ್ದಾರೆ. ಅವರು ಶೀಘ್ರವೇ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಅದು ಕೂಡ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ. ಇದು ಕೂಡ ಬ್ಲಾಕ್ ಆ್ಯಂಡ್ ವೈಟ್ ಸ್ಟೈಲ್ನಲ್ಲಿ ಮೂಡಿ ಬಂದರೆ ಅಭಿಮಾನಿಗಳು ಸಿನಿಮಾನ ಒಪ್ಪಿಕೊಳ್ಳೋದು ಕಷ್ಟ ಇದೆ. ರಾಜಮೌಳಿ ಅವರು ‘ಎಸ್ಎಸ್ಎಂಬಿ 29’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನವೆಂಬರ್ನಲ್ಲಿ ಮೊದಲ ಅಪ್ಡೇಟ್ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.