ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ

ಸೊಹೈಲ್ ಖಾನ್ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಟನಾಗಿ ಹಾಗೂ ನಿರ್ಮಾಪಕನಾಗಿ ಅವರು ಮನ್ನಣೆ ಪಡೆದಿದ್ದಾರೆ. ಸೊಹೈಲ್ ಹಾಗೂ ಸೀಮಾ 1998ರಲ್ಲಿ ಮದುವೆ ಆದರು.

ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
ಸೊಹೈಲ್​-ಸೀಮಾ
Edited By:

Updated on: May 14, 2022 | 2:50 PM

ಸಲ್ಮಾನ್ ಖಾನ್ (Salman Khan) ಸಹೋದರ ಅರ್ಬಾಜ್ ಖಾನ್ (Arbaaz Khan) ಅವರು ಮಲೈಕಾ ಅರೋರಾ ಜತೆ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಇದಾದ 5 ವರ್ಷಗಳ ಬಳಿಕ ಸಲ್ಲು ಕುಟುಂಬದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಹೊರಬಿದ್ದಿದೆ. ಸಲ್ಮಾನ್ ಖಾನ್ ಮತ್ತೋರ್ವ ಸಹೋದರ ಸೊಹೈಲ್ ಖಾನ್ (Sohail Khan) ಹಾಗೂ ಅವರ ಪತ್ನಿ ಸೀಮಾ ಖಾನ್ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಮೂಲಕ ಅವರ 24 ವರ್ಷಗಳ ದಾಂಪತ್ಯ ವಿಚ್ಛೇದನದಲ್ಲಿ ಕೊನೆಯಾಗುತ್ತಿದೆ. ಇಂದು (ಮೇ 13) ಇಬ್ಬರೂ ಮುಂಬೈನ ಫ್ಯಾಮಿಲಿ ಕೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸೊಹೈಲ್ ಖಾನ್ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಟನಾಗಿ ಹಾಗೂ ನಿರ್ಮಾಪಕನಾಗಿ ಅವರು ಮನ್ನಣೆ ಪಡೆದಿದ್ದಾರೆ. ಸೊಹೈಲ್ ಹಾಗೂ ಸೀಮಾ 1998ರಲ್ಲಿ ಮದುವೆ ಆದರು. ಇವರಿಗೆ ನಿರ್ವಾನ್ ಹಾಗೂ ಯೋಹನ್ ಹೆಸರಿನ ಮಕ್ಕಳಿದ್ದಾರೆ. ಸೀಮಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಈಗ ಇಬ್ಬರೂ ಬೇರೆ ಆಗುತ್ತಿರುವುದು ಖಾನ್ ಕುಟುಂಬದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾ ಮೂಲಕ ಸೊಹೈಲ್​ ಹಾಗೂ ಸೀಮಾ ಭೇಟಿ ಆದರು. ಇಬ್ಬರ ನಡುವೆ ಗೆಳೆತನ ಬೆಳೆಯಿತು. ನಂತರ ಇದು ಪ್ರೀತಿಗೆ ತಿರುಗಿತು. ಮದುವೆ ವಿಚಾರದಲ್ಲಿ ಸೀಮಾ ಮನೆಯಲ್ಲಿ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಸೊಹೈಲ್​-ಸೀಮಾ ರಾತ್ರೋರಾತ್ರಿ ಓಡಿ ಹೋಗಿ ಮದುವೆ ಆಗಿದ್ದರು. ನಂತರ ಸೀಮಾ ಕುಟುಂಬದವರು ಸೊಹೈಲ್​ ಅವರನ್ನು ಒಪ್ಪಿಕೊಂಡರು.

ಇದನ್ನೂ ಓದಿ
Kagiso Rabada: ನಿಮಗೆ ಸಲ್ಮಾನ್ ಖಾನ್ ಗೊತ್ತಾ? ಎಂದು ಕೇಳಿದ ಆ್ಯಂಕರ್​​ಗೆ ರಬಾಡ ಎಪಿಕ್ ರಿಪ್ಲೇ
ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​
ಅಬ್ಬಬ್ಬಾ.. ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ ಶಾರುಖ್​, ಸಲ್ಮಾನ್​, ಹೃತಿಕ್ ಪಡೆಯುವ ಸಂಭಾವನೆ ಇಷ್ಟೊಂದಾ?
ಈದ್ ಸಮಯದಲ್ಲೇ ‘ರನ್​ವೇ 34’ ರಿಲೀಸ್ ಆಗುತ್ತಿರುವುದು ತಿಳಿದು ತಕ್ಷಣ ಸಲ್ಮಾನ್​ಗೆ ಫೋನ್ ಮಾಡಿದ್ದ ಅಜಯ್ ದೇವಗನ್; ಏನು ಕಾರಣ?

‘ನಮಗೆ ವಯಸ್ಸಾದಂತೆ ನಮ್ಮ ಸಂಬಂಧಗಳು ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತವೆ. ನಾವು ಆ ಬಗ್ಗೆ ಕ್ಷಮೆ ಕೇಳುವುದಿಲ್ಲ. ಕಾರಣ ನಾವು ಸಂತೋಷವಾಗಿದ್ದೇವೆ. ನಮ್ಮ ಮಕ್ಕಳು ಸಂತೋಷವಾಗಿದ್ದಾರೆ. ಸೊಹೈಲ್ ಮತ್ತು ನಾನು ಸಂಸಾರದ ಬಂಧದಿಂದ ಕಳಚಿಕೊಳ್ಳುತ್ತಿದ್ದೇವೆ. ಆದರೆ ನಾವು ಒಂದು ಕುಟುಂಬದ ರೀತಿಯಲ್ಲೇ ಇರುತ್ತೇವೆ’ ಎಂದು ಅವರು ಹೇಳಿರುವುದಾಗಿ ವರದಿ ಆಗಿದೆ.  ಇಬ್ಬರೂ ವಿಚ್ಛೇದನ ಪಡೆದುಕೊಳ್ಳಲು ಕಾರಣ ಏನು ಎನ್ನುವ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ.

ಇತ್ತೀಚೆಗೆ ಚಿತ್ರರಂಗದಲ್ಲಿ ಅನೇಕರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಆಮಿರ್ ಖಾನ್ ಹಾಗೂ ಕಿರಣ್ ರಾವ್ ಇಬ್ಬರೂ ವಿಚ್ಛೇದನ ಪಡೆದರು. ಆ ಬಳಿಕ ಗೆಳೆಯರಾಗಿಯೇ ಅವರು ಮುಂದುವರಿಯುತ್ತಿದ್ದಾರೆ. ಸೊಹೈಲ್ ಹಾಗೂ ಸೀಮಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ವಿಚ್ಛೇದನದ ಬಳಿಕ ಮಕ್ಕಳಿಗೋಸ್ಕರ ಗೆಳೆತನವನ್ನು ಇಟ್ಟುಕೊಳ್ಳಲಿದ್ದಾರೆ. ತೆಲುಗು ನಟಿ ಸಮಂತಾ ಹಾಗೂ ನಾಗ ಚೈತನ್ಯ ಕೂಡ ದೂರವಾದರು. ಈಗ ಆ ಸಾಲಿಗೆ ಸೊಹೈಲ್ ಕೂಡ ಸೇರ್ಪಡೆ ಆಗಿದ್ದಾರೆ. (Source)

ಅರ್ಪಿತಾ ಖಾನ್ ಮನೆಯಲ್ಲಿ ನಡೆದಿತ್ತು ಔತಣಕೂಟ  

ಇತ್ತೀಚೆ ಈದ್​ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಖಾನ್​ ಅವರ ಮನೆಯಲ್ಲೂ ಈದ್​ ಸಲುವಾಗಿ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ನಟಿ ಶೆಹನಾಜ್​ ಗಿಲ್​ ಕೂಡ ಸಲ್ಮಾನ್​ ಖಾನ್​ ಕುಟುಂಬದವರ ಜೊತೆ ಬೆರೆತಿದ್ದರು. ಪಾರ್ಟಿ ಮುಗಿಸಿ ಹೊರಡುವಾಗ ಅವರು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದರು. ಈ ವೇಳೆ ಸಲ್ಮಾನ್​ ಖಾನ್​ ಅವರನ್ನು ಪದೇ ಪದೇ ತಬ್ಬಿಕೊಂಡು ಪ್ರೀತಿ ತೋರಿಸಿದ್ದರು. ಅಷ್ಟೇ ಅಲ್ಲದೇ ಸಲ್ಲು ಕುತ್ತಿಗೆಗೆ ಅವರು ಕಿಸ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:10 pm, Fri, 13 May 22