ಒಂದೇ ಪ್ರಾಜೆಕ್ಟ್​​ನಲ್ಲಿ ಶಾರುಖ್, ರಣಬೀರ್ ಹಾಗೂ ಆಲಿಯಾ ನಟನೆ

ಶಾರುಖ್ ಖಾನ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಹೊಸ ಜಾಹೀರಾತು ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮದೇ ಸಿನಿಮಾಗಳ ಕಥೆ ಬಳಸಿ ಒಬ್ಬರನ್ನೊಬ್ಬರು ಕಾಲೆಳೆದುಕೊಂಡ ನಟರ ಕಾಮಿಡಿ ಜುಗಲ್ಬಂದಿಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದು, ಶಾರುಖ್ ಹಾಗೂ ಆಲಿಯಾ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ.

ಒಂದೇ ಪ್ರಾಜೆಕ್ಟ್​​ನಲ್ಲಿ ಶಾರುಖ್, ರಣಬೀರ್ ಹಾಗೂ ಆಲಿಯಾ ನಟನೆ
ಆಲಿಯಾ ಭಟ್
Edited By:

Updated on: Sep 25, 2026 | 8:11 AM

ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಜಾಹೀರಾತೊಂದರಲ್ಲಿ ಮೂವರ ಜುಗಲ್ಬಂದಿ ನೆಟ್ಟಿಗರ ಗಮನ ಸೆಳೆದಿದೆ. ತಮ್ಮದೇ ಹಳೆಯ ಸಿನಿಮಾಗಳ ಸಂಭಾಷಣೆಗಳನ್ನು ಬಳಸಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಈ ಕಾಮಿಡಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸ್ಟೀಲ್ ಕಂಪನಿಯ ಜಾಹೀರಾತಿಗಾಗಿ ಈ ಮೂವರು ತಾರೆಯರು ಜೊತೆಯಾಗಿದ್ದಾರೆ . ವಿಡಿಯೋದಲ್ಲಿ ಹಿರಿಯ ನಟ ಬಿಜೇಂದ್ರ ಕಲಾ ಅವರು ಜಾಹೀರಾತಿನ ಕಲ್ಪನೆಯನ್ನು ನಟರಿಗೆ ವಿವರಿಸುತ್ತಾರೆ. ಆದರೆ ಮೂವರೂ ಆ ಕಲ್ಪನೆಯನ್ನು ತಿರಸ್ಕರಿಸುತ್ತಾರೆ. ನಂತರ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಆಲೋಚನೆಗಳನ್ನು ನಿರ್ದೇಶಕರ ಮುಂದೆ ಪ್ರಸ್ತುತಪಡಿಸಲು ಆರಂಭಿಸುತ್ತಾರೆ.

ಮೊದಲು ಶಾರೂಖ್ ಖಾನ್ ತಮ್ಮ ‘ಡಾನ್’ ಚಿತ್ರದ ಶೈಲಿಯಲ್ಲಿ ಕಥೆ ಹೇಳುತ್ತಾರೆ. ‘12 ದೇಶಗಳ ಪೊಲೀಸರು ಮನೆ ಸುತ್ತುವರಿದರೂ ಅದನ್ನು ಒಡೆಯಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ. ಇದಕ್ಕೆ ತಕ್ಷಣವೇ ತಿರುಗೇಟು ನೀಡುವ ರಣಬೀರ್ ಕಪೂರ್, ಈ ಆ್ಯಡ್ ತಡೆಯುವುದು ನಮಗೆ ಮುಷ್ಕಿಲ್ ಅಲ್ಲ, ನಾಮುಮ್ಕಿನ್’ ಎಂದು ತಮಾಷೆ ಮಾಡುತ್ತಾರೆ . ನಂತರ ರಣಬೀರ್ ತಮ್ಮ ‘ರಾಕ್ಸ್ಟಾರ್’ ಕಲ್ಪನೆಯನ್ನು ವಿವರಿಸುತ್ತಾರೆ.

YouTube video player

ರಣಬೀರ್ ಮಾತನಾಡುತ್ತಿದ್ದಂತೆ ಆಲಿಯಾ ಭಟ್, ‘ಓ ನಾದಾನ್ ಪರಿಂದೇ ಕೂತ್ಕೋ’ ಎಂದು ಗಂಡನ ಕಾಲೆಳೆಯುತ್ತಾರೆ . ನಂತರ ಆಲಿಯಾ ತಮ್ಮ ‘ಜಿಗ್ರಾ’ ಚಿತ್ರದ ಮಾದರಿಯಲ್ಲಿ ಕಥೆ ಪ್ರಸ್ತಾಪಿಸುತ್ತಾರೆ. ‘ಜೈಲಿನಲ್ಲಿರುವ ಸಹೋದರನನ್ನು ರಕ್ಷಿಸಲು ಹುಡುಗಿಗೆ ಜೈಲು ಒಡೆಯಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ . ಇದಕ್ಕೆ ಶಾರೂಖ್ ಖಾನ್, ‘ಆ ಜಾಹೀರಾತು ನೋಡುವ ಧೈರ್ಯ ಯಾರಲ್ಲೂ ಮಾಡಲ್ಲ’ ಎಂದು ರೇಗಿಸುತ್ತಾರೆ.

ಇದನ್ನೂ ಓದಿ: ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಕ್ತ ಸಿಕ್ತ ಲುಕ್​ನಲ್ಲಿ ರಣಬೀರ್; ರಾಮನ ಪಾತ್ರ ಹೋಲಿಸಿ ಟೀಕೆ

ಸಾಮಾಜಿಕ ಜಾಲತಾಣಗಳಲ್ಲಿ ಈ ಕಾಮಿಡಿ ಜಾಹೀರಾತು ಭಾರಿ ವೈರಲ್ ಆಗಿದೆ. ಈ ಫನ್ ಸಂಭಾಷಣೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ನಟಿ ಶ್ರದ್ಧಾ ಕಪೂರ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ವಿಡಿಯೋ ನೋಡಿ ನಕ್ಕಿದ್ದಾರೆ. ಇತ್ತೀಚೆಗೆ ಬಂದ ಅತ್ಯುತ್ತಮ ಜಾಹೀರಾತು ಕಲ್ಪನೆ ಇದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us