AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ಸೂದ್​ಗೆ ಸಂಕಷ್ಟ; ನಟನ ವಿರುದ್ಧ ಜಾರಿ ಆಯ್ತು ಬಂಧನದ ವಾರಂಟ್

ಸೋನು ಸೂದ್ ಅವರ ವಿರುದ್ಧ ಲುಧಿಯಾನಾ ಕೋರ್ಟ್ 10 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರಂಟ್ ಜಾರಿ ಮಾಡಿದೆ. ಕ್ರಿಪ್ಟೋ ಕರೆನ್ಸಿ ವಂಚನೆಯಲ್ಲಿ ಸಾಕ್ಷಿಯಾಗಿ ಕೋರ್ಟ್‌ಗೆ ಹಾಜರಾಗದ ಕಾರಣ ಈ ವಾರಂಟ್ ಜಾರಿಯಾಗಿದೆ. ಸೋನು ಸೂದ್ ಇತ್ತೀಚೆಗೆ ಖಳನಾಯಕನ ಪಾತ್ರಗಳಿಂದ ದೂರವಿದ್ದಾರೆ.

ಸೋನು ಸೂದ್​ಗೆ ಸಂಕಷ್ಟ; ನಟನ ವಿರುದ್ಧ ಜಾರಿ ಆಯ್ತು ಬಂಧನದ ವಾರಂಟ್
ಸೋನು ಸೂದ್
ರಾಜೇಶ್ ದುಗ್ಗುಮನೆ
|

Updated on:Feb 07, 2025 | 9:16 AM

Share

ನಟ ಸೋನು ಸೂದ್ ಅವರು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಗಮನ ಸೆಳೆದವರು. ಕೊವಿಡ್ ಬಳಿಕ ಸಾಮಾಜಿಕ ಕೆಲಸಗಳಲ್ಲಿ ಅವರು ತೊಡಗಿಕೊಳ್ಳುತ್ತಾ ಇದ್ದಾರೆ. ಈಗ ಅವರ ವಿರುದ್ಧ ಬಂಧನದ ವಾರಂಟ್ ಜಾರಿ ಆಗಿದೆ. 10 ಲಕ್ಷ ರೂಪಾಯಿ ಫ್ರಾಡ್​ ಕೇಸ್​ಗೆ ಸಂಬಂಧಿಸಿದಂತೆ ಲುಧಿಯಾನಾ ಕೋರ್ಟ್ ನಟನ ವಿರುದ್ಧ ವಾರಂಟ್ ಜಾರಿ ಮಾಡಿದೆ. ಇದರಿಂದ ಅವರಿಗೆ ಬಂಧನದ ಭೀತಿ ಶುರುವಾಗಿದೆ.

ಲುಧಿಯಾನಾ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಅವರ ವಿರುದ್ಧ 10 ಲಕ್ಷ ರೂಪಾಯಿ ಫ್ರಾಡ್ ಮಾಡಿದ ಆರೋಪ ಹಾಕಿದ್ದರು. ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಈ ಮೋಸ ನಡೆದಿತ್ತು. ಈ ಪ್ರಕರಣದ ವಿಚಾರಣೆ ಲುಧಿಯಾನಾ ಕೋರ್ಟ್​ನಲ್ಲಿ ನಡೆಯುತ್ತಾ ಇತ್ತು. ಈ ಪ್ರಕರಣದಲ್ಲಿ ಸೋನು ಸೂದ್ ಅವರು ಸಾಕ್ಷಿ ಹೇಳಬೇಕಿತ್ತು. ಆದರೆ, ಅವರು ಪದೇ ಪದೇ ಸಮನ್ಸ್ ನೀಡಿದ ಹೊರತಾಗಿಯೂ ಕೋರ್ಟ್​ಗೆ ಬಂದಿಲ್ಲ. ಈ ಕಾರಣಕ್ಕೆ ಅವರ ವಿರುದ್ಧ ಬಂಧನದ ವಾರಂಟ್ ಜಾರಿ ಆಗಿದೆ.

ಇದನ್ನೂ ಓದಿ: ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್

ಆದೇಶದಲ್ಲಿ ಏನಿದೆ?

ಮುಂಬೈ ನಿವಾಸಿ ಸೋನು ಸೂದ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಕೋರ್ಟ್​ಗೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ಬಂಧಿಸಿ ಕೋರ್ಟ್​ ಎದುರು ತಂದು ನಿಲ್ಲಿಸಬೇಕು’ ಎಂದು ಲುಧಿಯಾನಾ ಕೋರ್ಟ್ ಮುಂಬೈ ಪೊಲೀಸರಿಗೆ ಸೂಚನೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ರಂದು ಇದೆ.

ಖಳನಾಯಕನ ಪಾತ್ರದಿಂದ ದೂರ

ಸೋನು ಸೂದ್ ಅವರು ಇತ್ತೀಚೆಗೆ ವಿಲನ್ ರೀತಿಯ ಪಾತ್ರಗಳಿಂದ ದೂರವೇ ಇದ್ದಾರೆ. ಅವರು ಈ ರೀತಿಯ ಪಾತ್ರಗಳನ್ನು ಸಿಕ್ಕರೆ ಒಪ್ಪುತ್ತಿಲ್ಲ. ಕೇವಲ ಹೀರೋ ಆಗಿ ಮಾತ್ರ ಅವರು ನಟಿಸುತ್ತಿದ್ದಾರೆ. ಆದರೆ, ಆ ರೀತಿಯ ಒಳ್ಳೆಯ ಪಾತ್ರಗಳು ಅವರನ್ನು ಹುಡುಕಿ ಬಂದಿಲ್ಲ. ಅವರು ಕನ್ನಡದಲ್ಲಿ ‘ವಿಷ್ಣುವರ್ಧನ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು. ಇದರಲ್ಲಿ ಆದಿಶೇಷ ಹೆಸರಿನ ಖಡಕ್ ವಿಲನ್ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:11 am, Fri, 7 February 25

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!