ನಟ ಸಲ್ಮಾನ್ ಖಾನ್ (Salman Khan) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅನೇಕ ನಟಿಯರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಆದರೆ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಸಲ್ಮಾನ್ ಖಾನ್ ಅವರು ಕಿಸ್ಸಿಂಗ್ (Kiss) ದೃಶ್ಯಗಳಲ್ಲಿ ನಟಿಸಿಲ್ಲ. ಅಲ್ಲದೇ, ಅಂತಹ ಸೀನ್ಗಳಲ್ಲಿ ತಾವು ಎಂದಿಗೂ ನಟಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಈಗ ಅವರ ಒಂದು ಫೋಟೋ ವೈರಲ್ ಆಗಿದೆ. ನಟಿ ಕರೀಷ್ಮಾ ಕಪೂರ್ (Karishma Kapoor) ಜೊತೆ ಅವರು ಕಿಸ್ ಮಾಡಿದ್ದಾರೆ ಎನ್ನಲಾದ ಫೋಟೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಅಂದಹಾಗೆ, ವೈರಲ್ ಆಗಿರುವ ಈ ಫೋಟೋ ‘ಜೀತ್’ ಸಿನಿಮಾದ್ದು. ‘ಜೀತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಕರೀಷ್ಮಾ ಕಪೂರ್ ಜೊತೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ ಎಂಬುದು ತಿಳಿದು ಅಚ್ಚರಿ ಆಯಿತು. ಯಾಕೆಂದರೆ, ಅವರು ನೋ ಕಿಸ್ ಪಾಲಿಸಿ ಅನುಸರಿಸುವುದಾಗಿ ಹೇಳಿದ್ದಾರೆ’ ಎಂದು ನೆಟ್ಟಿಗರೊಬ್ಬರು ಈ ಫೋಟೋವನ್ನು ಶೇರ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿಗಳು ಈ ಫೋಟೋದ ಹಿಂದಿನ ಅಸಲಿ ವಿಚಾರವನ್ನು ತಿಳಿಸಿ ಹೇಳಿದ್ದಾರೆ. ‘ಈ ಫೋಟೋದಲ್ಲಿ ಸಲ್ಮಾನ್ ಖಾನ್ ಮತ್ತು ಕರೀಷ್ಮಾ ಕಪೂರ್ ನಿಜಕ್ಕೂ ಲಿಪ್ ಲಾಕ್ ಮಾಡಿಲ್ಲ. ಅವರು ನಟಿಯ ಕೆನ್ನೆಗಷ್ಟೇ ಚುಂಬಿಸಿದ್ದಾರೆ’ ಎಂಬುದು ಕೆಲವರ ವಾದ. ‘ಸಲ್ಮಾನ್ ಖಾನ್ ಅವರು ನೋ ಕಿಸ್ ಪಾಲಿಸಿ ಆರಂಭಿಸಿದ್ದೇ ಈ ದೃಶ್ಯದ ನಂತರ’ ಎಂದು ಇನ್ನೂ ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್ ಮಾಡಿದ್ದರು ಸಲ್ಮಾನ್ ಖಾನ್
ಅಷ್ಟಕ್ಕೂ ಸಲ್ಮಾನ್ ಖಾನ್ ಅವರು ‘ನೋ ಕಿಸ್’ ನಿಯಮ ಹಾಕಿಕೊಂಡಿರುವುದು ಯಾಕೆ? ಅದಕ್ಕೆ ಅವರೇ ಒಮ್ಮೆ ಉತ್ತರ ನೀಡಿದ್ದರು. ‘ಆ ರೀತಿಯ ಏನನ್ನೂ ನಾನು ಮಾಡಲ್ಲ. ಸಿನಿಮಾ ಹೀಗೆಯೇ ಇರಬೇಕು. ಆದರೆ ಒಟಿಟಿಯಿಂದ ಇಂದು ಬೇರೆಯದೇ ಟ್ರೆಂಡ್ ನಡೆಯುತ್ತಿದೆ. ನಾನು ಅಂಥ ಕಂಟೆಂಟ್ ವೀಕ್ಷಿಸಲ್ಲ. ಜನ ನೋಡ್ತಾರೆ ಅಂತ ಸಿನಿಮಾದವರು ಅದನ್ನೇ ಮಾಡುತ್ತಿದ್ದಾರೆ. ಎಲ್ಲರೂ ಮಾಡ್ತಾರೆ ಅಂತ ನಾನು ಮಾಡಲ್ಲ. ನನ್ನ ತಾಯಿ, ತಂದೆ, ಹಿರಿಯರು, ಕುಟುಂಬದವರು, ಮಕ್ಕಳು ಎಲ್ಲರೂ ನನ್ನ ಸಿನಿಮಾ ನೋಡುತ್ತಾರೆ. ಹಾಗಾಗಿ ನನ್ನ ಸಿನಿಮಾ ಶುದ್ಧವಾಗಿರಬೇಕು ಅಂತ ನಾನು ಬಯಸುತ್ತೇನೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.