ಕೃಷ್ಣಮೃಗ ಹತ್ಯೆ ಪ್ರಕರಣ; ಸಲ್ಮಾನ್ ಜೊತೆ ಸೈಫ್, ತಬುಗೂ ಶುರುವಾಯ್ತು ಭಯ  

1998ರ ಕೃಷ್ಣಮೃಗ ಹತ್ಯಾ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಲಾಗಿತ್ತು. ಆದರೆ, ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಈಗ ರಾಜಸ್ಥಾನ ಸರ್ಕಾರ ಈ ದೋಷಮುಕ್ತತೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 28ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಕೃಷ್ಣಮೃಗ ಹತ್ಯೆ ಪ್ರಕರಣ; ಸಲ್ಮಾನ್ ಜೊತೆ ಸೈಫ್, ತಬುಗೂ ಶುರುವಾಯ್ತು ಭಯ  
ತಬು-ಸಲ್ಮಾನ್-ಸೈಫ್

Updated on: May 21, 2025 | 2:58 PM

1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್ (Salman Khan) ಅಪರಾಧಿ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿದೆ. ಆ ಬಳಿಕ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಪ್ರಕರಣದಿಂದ ದೋಷಮುಕ್ತವಾಗಿದ್ದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಂಗೆ ಮತ್ತೆ ಕಂಟಕ ಶುರುವಾಗುವ ಸೂಚನೆ ಸಿಕ್ಕಿದೆ. ಇವರನ್ನು ಪ್ರಕರಣದಿಂದ ಕೈ ಬಿಟ್ಟ ವಿಚಾರದಲ್ಲಿ ರಾಜಸ್ಥಾನ ಸರ್ಕಾರ ಹೈಕೋರ್ಟ್ ಮೊರೆ ಹೋಗಿದೆ.

1998ರ ಅಕ್ಟೋಬರ್​ನಲ್ಲಿ ಸಲ್ಮಾನ್ ಖಾನ್, ಸೈಫ್, ತಬು, ಸೋನಾಲಿ ಬೇಂದ್ರ ಮೊದಲಾದವರು ‘ಹಮ್ ಸಾತ್ ಸಾತ್ ಹೇ’ ಚಿತ್ರೀಕರಣದ ಶೂಟ್​ಗೆ ಜೋಧ್​ಪುರ್​ ಸಮೀಪದ ಗ್ರಾಮ ಒಂದಕ್ಕೆ ತೆರಳಿದ್ದರು. ಶೂಟ್ ಪೂರ್ಣಗೊಂಡ ಬಳಿಕ ಸಲ್ಮಾನ್ ರಾತ್ರಿ ಬೇಟೆಗೆ ತೆರಳಿ ಕೃಷ್ಣಮೃಗ ಹತ್ಯೆ ಮಾಡಿದ್ದರು. ಈ ವೇಳೆ ಸಹಕಲಾವಿದರು ಜೊತೆಗಿದ್ದವರೂ ಸಾತ್ ನೀಡಿದ ಆರೋಪ ಇದೆ. ಈ ಪ್ರಕರಣದ ವಿಚಾರಣೆ ಬರೋಬ್ಬರಿ 20 ವರ್ಷಗಳ ಕಾಲ ನಡೆಯಿತು ಮತ್ತು 2018ರಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತು. ಈ ವೇಳೆ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಹಾಗೂ ನಿಲಂನ ನಿರಪರಾಧಿ ಎಂದು ಘೋಷಿಸಲಾಯಿತು.

ಈಗ ರಾಜಸ್ಥಾನ ಸರ್ಕಾರವು ಈ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದೆ. ಈ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಗಾರ್ಗ್​ ಅವರು ಜುಲೈ 28ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಿದ್ದಾರೆ. ಇದಾದ ಬಳಿಕ ಈ ಕಲಾವಿದರ ಭವಿಷ್ಯ ನಿರ್ಧಾರ ಆಗಲಿದೆ.

ಇದನ್ನೂ ಓದಿ
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ
3.5 ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ
ಹಿರಿಯ ನಟ ಪರೇಶ್ ರಾವಲ್ ವಿರುದ್ಧ ದೂರು, 25 ಕೋಟಿ ರೂ ಪರಿಹಾರಕ್ಕೆ ಒತ್ತಾಯ
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಇದನ್ನೂ ಓದಿ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೇಳೋದೇನು?

ದೂರು ದಾಖಲು ಮಾಡಿದ್ದು ಬಿಷ್ಣೋಯ್ ಕುಟುಂಬ

1998ರಲ್ಲಿ ಸಲ್ಮಾನ್ ಖಾನ್ ಅವರು ಎರಡು ಕೃಷ್ಣಮೃಗ ಹತ್ಯೆ ಮಾಡಿದ್ದರು. ಕೃಷ್ಣಮೃಗವನ್ನು ದೇವರು ಎಂದು ಆರಾಧಿಸುವ ಬಿಷ್ನೋಯ್ ಸಮುದಾಯಕ್ಕೆ ಈ ಘಟನೆ ತೀವ್ರ ನೋವು ತಂದಿತ್ತು. ಹೀಗಾಗಿ, ಇದೇ ಸಮುದಾಯದವರು ಸಲ್ಮಾನ್ ಹಾಗೂ ಇತರರ ವಿರುದ್ಧ ದೂರು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಸೈಫ್ ಹಾಗೂ ಮೊದಲಾದವರು ಕೈ ಬಿಟ್ಟ ಬಗ್ಗೆ ಅವರಿಗೆ ಬೇಸರ ಇದೆ.

ಕೊಲೆ ಬೆದರಿಕೆ

ಸಲ್ಮಾನ್ ಖಾನ್ ಅವರಿಗೆ ಸೆಷನ್ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಅವರು ಹೈಕೋರ್ಟ್​ಗೆ ಹೋಗಿ ಈ ಆದೇಶಕ್ಕೆ ತಡೆ ತಂದಿದ್ದರು. ಆದರೆ, ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರನ್ನು ಬೆಂಬಿಡದೆ ಕಾಡುತ್ತಿದ್ದಾರೆ. ಅವರಿಗೆ ಕೊಲೆ ಬೆದರಿಕೆಯೂ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us