Mithilesh Chaturvedi: ಹೃದಯ ಸಂಬಂಧಿ ಕಾಯಿಲೆಯಿಂದ ನಟ ಮಿತಿಲೇಶ್ ಚತುರ್ವೇದಿ ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು
Mithilesh Chaturvedi Death: ಹಲವು ಸಿನಿಮಾ, ಧಾರಾವಾಹಿ ಮತ್ತು ಜಾಹೀರಾತಿನಲ್ಲಿ ನಟಿಸಿ ಮಿತಿಲೇಶ್ ಚತುರ್ವೇದಿ ಫೇಮಸ್ ಆಗಿದ್ದರು. ಲಖನೌನಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.
ಹಿಂದಿ ಚಿತ್ರರಂಗದ ಖ್ಯಾತ ನಟ ಮಿತಿಲೇಶ್ ಚತುರ್ವೇದಿ (Mithilesh Chaturvedi) ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ (Heart Ailment) ಬಳಲುತ್ತಿದ್ದರು ಎನ್ನಲಾಗಿದೆ. ಬುಧವಾರ (ಆಗಸ್ಟ್ 3) ಅವರು ಕೊನೆಯುಸಿರು ಎಳೆದರು ಎಂದು ತಿಳಿದುಬಂದಿದೆ. ಲಖನೌನಲ್ಲಿ ಅವರು ನಿಧನರಾದರು ಎಂಬ ಸುದ್ದಿಯನ್ನು ಅವರ ಅಳಿಯ ಆಶಿಶ್ ಚತುರ್ವೇದಿ ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಹಲವು ವರ್ಷಗಳಿಂದ ಅವರು ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದರು. ‘ಕೋಯಿ ಮಿಲ್ ಗಯಾ’, ‘ಗದರ್: ಏಕ್ ಪ್ರೇಮ್ ಕಥಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಮಿತಿಲೇಶ್ ಚತುರ್ವೇದಿ ನಿಧನಕ್ಕೆ (Mithilesh Chaturvedi Death) ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಹಲವು ಬಗೆಯ ಪಾತ್ರಗಳನ್ನು ಮಾಡಿ ಮಿತಿಲೇಶ್ ಚತುರ್ವೇದಿ ಗಮನ ಸೆಳೆದಿದ್ದರು. ಸಿನಿಮಾ ಮಾತ್ರವಲ್ಲದೇ ರಂಗಭೂಮಿಯಲ್ಲೂ ಅವರ ಸಕ್ರಿಯರಾಗಿದ್ದರು. ಅನೇಕ ಜಾಹೀರಾತುಗಳಲ್ಲೂ ಅವರು ಅಭಿನಯಿಸಿದ್ದರು. ವೆಬ್ ಸರಣಿ ಲೋಕದಲ್ಲೂ ಅವರಿಗೆ ಡಿಮ್ಯಾಂಡ್ ಇತ್ತು. ಇಂಥ ಪ್ರತಿಭಾವಂತ ನಟನನ್ನು ಕಳೆದುಕೊಂಡು ಹಿಂದಿ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
@RakeshRoshan_N@iHrithik@FilmKRAFTfilms@IftpcM@CintaaOfficial Rest in Peace, Mithilesh Chaturvedi Ji ? We’ve lost a Very Fine Actor & Person today ? pic.twitter.com/patXlbfGXx
— Jaiदीप Seन (@jaidsen) August 4, 2022
‘ತಾಲ್’, ‘ಗದ್ದರ್: ಏಕ್ ಪ್ರೇಮ್ ಕಥಾ’, ‘ಕೋಯಿ ಮಿಲ್ ಗಯಾ’, ‘ಬಂಟಿ ಔರ್ ಬಬ್ಲಿ’, ‘ಗಾಂಧಿ ಮೈ ಫಾದರ್’ ಮುಂತಾದವು ಮಿತಿಲೇಶ್ ಚತುರ್ವೇದಿ ನಟನೆಯ ಪ್ರಮುಖ ಸಿನಿಮಾಗಳು. ಹನ್ಸಲ್ ಮೆಹ್ತಾ ನಿರ್ದೇಶನದ ಸೂಪರ್ ಹಿಟ್ ‘ಸ್ಕ್ಯಾಮ್: 1992’ ವೆಬ್ ಸಿರೀಸ್ನಲ್ಲಿ ಅವರು ಅಭಿನಯಿಸಿದ್ದರು. ಮಿತಿಲೇಶ್ ಚತುರ್ವೇದಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಅಮಿತಾಭ್ ಬಚ್ಚನ್ ನಟನೆಯ ‘ಗುಲಾಬೋ ಸಿತಾಬೋ’ ಸಿನಿಮಾದಲ್ಲಿ.
Published On - 10:49 am, Thu, 4 August 22