Raju Srivastava Profile: ಕಿರುತೆರೆಯ ಜೊತೆ ರಾಜು ಶ್ರೀವಾಸ್ತವ ಅವರಿಗೆ ಒಳ್ಳೆಯ ನಂಟು ಬೆಳೆದಿತ್ತು. ಹಲವು ಶೋಗಳಲ್ಲಿ ಜನರನ್ನು ನಗಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.
ರಾಜು ಶ್ರೀವಾಸ್ತವ
Follow us on
ಸ್ಟ್ಯಾಂಡಪ್ ಕಾಮಿಡಿ ಲೋಕದಲ್ಲಿ ಸ್ಟಾರ್ ಆಗಿ ಮೆರೆದ ರಾಜು ಶ್ರೀವಾಸ್ತವ (Comedian Raju Srivastava) ಅವರು ಇನ್ನಿಲ್ಲ. ನೆಚ್ಚಿನ ಕಲಾವಿದನ ನಿಧನದಿಂದ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ರಾಜು ಶ್ರೀವಾಸ್ತವ ಅವರ ಅಗಲಿಕೆಗೆ ಸ್ನೇಹಿತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕುಟುಂಬದವರ ಅಳಲು ಮುಗಿಲು ಮುಟ್ಟಿದೆ. ಕಾಮಿಡಿ ಶೋಗಳ ಮೂಲಕ, ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸಿದ್ದ ರಾಜು ಶ್ರೀವಾಸ್ತವ (Raju Srivastava) ಅವರು ಮಧ್ಯದಲ್ಲೇ ಈ ರೀತಿ ಎಲ್ಲರಿಗೂ ಕಣ್ಣೀರು ಹಾಕಿಸಿ ಹೋಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. 58ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಆಗಸ್ಟ್ 10ರಂದು ಹೃದಯಾಘಾತ ಆದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ 41 ದಿನ ಚಿಕಿತ್ಸೆ ನೀಡಿದರೂ ಫಲಕಾರಿ ಆಗಿಲ್ಲ. ಅವರ ನಿಧನದಿಂದ (Raju Srivastava Death) ಭಾರತೀಯ ಚಿತ್ರರಂಗ ಬಡವಾಗಿದೆ. ಇಂಥ ಜನಮೆಚ್ಚಿದ ಕಲಾವಿದನ ಬದುಕಿನ ಹೆಜ್ಜೆ ಗುರುತುಗಳು ಇಲ್ಲಿವೆ..
80 ಹಾಗೂ 90ರ ದಶಕದಿಂದಲೂ ರಾಜು ಶ್ರೀವಾಸ್ತವ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವರು ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದರು.
‘ಮೈನೇ ಪ್ಯಾರ್ ಕಿಯಾ’, ‘ಬಾಜಿಗರ್’, ‘ಬಾಂಬೆ ಟು ಗೋವಾ’ ಮುಂತಾದ ಸಿನಿಮಾಗಳಲ್ಲಿ ರಾಜು ಶ್ರೀವಾಸ್ತವ ಅವರು ಚಿಕ್ಕ ಪಾತ್ರಗಳನ್ನು ಮಾಡಿದ್ದರು. ಬಳಿಕ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು.
ರಾಜು ಶ್ರೀವಾಸ್ತವ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಸ್ಟ್ಯಾಂಡಪ್ ಕಾಮಿಡಿ ಶೋ. 2005ರಲ್ಲಿ ಪ್ರಸಾರವಾದ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮೊದಲ ಸೀಸನ್ ಮೂಲಕ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದರು.
‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಶೋನಲ್ಲಿ ರಾಜು ಶ್ರೀವಾಸ್ತವ ಅವರು ಎರಡನೇ ರನ್ನರ್ಅಪ್ ಆಗಿದ್ದರು. ಅವರು ಶೋ ವಿನ್ ಆಗದಿದ್ದರೂ ಕೂಡ ಜನಮನ ಗೆಲ್ಲುವಲ್ಲಿ ಅವರ ಯಶಸ್ವಿಯಾದರು.
ಇದನ್ನೂ ಓದಿ
ಕಿರುತೆರೆಯ ಜೊತೆ ರಾಜು ಶ್ರೀವಾಸ್ತವ ಅವರಿಗೆ ಒಳ್ಳೆಯ ನಂಟು ಬೆಳೆದಿತ್ತು. ಹಲವು ಶೋಗಳಲ್ಲಿ ಜನರನ್ನು ನಗಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.
ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್, ಟೀ ಟೈಂ ಮನೋರಂಜನ್, ಕಾಮಿಡಿ ಸರ್ಕಸ್, ಲಾಫ್ ಇಂಡಿಯಾ ಲಾಫ್, ಕಾಮಿಡಿ ನೈಟ್ಸ್ ವಿಥ್ ಕಪಿಲ್, ದಿ ಕಪಿಲ್ ಶರ್ಮಾ ಶೋ, ಗ್ಯಾಂಗ್ಸ್ ಆಫ್ ಹಸೀಪುರ್ ಸೇರಿದಂತೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ರಾಜು ಶ್ರೀವಾಸ್ತವ ಭಾಗಿ ಆಗಿದ್ದರು.
2014ರಲ್ಲಿ ಸಮಾಜವಾದಿ ಪಕ್ಷದಿಂದ ರಾಜು ಶ್ರೀವಾಸ್ತವ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದರು. ಅದೇ ವರ್ಷ ಅವರು ಬಿಜೆಪಿ ಸೇರ್ಪಡೆಯಾದರು. ಸ್ವಚ್ಛ ಭಾರತ ಅಭಿಯಾನ ಪ್ರಚಾರಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದರು.