ನಟಿ ರೇಖಾ ಒಂಟಿ ಜೀವನ ನಡೆಸುತ್ತಿರೋದೇಕೆ? ನಡೆದಿತ್ತು ಎರಡು ಮದುವೆ?

ಬಾಲಿವುಡ್​ನ ಖ್ಯಾತ ನಟಿ ರೇಖಾ. ದಶಕಗಳ ಕಾಲ ಬಾಲಿವುಡ್​ ಅನ್ನು ಆಳಿದ ನಟಿ. ಬೆಳ್ಳಿತೆರೆಯಲ್ಲಿ ಮಿಂಚಿದ ರೇಖಾರ ಖಾಸಗಿ ಜೀವನ ಬಹುತೇಕ ಬಣ್ಣ ರಹಿತವಾಗಿಯೇ ಇದೆ. ರೇಖಾ ಪ್ರೇಮದಲ್ಲೂ ವಿಫಲವಾದರು, ದಾಂಪತ್ಯದಲ್ಲೂ ವಿಫಲವಾದರು. ಇಲ್ಲಿದೆ ಅವರ ಖಾಸಗಿ ಬದುಕಿನ ಕಹಾನಿ.

ನಟಿ ರೇಖಾ ಒಂಟಿ ಜೀವನ ನಡೆಸುತ್ತಿರೋದೇಕೆ? ನಡೆದಿತ್ತು ಎರಡು ಮದುವೆ?
Follow us
| Updated By: ಮಂಜುನಾಥ ಸಿ.

Updated on: Aug 14, 2024 | 11:46 AM

ಬಾಲಿವುಡ್‌ನ ಎವರ್ ಗ್ರೀನ್ ನಟಿ ರೇಖಾ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲವರಿಗೆ ಅವರ ಖಾಸಗಿ ಜೀವನದ ಬಗ್ಗೆ ತಿಳಿದಿದೆ. ಇಂದು ರೇಖಾ 69ರ ಹರೆಯದಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ರೇಖಾ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡ ಸಮಯವಿತ್ತು. ರೇಖಾ ಎರಡು ಬಾರಿ ವಿವಾಹವಾದರು. ಆದರೆ ಅವರು ತಮ್ಮ ವೈವಾಹಿಕ ಜೀವನವನ್ನು ಎಂದಿಗೂ ಆನಂದಿಸಲು ಸಾಧ್ಯವಾಗಲಿಲ್ಲ. ಮದುವೆಯ ನಂತರವೂ ರೇಖಾ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಎರಡು ವಿಫಲ ಮದುವೆಗಳ ನಂತರ ರೇಖಾ ಮದುವೆಯಾಗಲು ನಿರ್ಧರಿಸಲಿಲ್ಲ.

ರೇಖಾ ಅವರ ವೈವಾಹಿಕ ಜೀವನದ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು. ಮದುವೆಯಾದ 6 ತಿಂಗಳ ನಂತರ ರೇಖಾ ಅವರ ಪತಿ ಮುಖೇಶ್ ಅಗರ್ವಾಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಯಾದ ಆರು ತಿಂಗಳ ನಂತರ ಪತಿ ತೀರಿಕೊಂಡ ನಂತರ ರೇಖಾಗೆ ಅನೇಕರು ಕೆಟ್ಟ ಪದಗಳಲ್ಲಿ ಅವರನ್ನು ಟೀಕಿಸಿದ್ದರು.

ಕೊನೆಗೆ ರೇಖಾ ಸಂದರ್ಶನದ ಮೂಲಕ ನಡೆದ ಘಟನೆಯನ್ನು ಎಲ್ಲರಿಗೂ ತಿಳಿಸಿದ್ದರು. ಮುಖೇಶ್, ರೇಖಾ ಅವರಿಂದ ವಿಚ್ಛೇದನ ಬಯಸಿದ್ದರು. ರೇಖಾ ತನ್ನ ಪತಿಯಿಂದ ವಿಚ್ಛೇದನವನ್ನು ಕೇಳಲಿಲ್ಲ. ‘ಮದುವೆ ಬಳಿಕ ಪತಿ ಅಷ್ಟಾಗಿ ಉತ್ಸುಕರಾಗಿರಲಿಲ್ಲ. ಆದರೆ ನಾನು ಎಂದಿಗೂ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ’ ಎಂದಿದ್ದರು ರೇಖಾ. ‘ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಬಗೆಹರಿಸಲು ಸಾಧ್ಯವಾಗದಿದ್ದರೆ ಪ್ರತ್ಯೇಕತೆಯೇ ದಾರಿ ಲಂಡನ್‌ನಲ್ಲಿ ನಾವು ಹನಿಮೂನ್‌ಗೆ ಹೋಗಿದ್ದೆವು. ಆದರೆ ಆಗಲೇ ಮುಖೇಶ್ ಜೊತೆಗಿನ ಸಂಬಂಧದಲ್ಲಿ ವ್ಯತ್ಯಾಸ ಕಂಡಿದ್ದು’ ಎಂದು ರೇಖಾ ಕೂಡ ಹೇಳಿದ್ದರು.

ಇದನ್ನೂ ಓದಿ:ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಮಾಧ್ಯಮ ವರದಿಗಳ ಪ್ರಕಾರ, ರೇಖಾ ಎರಡು ಬಾರಿ ವಿವಾಹವಾದರು. ರೇಖಾ ಅವರು ದಿವಂಗತ ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಆದರೆ ವಿನೋದ್ ಮೆಹ್ರಾ ಮತ್ತು ರೇಖಾ ಅವರ ಸಂಬಂಧವನ್ನು ನಟನ ತಾಯಿ ಎಂದಿಗೂ ಒಪ್ಪಿಕೊಳ್ಳಲಿಲ್ಲ. ಅದರ ನಂತರ, ರೇಖಾ ಮದುವೆಯಾಗಲು ನಿರ್ಧರಿಸಲಿಲ್ಲ.

ವಿನೋದ್ ಮೆಹ್ರಾ ಮತ್ತು ರೇಖಾ ರಹಸ್ಯವಾಗಿ ವಿವಾಹವಾದರು. ಆದರೆ ಓಪನ್ ಆಗಿ ಈ ಸಂಬಂಧವನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. 2004ರ ಸಂದರ್ಶನವೊಂದರಲ್ಲಿ, ವಿನೋದ್ ಅವರು ಮದುವೆಯ ಎಲ್ಲಾ ಮಾತನ್ನು ತಳ್ಳಿಹಾಕಿದರು. ರೇಖಾ ಅವರ ವೈಯಕ್ತಿಕ ಜೀವನ ಹಲವು ಏರಿಳಿತಗಳನ್ನು ಹೊಂದಿತ್ತು. ಇಂದು ಅವರು 69 ನೇ ವಯಸ್ಸಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. 2018ರ ನಂತರ ಅವರು ಸಿನಿಮಾಗಳಲ್ಲೂ ನಟಿಸಿಲ್ಲ. ಅವರು ಈ ಮೊದಲು ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?