ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಈಗ ಅವರು ವರ್ಕೌಟ್ ಮೂಲಕ ಮತ್ತೆ ಫಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ. 59ನೇ ವಯಸ್ಸಿನಲ್ಲೂ ಅವರ ಫಿಟ್ನೆಸ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ವೃತ್ತಿಜೀವನದ ಆರಂಭದಲ್ಲಿ ತೆಳ್ಳಗಿದ್ದ ಸಲ್ಮಾನ್, ನಂತರ ವರ್ಕೌಟ್ ಮತ್ತು ಆರೋಗ್ಯಕರ ಆಹಾರದ ಮಹತ್ವವನ್ನು ಅರಿತುಕೊಂಡು ನಿರಂತರ ವ್ಯಾಯಾಮ ಮಾಡುತ್ತಿದ್ದಾರೆ.

ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ
ಸಲ್ಮಾನ್ ಖಾನ್

Updated on: Apr 15, 2025 | 8:26 AM

ಸಲ್ಮಾನ್ ಖಾನ್ ಅವರ ನಟನೆಯ ‘ಸಿಕಂದರ್’ ಸಿನಿಮಾ (Sikandar Movie) ಇತ್ತೀಚೆಗೆ ರಿಲೀಸ್ ಆಗಿದೆ. ಆದರೆ, ಸಿನಿಮಾ 100 ಕೋಟಿ ರೂಪಾಯಿಯನ್ನು ಅಂತೂ ಇಂತೂ ತಲುಪಿದೆ. ಸಲ್ಮಾನ್ ಖಾನ್ ಅವರು ಈಗ ಈ ಸೋಲನ್ನು ಮರೆತು ಮೈ ಕೊಡವಿ ನಿಂತಿದ್ದಾರೆ. ಅವರು ಮತ್ತೆ ವರ್ಕೌಟ್​ಗೆ ಮರಳಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಅವರ ಬಾಡಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 59ನೇ ವಯಸ್ಸಿನಲ್ಲೂ ಸಲ್ಮಾನ್ ಖಾನ್ ಅವರು ಈ ರೀತಿಯ ಬಾಡಿ ಹೊಂದಿರೋದು ಅನೇಕರಿಗೆ ಅಚ್ಚರಿ ತಂದಿದೆ.

ಸಲ್ಮಾನ್ ಖಾನ್ ಅವರು ಚಿತ್ರರಂಗಕ್ಕೆ ಬರೋವಾಗ ತುಂಬಾನೇ ತೆಳ್ಳಗಿದ್ದರು. ಅವರು ಆ ಸಂದರ್ಭದಲ್ಲಿ ಅಷ್ಟಾಗಿ ವರ್ಕೌಟ್​ಗೆ ಆದ್ಯತೆ ನೀಡುತ್ತಾ ಇರಲಿಲ್ಲ. ಸಿಕ್ಕ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದರು. ಆದರೆ, ವರ್ಷಗಳು ಕಳೆದಂತೆ ಸಲ್ಮಾನ್ ಖಾನ್​ಗೆ ವರ್ಕೌಟ್​ನ ಮಹತ್ವ ತಿಳಿಯಿತು. ಹೀಗಾಗಿ, ಅವರು ನಿರಂತರವಾಗಿ ಜಿಮ್ ಮಾಡೋಕೆ ಆರಂಭಿಸಿದರು. ಆಹಾರದ ಬಗ್ಗೆಯೂ ಕಾಳಜಿ ವಹಿಸಿದರು.

ಇದನ್ನೂ ಓದಿ
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ; ಹುಡುಗ ಯಾರು?
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ಮರುಗಿದ್ದ ನಟ
ಬ್ಯಾಂಕ್ ಜನಾರ್ಧನ್ ವೃತ್ತಿ ಜೀವನ ಬದಲಿಸಿದ್ದು ಆ ಇಬ್ಬರು ವ್ಯಕ್ತಿಗಳು

ಸಲ್ಮಾನ್ ಖಾನ್ ಅವರು ಇತ್ತೀಚಿನ ದಿನಗಳಲ್ಲಿ ‘ಸಿಕಂದರ್’ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಅಷ್ಟಾಗಿ ವರ್ಕೌಟ್ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಅವರು ಸೋಮವಾರದಿಂದ (ಏಪ್ರಿಲ್ 14) ಜಿಮ್​ಗೆ ಮರಳಿದ್ದಾರೆ. ಅಲ್ಲಿ ವರ್ಕೌಟ್ ಆರಂಭಿಸಿದ್ದಾರೆ.

ಸಲ್ಮಾನ್ ಖಾನ್ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ‘ಸೋಮವಾರದ ಮೋಟಿವೇಷನ್ ನೀಡಿದ್ದಕ್ಕೆ ಧನ್ಯವಾದ’ ಎಂದು ಹೇಳಿದ್ದಾರೆ. ಭಾನುವಾರ ಎಲ್ಲರೂ ರಜಾ ದಿನವನ್ನು ಎಂಜಾಯ್ ಮಾಡಿರುವುದರಿಂದ ಸೋಮವಾರ ಆರಂಭಿಸೋದು ಕಷ್ಟ ಆಗುತ್ತದೆ. ಈ ಸಂದರ್ಭದಲ್ಲಿ ಸಲ್ಲುಗೆ ಜಿಮ್ ಮಾಡುವ ಮೂಲಕ ಮೋಟಿವೇಷನ್ ಸಿಕ್ಕಿದೆ.

ಇದನ್ನೂ ಓದಿ: ಸಿಕಂದರ್ ಸೋಲು: ಅಭಿಮಾನಿಗಳ ಮಾತು ಕೇಳಲು ಒಪ್ಪಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ‘ಸಿಕಂದರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ. ಅವರಿಗೂ ಈ ಚಿತ್ರದಿಂದ ದೊಡ್ಡ ಸೋಲು ಸಿಕ್ಕಂತೆ ಆಗಿದೆ. ಅವರಿಗೆ ಸದ್ಯ ಬಾಲಿವುಡ್​ನಲ್ಲಿ ಸಾಕಷ್ಟು ಆಫರ್​ಗಳು ಬರುತ್ತಿವೆ. ಸಲ್ಮಾನ್ ಖಾನ್ ಅವರು ವಿವಿಧ ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Tue, 15 April 25