ಬಾಲಿವುಡ್ನ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ನ ಸೂಪರ್ಸ್ಟಾರ್ಗಳಲ್ಲಿ ಒಬ್ಬರಾಗಿರೋ ಅವರು ದೇಶದ ಶ್ರೀಮಂತ ನಟ. ವಿಶ್ವ ಮಟ್ಟದಲ್ಲಿ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಶಾರುಖ್ ಖಾನ್ ಅವರು ಜೀರೋದಿಂದ ತಮ್ಮ ಜರ್ನಿ ಆರಂಭಿಸಿ ಈಗ ಸಾವಿರಾರು ಕೋಟಿ ರೂಪಾಯಿಯ ಒಡೆಯ ಆಗಿದ್ದಾರೆ ಎಂದರೆ ಅದು ನಿಜಕ್ಕೂ ಸಾಧನೆಯೇ ಸರಿ.
ಶಾರುಖ್ ಖಾನ್ ಅವರು 870 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಅಂದರೆ ಸುಮಾರು 7,300 ಕೋಟಿ ರೂಪಾಯಿ ಅವರ ಆಸ್ತಿ ಇದೆ. ಶಾರುಖ್ ಖಾನ್ ಬಳಿಕ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಭಾರತದ ಶ್ರೀಮಂತ ಕಲಾವಿದರ ಪಟ್ಟಿಯಲ್ಲಿ ಇದ್ದಾರೆ. ಅವರ ಆಸ್ತಿ 4,600 ಕೋಟಿ ರೂಪಾಯಿ.
ಶಾರುಖ್ ಖಾನ್ ಅವರಿಗೆ 2023ರಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕವು. ಅವರು ಪ್ರತಿ ಸಿನಿಮಾದಿಂದ 150 ಕೋಟಿ ರೂಪಾಯಿಯಿಂದ 250 ಕೋಟಿ ರೂಪಾಯಿ ಸಿಗುತ್ತದೆ. ಕಳೆದ ವರ್ಷ ಅವರ ನಟನೆಯ ‘ಜವಾನ್’, ‘ಪಠಾಣ್’, ‘ಡಂಕಿ’ ಚಿತ್ರಗಳು ಗೆಲುವು ಕಂಡಿವೆ. ಇದು ಅವರ ಆಸ್ತಿಯನ್ನು ಹೆಚ್ಚಿಸಿದೆ.
ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಶಾರುಖ್ ಖಾನ್ ಹೊಂದಿದ್ದಾರೆ. ಅವರ ಆಸ್ತಿ ಹೆಚ್ಚಲು ಇದು ಕೂಡ ಒಂದು ಆದಾಯದ ಮೂಲ. ಶಾರುಖ್ ಖಾನ್ ಅವರು ಹಲವು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಐಪಿಎಲ್ನಲ್ಲಿ ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಡೆತನ ಹೊಂದಿದ್ದಾರೆ. ಜೂಹಿ ಚಾವ್ಲಾ ಇದರ ಸಹ ಮಾಲಿಕತ್ವ ಪಡೆದಿದ್ದಾರೆ. ಈ ತಂಡ ನೂರಾರು ಕೋಟಿಯ ಮೌಲ್ಯ ಹೊಂದಿದೆ. ಶಾರುಖ್ ಖಾನ್ ಅವರು ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ಗೆ ವೀಕೆಂಡ್ನಲ್ಲಿ ಡಬಲ್ ಸೆಲೆಬ್ರೇಷನ್; ಬೆಳಕಿನಿಂದ ಅಲಂಕೃತಗೊಂಡ ಮನ್ನತ್
ಶಾರುಖ್ ಖಾನ್ ಅವರು ‘ಮನ್ನತ್’ ಹೆಸರಿನ ನಿವಾಸ ಹೊಂದಿದ್ದಾರೆ. ಈ ಮನೆ ಮುಂಬೈನ ದೃದಯ ಭಾಗದಲ್ಲಿ ಇದೆ. ಇದು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಶಾರುಖ್ ಖಾನ್ ಅವರು ಅತೀ ಕಷ್ಟದಲ್ಲಿ ಇದ್ದಾಗ ಖರೀದಿ ಮಾಡಿದ ಮನೆ ಇದು. ಈ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದಲ್ಲದೆ, ದುಬೈ, ಲಂಡನ್ನಲ್ಲಿ ಶಾರುಖ್ ಖಾನ್ ಮನೆ ಹೊಂದಿದ್ದಾರೆ. ಅವರು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.