ಐಶಾರಾಮಿ ಕಾರು ಖರೀದಿಸಿದ ನಟ ಶಾಹಿದ್ ಕಪೂರ್: ಬೆಲೆ ಎಷ್ಟು ಗೊತ್ತೆ?

Shahid Kapoor: ಬಾಲಿವುಡ್ ನಟ ಶಾಹಿದ್ ಕಪೂರ್ ಈಗಾಗಲೇ ಇರುವ ತಮ್ಮ ಐಶಾರಾಮಿ ಕಾರುಗಳ ಸಂಗ್ರಹಕ್ಕೆ ಹೊಸ ಕಾರೊಂದನ್ನು ಸೇರಿಸಿಕೊಂಡರು. ಅದರ ಬೆಲೆ ಎಷ್ಟು ಗೊತ್ತೆ?

ಐಶಾರಾಮಿ ಕಾರು ಖರೀದಿಸಿದ ನಟ ಶಾಹಿದ್ ಕಪೂರ್: ಬೆಲೆ ಎಷ್ಟು ಗೊತ್ತೆ?
ಶಾಹಿದ್ ಕಪೂರ್
Follow us
ಮಂಜುನಾಥ ಸಿ.
|

Updated on: Dec 19, 2023 | 9:44 PM

ನಟ ಶಾಹಿದ್ ಕಪೂರ್ (Shahid Kapoor) ಬಾಲಿವುಡ್​ನ ಪೈಸಾ ವಸೂಲ್ ನಟರಲ್ಲಿ ಒಬ್ಬರು. ರಣ್​ಬೀರ್, ರಣ್ವೀರ್ ಸಿಂಗ್ ಅವರುಗಳಗೆ ಹೋಲಿಸಿದರೆ ಚಿತ್ರರಂಗಕ್ಕೆ ಹಿರಿಯರಾದರೂ ಅವರಂತೆ ‘ಸ್ಟಾರ್’ ಎನ್ನಸಿಕೊಳ್ಳಲು ಶಾಹಿದ್​ಗೆ ಈ ವರೆಗೆ ಸಾಧ್ಯವಾಗಿಲ್ಲ. ಆರಕ್ಕೇರದ, ಆದರೆ ಮೂರಕ್ಕೆ ಇಳಿಯದ ನಟರಾಗಿ ಈಗಲೂ ಚಾಲ್ತಿಯಲ್ಲಿದ್ದಾರೆ ಶಾಹಿದ್ ಕಪೂರ್. ಇತ್ತೀಚೆಗೆ ಒಟಿಟಿಗೂ ಪದಾರ್ಪಣೆ ಮಾಡಿದ ಶಾಹಿದ್ ಅಲ್ಲಿ ಒಳ್ಳೆಯ ಹಿಟ್ ಅನ್ನೇ ನೀಡಿದ್ದಾರೆ. ಶಾಹಿದ್ ಕಪೂರ್ ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿಸಿ, ಕಾರಿನ ಪಕ್ಕ ನಿಂತು ಸ್ಟೈಲ್ ಆಗಿ ಫೋಸು ನೀಡಿದ್ದಾರೆ.

ಶಾಹಿದ್ ಕಪೂರ್, ಐಶಾರಾಮಿ ಹಾಗೂ ವೇಗದ ಕಾರಾಗಿರುವ ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಕಾರು ಖರೀದಿ ಮಾಡಿದ್ದಾರೆ. ಶಾಹಿದ್ ಕಪೂರ್ ಹಾಗೂ ಅವರ ಪತ್ನಿ ಮೀರಾ ಕಪೂರ್ ಒಟ್ಟಿಗೆ ಶೋರೂಂಗೆ ತೆರಳಿ ತಮ್ಮ ನೆಚ್ಚಿನ ಕಾರನ್ನು ಡಿಲೆವರಿ ಪಡೆದಿದ್ದಾರೆ. ಮರ್ಸಿಡೀಜ್ ಬೆಂಜ್ ಇಂಡಿಯಾ, ತನ್ನ ಸಾಮಾಜಿಕ ಖಾತೆಯಲ್ಲಿ ಶಾಹಿದ್ ಹಾಗೂ ಮೀರಾ, ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ. ಶಾಹಿದ್ ಅಭಿಮಾನಿಗಳು ಅವರಿಗೆ ಶುಭಾಶಯವನ್ನೂ ಕೋರಿದ್ದಾರೆ.

ಇದನ್ನೂ ಓದಿ:ಶಾಹಿದ್ ಕಪೂರ್ ಮನೆಯಲ್ಲಿ ಕಾರ್ತಿಕ್ ಆರ್ಯನ್ ವಾಸ; ತಿಂಗಳಿಗೆ ನೀಡಬೇಕು 7.5 ಲಕ್ಷ ರೂ.

ಶಾಹಿದ್ ಕಪೂರ್ ಖರೀದಿಸಿರುವ ಕಾರಿನ ಬೆಲೆ ಎಕ್ಸ್ ಶೋ ರೂಂ ಬೆಲೆ ಮುಂಬೈನಲ್ಲಿ 2.96 ಕೋಟಿ ರೂಪಾಯಿಗಳು, ಆನ್​ರೋಡ್ ಬೆಲೆ ಇನ್ನೂ ಹೆಚ್ಚಾಗುತ್ತದೆ. ಅಲ್ಲಿಗೆ ಸುಮಾರು 3.60 ಕೋಟಿ ರೂಪಾಯಿಗಳನ್ನು ಈ ಕಾರಿಗಾಗಿ ಶಾಹಿದ್ ಕಪೂರ್ ವ್ಯಯಿಸಿದ್ದಾರೆ. ಕೊಟ್ಟಿರುವ ಹಣಕ್ಕೆ ತಕ್ಕಂತೆ ಅತ್ಯಂತ ಲಕ್ಷುರಿ, ಅದ್ಭುತ ವೇಗ, ಸುರಕ್ಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಂಫರ್ಟ್ ಅನ್ನು ಈ ಕಾರು ಹೊಂದಿದೆ.

ಬಾಲಿವುಡ್​ನ ಹಲವು ನಟ-ನಟಿಯರ ಮೆಚ್ಚಿನ ಕಾರು ಈ ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600. ನಟರಾದ ರಣ್ವೀರ್ ಸಿಂಗ್, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ನಟಿಯರಾದ ಕೃತಿ ಸೆನನ್, ನೀತು ಕಪೂರ್ ಇನ್ನೂ ಕೆಲವರು ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಕಾರನ್ನು ಹೊಂದಿದ್ದಾರೆ.

ಶಾಹಿದ್ ಕಪೂರ್ ಬಳಿ ಈಗಾಗಲೇ ಹಲವು ಉತ್ತಮ ಕಾರುಗಳಿವೆ. ಮರ್ಸಿಡೀಸ್ ಜಿಎಲ್ ಕ್ಲಾಸ್, ಎಂಎಲ್ ಕ್ಲಾಸ್, ಎಎಂಜಿ ಎಸ್400 ಕ್ಲಾಸ್, ಎಸ್ 580, ಜಾಗ್ವಾರ್ ಎಕ್ಸ್​ಕೆಆರ್-ಎಸ್ ಕಾರು, ಪೋರ್ಶೆ ಕೇನ್ಯಾನ್, ರೇಂಜ್ ರೋವರ್ ವೋಗ್ ಇನ್ನೂ ಕೆಲವು ಕಾರುಗಳು ಇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ