ಸೋನು ಸೂದ್ ಪತ್ನಿ ಸೊನಾಲಿ ಸೂದ್ ಕಾರು ಅಪಘಾತ; ಆಸ್ಪತ್ರೆಗೆ ಓಡೋಡಿ ಬಂದ ನಟ
ಮುಂಬೈ-ನಾಗಪುರ ಹೈವೇಯಲ್ಲಿ ಸೋನು ಸೂದ್ ಪತ್ನಿ ಸೊನಾಲಿ ಸೂದ್ ಕಾರು ಅಪಘಾತಕ್ಕೆ ಒಳಗಾಗಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಆ ಫೋಟೋಗಳನ್ನು ನೋಡಿ ಅಭಿಮಾನಿಗಳಿಗೆ ಆತಂಕ ಆಗಿದೆ. ಸೊನಾಲಿ ಸೂದ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಖ್ಯಾತ ನಟ ಸೋನು ಸೂದ್ (Sonu Sood)ಅವರ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣ ಆಗಿದೆ. ಸೋನು ಸೂದ್ ಪತ್ನಿ ಸೊನಾಲಿ ಸೂದ್ ಚಲಿಸುತ್ತಿದ್ದ ಕಾರು ಅಪಘಾತಕ್ಕೆ (Sonali Sood Car Accident) ಒಳಗಾಗಿದೆ. ಸೋಮವಾರ (ಮಾರ್ಚ್ 24) ರಾತ್ರಿ ಈ ಘಟನೆ ನಡೆದಿದೆ. ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಜ್ಜುಗುಜ್ಜಾದ ಕಾರಿನ ಫೋಟೋ ವೈರಲ್ ಆಗಿದೆ. ಕಾರಿನಲ್ಲಿ ಪ್ರಯಾಣ ಮಾಡುವಾಗ ಸೊನಾಲಿ ಸೂದ್ (Sonali Sood) ಜೊತೆ ಅವರ ಸಹೋದರಿ ಹಾಗೂ ಸಹೋದರಿಯ ಮಗ ಕೂಡ ಇದ್ದರು. ಈ ಮೂವರ ಹೆಲ್ತ್ ಅಪ್ಡೇಟ್ ಇನ್ನಷ್ಟೇ ಬರಬೇಕಿದೆ. ಸೊನಾಲಿ ಸೂದ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಬಳಿಕ ಸೋನಾಲಿ ಸೂದ್ ಹಾಗೂ ಅವರ ಸಹೋದರಿಯ ಮಗನನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ತೀವ್ರ ಗಾಯಗಳು ಆಗಿವೆ ಎನ್ನಲಾಗಿದೆ. ಕೂಡಲೇ ಸೋನು ಸೂದ್ ಕೂಡ ಆಸ್ಪತ್ರಗೆ ತೆರಳಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಇಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ನಾಗಪುರ-ಮುಂಬೈ ಹೈವೇಯಲ್ಲಿ ಸೊನಾಲಿ ಸೂದ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ ಎಂಬ ಸುದ್ದಿಯನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಈ ಅಪಘಾತದಲ್ಲಿ ಸೊನಾಲಿ ಸೂದ್ ಅವರ ಸಹೋದರಿಗೆ ಹೆಚ್ಚಿನ ಗಾಯಗಳು ಆಗಿಲ್ಲ. ಕೇವಲ ಸಣ್ಣ ಪುಟ್ಟ ಗಾಯಗಳು ಆಗಿವೆ. ಆದರೆ ಸೊನಾಲಿ ಮತ್ತು ಸಹೋದರಿಯ ಪುತ್ರನಿಗೆ ಗಂಭೀರವಾಗಿ ಪೆಟ್ಟಾಗಿದೆ.
ಸೋನು ಸೂದ್ ಕುಟುಂಬಕ್ಕೆ ಈ ರೀತಿ ಸಂಕಷ್ಟ ಎದುರಾಗಿರುವುದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಜನರ ಪಾಲಿಗೆ ಸೋನು ಸೂದ್ ಅವರು ರಿಯಲ್ ಹೀರೋ ಆಗಿದ್ದಾರೆ. ಮೊದಲ ಲಾಕ್ಡೌನ್ ಸಂದರ್ಭದಿಂದಲೂ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಬಡವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಹಲವರಿಗೆ ಕೆಲಸ ಕೊಡಿಸಿದ್ದಾರೆ. ಎಷ್ಟೋ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದ ಸೋನು ಸೂದ್ ಅವರ ಕುಟುಂಬಕ್ಕೆ ಅಪಘಾತದ ನೋವು ಎದುರಾಗಿರುವುದು ಅಭಿಮಾನಿಗಳು ಬೇಸರ ತಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.