ಒಂದೇ ವರ್ಷದಲ್ಲಿ ಎರಡೂವರೆ ಸಾವಿರ ಕೋಟಿ ರೂಪಾಯಿ ಕಳೆದುಕೊಂಡ ಶಾರುಖ್ ಖಾನ್

ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರಲ್ಲಿ ಶಾರುಖ್ ಖಾನ್ 10,000 ಕೋಟಿ ರೂಪಾಯಿ ಆಸ್ತಿಯೊಂದಿಗೆ ಭಾರತದ ಅತ್ಯಂತ ಶ್ರೀಮಂತ ನಟನಾಗಿ ಅಗ್ರಸ್ಥಾನದಲ್ಲಿದ್ದಾರೆ. ಅಮಿತಾಭ್ ಬಚ್ಚನ್ ದ್ವಿತೀಯ ಸ್ಥಾನದಲ್ಲಿದ್ದು, ಸಲ್ಮಾನ್ ಖಾನ್ ಮತ್ತು ರಿತಿಕ್ ರೋಷನ್ ಕೂಡ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ.

ಒಂದೇ ವರ್ಷದಲ್ಲಿ ಎರಡೂವರೆ ಸಾವಿರ ಕೋಟಿ ರೂಪಾಯಿ ಕಳೆದುಕೊಂಡ ಶಾರುಖ್ ಖಾನ್
ಶಾರುಖ್ ಖಾನ್
Edited By:

Updated on: Sep 25, 2026 | 4:21 PM

ಮುಖ್ಯಾಂಶಗಳು

  • ಶಾರುಖ್ ಖಾನ್ ಆಸ್ತಿಯಲ್ಲಿ 2,490 ಕೋಟಿ ರೂ. ಇಳಿಕೆ
  • ಹುರುನ್ ಪಟ್ಟಿಯಲ್ಲಿ ಸಲ್ಮಾನ್ ಖಾನ್
  • ಅಮಿತಾಭ್ ಬಚ್ಚನ್, ರಿತಿಕ್ ರೋಷನ್ ಆಸ್ತಿ ಮೌಲ್ಯ ಎಷ್ಟು?

ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ ಎನ್ನುವ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2026ರ ಪಟ್ಟಿಯಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದಾಗ್ಯೂ ಅವರು ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಬೀಟ್ ಮಾಡಲು ಯಾವುದೇ ಸ್ಟಾರ್ಸ್ ಬಳಿಯೂ ಸಾಧ್ಯವಾಗಿಲ್ಲ.

ಶಾರುಖ್ ಖಾನ್ ಅವರ ಒಟ್ಟು ಆಸ್ತಿಯ ಮೌಲ್ಯ ಈಗ 10,000 ಕೋಟಿ ರೂಪಾಯಿ. ಈ ಆಸ್ತಿಯಲ್ಲಿ ಅವರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಂಸ್ಥೆಯಲ್ಲಿನ ಅವರ ಪಾಲು ಸೇರಿದೆ. ಕಳೆದ ವರ್ಷ ಹುರುನ್ ವರದಿಯಲ್ಲಿ ಅವರ ಆಸ್ತಿ 12,490 ಕೋಟಿ ರೂಪಾಯಿ ಇತ್ತು. ಅಂದರೆ ಈ ಬಾರಿ ಅವರ ಆಸ್ತಿಯಲ್ಲಿ 2,490 ಕೋಟಿ ರೂಪಾಯಿ ನಷ್ಟವಾಗಿದೆ.

YouTube video player

ಬಿಗ್ ಬಿ ಅಮಿತಾಭ್ ಬಚ್ಚನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 4,000 ಕೋಟಿ ರೂಪಾಯಿ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಲ್ಮಾನ್ ಖಾನ್ ಅವರ ಆಸ್ತಿಯ ಮೌಲ್ಯ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಹೃತಿಕ್ ರೋಷನ್ 2,500 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೆಚ್‌ಆರ್‌ಎಕ್ಸ್ ಬ್ರ್ಯಾಂಡ್‌ನ ಯಶಸ್ಸಿನಿಂದ ಹೃತಿಕ್ ಆಸ್ತಿಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ ಪಟ್ಟಿಯಲ್ಲಿದ್ದ ಜೂಹಿ ಚಾವ್ಲಾ ಈ ಬಾರಿ ಕಾಣಿಸಿಕೊಂಡಿಲ್ಲ. ನಿರ್ಮಾಪಕ ಕರಣ್ ಜೋಹರ್ ಕೂಡ ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ. ರಾಮಾಯಣ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ತಂದೆ ನರೇಶ್ ಮಲ್ಹೋತ್ರಾ ಪಟ್ಟಿಯಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 16,000 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ಅಭಿಮಾನಿಗಳ ದರ್ಶನಕ್ಕಾಗಿ ಶಾರುಖ್ ಖಾನ್ ಮನೆ ಮುಂದೆ ನಿರ್ಮಾಣವಾಗುತ್ತಿದೆ ಹೊಸ ಗ್ಯಾಲರಿ

ಶಾರುಖ್ ಖಾನ್ ಅವರ ಯಾವುದೇ ಸಿನಿಮಾ 2023ರ ನಂತರ ಬಿಡುಗಡೆಯಾಗಿಲ್ಲ. 2023ರಲ್ಲಿ ಪಠಾನ್, ಜವಾನ್ ಮತ್ತು ಡಂಕಿ ಸಿನಿಮಾಗಳು ದೊಡ್ಡ ಜಯ ಕಂಡಿದ್ದವು. ಈಗ ಅವರು ತಮ್ಮ ಮುಂದಿನ ‘ಕಿಂಗ್’ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಮಗಳು ಸುಹಾನಾ ಖಾನ್ ಕೂಡ ಈ ಸಿನಿಮಾದಲ್ಲಿದ್ದಾರೆ. ಡಿಸೆಂಬರ್ 24ರಂದು ಈ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:12 pm, Fri, 25 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us