ಕೀನ್ಯಾದಲ್ಲಿ ಕಾಣಿಸಿಕೊಂಡ ‘ಬಾಜಿರಾವ್ ಮಸ್ತಾನಿ’ ಜೋಡಿ

Deepika-Ranveer: ಬಾಲಿವುಡ್​ನ ಸ್ಟಾರ್ ಕಪಲ್ ದೀಪಿಕಾ ಪಡಕೋಣೆಧರಣವೀರ್ ಸಿಂಗ್ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಕೀನ್ಯಾದಲ್ಲಿ ಫ್ಯಾನ್ಸ್ ಜೊತೆ ಫೋಸ್ ಕೊಡ್ತಾ ಇರೋ ಫೋಟೋ ಒಂದು ವೈರಲ್ ಆಗಿದೆ.

ಕೀನ್ಯಾದಲ್ಲಿ ಕಾಣಿಸಿಕೊಂಡ 'ಬಾಜಿರಾವ್ ಮಸ್ತಾನಿ' ಜೋಡಿ
ದೀಪಿಕಾ-ರಣ್ವೀರ್
Follow us
TV9 Web
| Updated By: ಮಂಜುನಾಥ ಸಿ.

Updated on: Aug 30, 2023 | 5:19 PM

ದೀಪಿಕಾ ಪಡುಕೋಣೆ (Deepika Padukone), ರಣವೀರ್ ಸಿಂಗ್ (Ranveer Singh) ಬಾಲಿವುಡ್​ನ (Bollywood) ಸ್ಟಾರ್ ಕಪಲ್. ಸದಾ ತಮ್ಮ ಪ್ರೇಮ್ ಕಹಾನಿಯಿಂದ ಸುದ್ದಿಯಲ್ಲಿರುವ ಜೋಡಿ ಸದ್ಯ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಜಿರಾವ್ ಮುಸ್ತಾನಿ’ ಜೋಡಿಯ ಕೀನ್ಯಾ ಪ್ರವಾಸದ ಫೋಟೋ ಭಾರಿ ವೈರಲ್ ಆಗಿದೆ. ದೀಪಿಕಾ, ರಣವೀರ್ ಇಬ್ಬರೂ ಫ್ಯಾನ್ಸ್ ಜೊತೆಗೆ ಫೋಟೋಕ್ಕೆ ಫೋಸ್ ಕೊಡುತ್ತಿದ್ದಾರೆ. ಈ ಫೋಟೊವನ್ನು ಸೋಶಿಯಲ್ ಮೀಡಿಯಾದ ಫ್ಯಾನ್ಸ್ ಪೇಜ್ ಒಂದು ವೈರಲ್ ಮಾಡಿದೆ. ಫೋಟೊದಲ್ಲಿ ಕಪ್ಪು ಬಣ್ಣದ ಉಡುಗೆಯಲ್ಲಿ ದೀಪ್-ವೀರ್ ಮಿಂಚಿದ್ದಾರೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಚಿತ್ರದ ಯಶಸ್ಸಿನ ನಂತರ ರಣವೀರ್ ಕುಟಂಬದೊಂದಿಗೆ ಸಮಯ ಕಳೆಯುತ್ತಿದ್ದು, ಕೀನ್ಯಾ ಪ್ರವಾಸದಲ್ಲಿದ್ದಾರೆ. ‘ಗೋಲಿಯೋನ್ ಕಿ ರಾಸಲೀಲಾ: ರಾಮ್- ಲೀಲಾ’ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರಿಗೂ ಪರಿಚಯವಾಗಿತ್ತು. ಬಳಿಕ ನವೆಂಬರ್ 14, 2018ರಲ್ಲಿ ಮದುವೆಯಾಗಿದ್ದಾರೆ. ಇತ್ತೀಚಿಗೆ ‘ಫ್ರೆಂಡ್ ಶಿಪ್ ಡೇ’ ಸಂದರ್ಭದಲ್ಲಿ ದೀಪಿಕಾ ರಣವೀರ್ ಸಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ನಡುವೆ ದೀಪಿಕಾ ಹಾಗೂ ರಣವೀರ್ ನಡುವೆ ಎಲ್ಲವೂ ಸರಿ ಇಲ್ಲ, ಸದ್ಯವೇ ಈ ಜೋಡಿ ವಿಚ್ಚೇದನ ಪಡೆಯುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕೆಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಈಗ ವಿದೇಶ ಪ್ರವಾಸ ಮಾಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ:‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ನೋಡುವಾಗ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಹೇಗಿತ್ತು?

ಸದ್ಯ ರಣವೀರ್ ಸಿಂಗ್, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ 336.21 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದಲ್ಲಿ ಆಲಿಯಾ ಬೆಂಗಾಲಿ ಮೂಲದ ಪತ್ರಕರ್ತೆಯಾಗಿ ಕಾಣಿಸಿಕೊಂಡರೆ, ರಣವೀರ್ ಸಿಂಗ್ ಪಕ್ಕಾ ಪಂಜಾಬಿ ಲುಕ್ ನಲ್ಲಿ ಮಿಂಚಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾದ ‘ತುಮ್ ಕ್ಯಾ ಮಿಲೆ’ ಹಾಡು ಉತ್ತಮ ಪ್ರತಿಕ್ರಿಯೆಗಳಿಸಿಕೊಂಡಿತ್ತು.

‘ಪಠಾಣ್’ಸಿನಿಮಾದ ನಂತರ ದೀಪಿಕಾ ‘ಕಲ್ಕಿ 2898 ಎಡಿ’ ಹಾಗೂ ‘ಫೈಟರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ದೊಡ್ಡ ತಾರಾಬಳಗವನ್ನೇ ಹೊಂದಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಪ್ರಭಾಸ್, ದೀಪಿಕಾ ಪಡಕೋಣೆ, ಅಮಿತಾಬ್ ಬಚ್ಚನ್, ದಿಶಾ ಪಟಾನಿ, ಕಮಲ್ ಹಾಸನ್, ದುಲ್ಕರ್ ಸಲ್ಮಾನ್ ಈ ಸಿನಿಮಾದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ