ಹಾಸ್ಯ ನಟ ಸುನಿಲ್ ಗ್ರೋವರ್ಗೆ ಹೃದಯ ಸರ್ಜರಿ; ಈಗ ಹೇಗಿದೆ ಅವರ ಆರೋಗ್ಯ?
ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ಸುನಿಲ್ ಅವರನ್ನು ಅಡ್ಮಿಟ್ ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಹೊರ ಹಾಕೋಕೆ ಆರಂಭಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು.
ತಮ್ಮ ಹಾಸ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರೆ ನಟ ಸುನಿಲ್ ಗ್ರೋವರ್ (Sunil Grover). ಬುಧವಾರ (ಫೆಬ್ರವರಿ 2) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಸುನಿಲ್ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಈಗ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು (Heart surgery) ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು, ಇಂದು (ಫೆಬ್ರವರಿ 3) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವರದಿ ಆಗಿದೆ. ಆತಂಕಗೊಂಡಿದ್ದ ಸುನಿಲ್ ಗ್ರೋವರ್ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಹಾಸ್ಯ ಪಾತ್ರದ ಮೂಲಕ ಸುನಿಲ್ ಅವರು ಸಾಖಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ.
ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ಸುನಿಲ್ ಅವರನ್ನು ಅಡ್ಮಿಟ್ ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಹೊರ ಹಾಕೋಕೆ ಆರಂಭಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಅಭಿಮಾನಿಗಳ ಪ್ರಾರ್ಥನೆ ಈಡೇರಿದೆ. ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ.
ಈ ಬಗ್ಗೆ ಎಎನ್ಐ ಟ್ವೀಟ್ ಮಾಡಿದೆ. ‘ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಾಸ್ಯ ನಟ ಸುನಿಲ್ ಗ್ರೋವರ್ ಅವರು ಇಂದು ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂಬುದಾಗಿ ಎಎನ್ಐ ವರದಿ ಮಾಡಿದೆ.
ಹಿರಿಯ ನಟಿ ಸಿಮಿ ಗ್ರೆವಾಲ್ ಅವರು ಸುನಿಲ್ಗೆ ಹೃದಯ ಸಮಸ್ಯೆ ಆಗಿದೆ ಎಂಬುದನ್ನು ಬರೆದುಕೊಂಡಿದ್ದರು. ‘ಸುನಿಲ್ ಗ್ರೋವರ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ವಿಚಾರ ನಿಜಕ್ಕೂ ಶಾಕಿಂಗ್ ಆಗಿದೆ. ಅವರು ನಮ್ಮನ್ನು ನಗಿಸಿದ್ದರು. ಈಗ ಅವರಿಗೇ ಹೃದಯ ಸಮಸ್ಯೆ ಕಾಡಿದೆ. ಅವರು ಬೇಗ ಗುಣಮುಖರಾಗಲಿ ಎಂದು ನಾನು ಕೋರಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಈ ವಿಚಾರ ಹರಡುತ್ತಿದ್ದಂತೆ ಅಭಿಮಾನಿಗಳ ವಲಯದಲ್ಲಿ ಆತಂಕ ಎದುರಾಗಿತ್ತು. ಆದರೆ, ಈಗ ಆತಂಕ ದೂರವಾಗುವ ಸುದ್ದಿ ಹೊರ ಬಿದ್ದಿದೆ.
‘ದಿ ಕಪಿಲ್ ಶರ್ಮಾ ಶೋ’ ಮೂಲಕ ಹೆಚ್ಚು ಗುರುತಿಸಿಕೊಂಡವರು ಸುನಿಲ್ ಗ್ರೋವರ್. ಗುಲಾಟಿ ಹಾಗೂ ಮಷೂರ್ ಗುಲಾಟಿ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡರು. ಆದರೆ, ಸುನಿಲ್ ಹಾಗೂ ಕಪಿಲ್ ನಡುವೆ ಮನಸ್ತಾಪ ಮೂಡಿತು. ಹೀಗಾಗಿ, ಇಬ್ಬರೂ ಬೇರೆ ಆದರು.
ಇದನ್ನೂ ಓದಿ: ಅಪ್ಪು ಸಮಾಧಿಗೆ ನಮಿಸಲು ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್; ಪುನೀತ್ ಮನೆ ಮುಂದೆ ಫ್ಯಾನ್ಸ್ ದಂಡು