AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾದ ಆಮಿರ್ ಮಗ; ಮುಂದಾಯ್ತು ಯಾರು ಊಹಿಸದ ಘಟನೆ

ಸಾಯಿ ಪಲ್ಲವಿ ಹಿಂದಿ ಚಿತ್ರ 'ಏಕ್ ದಿನ್' ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಾಯಿ ಪಲ್ಲವಿ ಹೆಗಲಮೇಲೆ ಜುನೈದ್ ಖಾನ್ ಕೈ ಹಾಕಲು ಮುಂದಾದ ಘಟನೆ ವೈರಲ್ ಆಗಿದೆ. ಆಮಿರ್ ಖಾನ್ ಮಗನ ನಡೆ ಹಲವು ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕವಾಗಿ ನಟಿಯರ ಜೊತೆಗಿನ ವರ್ತನೆ ಬಗ್ಗೆ ಪ್ರಶ್ನೆ ಎತ್ತಿದೆ. ಸಾಯಿ ಪಲ್ಲವಿ ಗೌರವಕ್ಕೆ ಧಕ್ಕೆ ತರದೆ ಜುನೈದ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾದ ಆಮಿರ್ ಮಗ; ಮುಂದಾಯ್ತು ಯಾರು ಊಹಿಸದ ಘಟನೆ
ಸಾಯಿ ಪಲ್ಲವಿ
ರಾಜೇಶ್ ದುಗ್ಗುಮನೆ
|

Updated on:Apr 28, 2026 | 6:54 AM

Share

ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಈಗ ಹಿಂದಿಯಿಂದಲೂ ಆಫರ್​​ಗಳು ಬರೋಕೆ ಆರಂಭ ಆಗಿವೆ. ಹಿಂದಿಯಲ್ಲಿ ಅವರು ನಟಿಸಿರುವ ‘ಏಕ್ ದಿನ್’ ಸಿನಿಮಾ ರಿಲೀಸ್​​ಗೆ ರೆಡಿ ಆಗಿದೆ. ಈ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಡೆದ ಘಟನೆ ಒಂದು ಚರ್ಚೆಗೆ ಕಾರಣ ಆಗಿದೆ. ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಆಮಿರ್ ಖಾನ್ (Aamir Khan) ಮಗ ಜುನೈದ್ ಖಾನ್ ಮುಂದಾಗಿದ್ದರು. ಆ ಬಳಿಕ ಅವರು ನಡೆದುಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.

ಸಾಯಿ ಪಲ್ಲವಿ ಹಾಗೂ ಜುನೈದ್ ಖಾನ್ ಅವರ ‘ಏಕ್ ದಿನ್’ ಸಿನಿಮಾಗೆ ಸುನೀಲ್ ಪಾಂಡೆ ನಿರ್​ದೇಶನ ಮಾಡಿದ್ದಾರೆ. ಇದು ಥಾಯಿ ಭಾಷೆಯ ‘ಒನ್ ಡೇ’ ಸಿನಿಮಾದ ರಿಮೇಕ್ ಆಗಿದೆ. ಮನ್ಸೂರ್ ಖಾನ್, ಆಮಿರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೇ 1ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶೇಷ ಶೋ ನೋಡಿದ ಬಳಿಕ ಆಮಿರ್ ಖಾನ್ ಅತ್ತಿದ್ದಾರೆ.

ವಿಶೇಷ ಶೋ ಬಳಿಕ ಸುದ್ದಿಗೋಷ್ಠಿ ಒಂದನ್ನು ಆಯೋಜನೆ ಮಾಡಲಾಯಿತು. ಆಗ ಜುನೈದ್ ಖಾನ್ ಅವರು ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾಗಿದ್ದಾರೆ. ಆ ಬಳಿಕ ಅವರಿಗೆ ಏನನ್ನಿಸಿತೋ ಏನೋ, ಹೆಗಲಮೇಲೆ ಕೈ ಹಾಕದೆ ಹಿಂದಕ್ಕೆ ತೆಗೆದುಕೊಂಡಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ. ಅನೇಕರು ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಬಹುಶಃ ಜುನೈದ್​​ಗೆ ಇವರು ಉಳಿದ ಹೀರೋಯಿನ್​ಗಳಂತೆ ಅಲ್ಲ ಎಂಬುದು ಆ ಬಳಿಕ ಅರಿವಾಗಿರಬಹುದು’ ಹೀಗಾಗಿ, ಕೈ ಹಿಂದಕ್ಕೆ ತೆಗೆದುಕೊಂಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ನನ್ನ ತಂದೆ ಅಂತ ಹೇಳಿಕೊಳ್ಳಲಿಲ್ಲ ಪುತ್ರ ಜುನೈದ್ ಖಾನ್; ಕಾರಣ ಏನು?

ಇನ್ನು ಕೆಲವರು ಜುನೈದ್ ಪರ ಬ್ಯಾಟ್ ಬೀಸಿದ್ದಾರೆ. ‘ಜುನೈದ್​ ಅವರಿಗೆ ಸಾರ್ವಜನಿಕವಾಗಿ ಹೇಗಿರಬೇಕು, ಯಾವುದು ನಟಿಯರಿಗೆ ಹಿತ ನೀಡುತ್ತದೆ, ಯಾವುದು ಅಹಿತ ಎನಿಸುತ್ತದೆ ಎಂಬುದು ಗೊತ್ತಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Mon, 27 April 26

Follow Us
ತನಗೆ ಮಂತ್ರಿಗಿರಿಯೇ ಬೇಡವೆಂದ ಕೆ.ಎನ್​​. ರಾಜಣ್ಣ!
ತನಗೆ ಮಂತ್ರಿಗಿರಿಯೇ ಬೇಡವೆಂದ ಕೆ.ಎನ್​​. ರಾಜಣ್ಣ!
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ