Darsheel Safary: ‘ಉಬ್ಬು ಹಲ್ಲು ಅಂತ ಶಾಲೆಯಲ್ಲಿ ಅವಮಾನ ಆಗಿತ್ತು, ಆದ್ರೆ ಅದರಿಂದಲೇ ಸಿನಿಮಾ ಚಾನ್ಸ್​ ಸಿಕ್ತು’: ದರ್ಶೀಲ್​ ಸಫಾರಿ

| Updated By: ಮದನ್​ ಕುಮಾರ್​

Updated on: Nov 18, 2022 | 12:24 PM

Taare Zameen Par | Darsheel Safary: 2007ರಲ್ಲಿ ತೆರೆಕಂಡ ‘ತಾರೆ ಜಮೀನ್​ ಪರ್​’ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡಿತು. ಹಾಗಿದ್ದರೂ ಕೂಡ ದರ್ಶೀಲ್​ ಸಫಾರಿ ಅವರು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಳ್ಳಲಿಲ್ಲ.

Darsheel Safary: ‘ಉಬ್ಬು ಹಲ್ಲು ಅಂತ ಶಾಲೆಯಲ್ಲಿ ಅವಮಾನ ಆಗಿತ್ತು, ಆದ್ರೆ ಅದರಿಂದಲೇ ಸಿನಿಮಾ ಚಾನ್ಸ್​ ಸಿಕ್ತು’: ದರ್ಶೀಲ್​ ಸಫಾರಿ
ದರ್ಶೀಲ್ ಸಫಾರಿ
Follow us on

ಭಾರತೀಯ ಚಿತ್ರರಂಗಕ್ಕೆ ಸಾಕಷ್ಟು ವಿಶೇಷ ಸಿನಿಮಾಗಳನ್ನು ಆಮಿರ್​ ಖಾನ್ (Aamir Khan)​ ನೀಡಿದ್ದಾರೆ. ಆ ಪೈಕಿ ಮಕ್ಕಳ ಮತ್ತು ಪೋಷಕರ ಗಮನವನ್ನು ಹೆಚ್ಚಾಗಿ ಸೆಳೆದಿದ್ದು ‘ತಾರೆ ಜಮೀನ್ ಪರ್​’ (Taare Zameen Par) ಸಿನಿಮಾ. ಆ ಚಿತ್ರಕ್ಕೆ ಆಮಿರ್​ ಖಾನ್​ ನಿರ್ದೇಶನ ಮಾಡುವುದರ ಜೊತೆಗೆ ಒಂದು ಚಿಕ್ಕ ಪಾತ್ರವನ್ನೂ ಮಾಡಿದ್ದರು. ಆ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದು ಬಾಲನಟ ದರ್ಶೀಲ್ ಸಫಾರಿ. ವಿದ್ಯಾಭ್ಯಾಸದಲ್ಲಿ ಚುರುಕು ಇಲ್ಲದ ಬಾಲಕನ ಪಾತ್ರವನ್ನು ದರ್ಶೀಲ್ ಸಫಾರಿ (Darsheel Safary) ಮಾಡಿದ್ದರು. ಆ ಸಿನಿಮಾ ರಿಲೀಸ್​ ಆದ ಬಳಿಕ ಅವರಿಗೆ ದೇಶಾದ್ಯಂತ ಜನಪ್ರಿಯತೆ ಸಿಕ್ಕಿತು. ಆದರೆ ಅದಕ್ಕೂ ಮುನ್ನ ಅವರು ಸಾಕಷ್ಟು ಅವಮಾನ ಅನುಭವಿಸಿದ್ದರು. ಅದಕ್ಕೆ ಕಾರಣ ಆಗಿದ್ದು ಅವರ ಉಬ್ಬು ಹಲ್ಲು!

ದರ್ಶೀಲ್​ ಸಫಾರಿ ಅವರಿಗೆ ಉಬ್ಬು ಹಲ್ಲು ಇದೆ ಎಂಬ ಕಾರಣಕ್ಕೆ ಎಲ್ಲರೂ ಅವರನ್ನು ಆಡಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಲೇವಡಿ ಮಾಡಲಾಗುತ್ತಿತ್ತು. ಅವರು ಹೆಚ್ಚು ಹೈಟ್​ ಇಲ್ಲ ಎಂಬ ಕಾರಣಕ್ಕೂ ಜನರು ಅವಮಾನ ಮಾಡುತ್ತಿದ್ದರು. ಅದರಿಂದ ದರ್ಶೀಲ್​ ಸಫಾರಿ ಸಾಕಷ್ಟು ನೋವು ಅನುಭವಿಸಿದ್ದರು. ಅಚ್ಚರಿ ಎಂದರೆ ಆ ರೀತಿ ಉಬ್ಬು ಹಲ್ಲು ಇದೆ ಎಂಬ ಕಾರಣದಿಂದಲೇ ಅವರಿಗೆ ‘ತಾರೆ ಜಮೀನ್​ ಪರ್​’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಅವರ ಬದುಕು ಬದಲಾಯಿತು.

2007ರಲ್ಲಿ ತೆರೆಕಂಡ ‘ತಾರೆ ಜಮೀನ್​ ಪರ್​’ ಸಿನಿಮಾ ತುಂಬ ಜನಮೆಚ್ಚುಗೆ ಪಡೆದುಕೊಂಡಿತು. ಹಾಗಿದ್ದರೂ ಕೂಡ ದರ್ಶೀಲ್​ ಅವರು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಳ್ಳಲಿಲ್ಲ. ಬದಲಿಗೆ, ವಿದ್ಯಾಭ್ಯಾಸದ ಕಡೆಗೆ ಅವರು ಗಮನ ಹರಿಸಿದರು. ಜೊತೆಗೆ ರಂಗಭೂಮಿಯಲ್ಲೂ ತೊಡಗಿಕೊಂಡರು. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಒಪ್ಪಿಕೊಂಡರು.

ಇದನ್ನೂ ಓದಿ
Murder: ಬಾಡಿ ಶೇಮಿಂಗ್​​ನಿಂದ ಬೇಸತ್ತು ಸಹಪಾಠಿಯನ್ನೇ ಇರಿದು ಕೊಂದ ಪಿಯುಸಿ ವಿದ್ಯಾರ್ಥಿ
ಬಾಡಿ ಶೇಮಿಂಗ್​ ಮಾಡಿದ ಅಭಿಮಾನಿಗೆ ನಟಿ ಕೊಟ್ರು ಖಡಕ್​ ಉತ್ತರ
ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ
ನಟಿಯ ದೇಹದ ಖಾಸಗಿ ಅಂಗಗಳ ಬಗ್ಗೆ ಹೀಗೆಲ್ಲ ಮಾತಾಡ್ತಾರಾ ನಿರ್ದೇಶಕರು? ರಿಚಾ ಹೇಳಿದ ಕಹಿ ಸತ್ಯಗಳು

2010ರಲ್ಲಿ ಬಂದ ‘ಬಂ ಬಂ ಭೋಲೆ’, 2012ರಲ್ಲಿ ತೆರೆಕಂಡ ‘ಮಿಡ್​ನೈಟ್​ ಚಿಲ್ಡ್ರನ್​’ ಮುಂತಾದ ಚಿತ್ರಗಳಲ್ಲಿ ದರ್ಶೀಲ್​ ಸಫಾರಿ ನಟಿಸಿದರು. ಚಿಕ್ಕ ವಯಸ್ಸಿನಲ್ಲಿ ಉಬ್ಬು ಹಲ್ಲಿನ ಕಾರಣಕ್ಕೆ ಆದ ಅವಮಾನದಿಂದಾಗಿ ಅವರು ಅನೇಕ ಪಾಠಗಳನ್ನು ಕಲಿತಿದ್ದಾರೆ. ‘ನಾನು ಸೂಕ್ಷ್ಮ ಸ್ವಭಾವದ ವ್ಯಕ್ತಿ. ನಟನಾದ ಮೇಲೆ ಕೆಲವು ವಿಚಾರಗಳಿಗೆ ಕಿವಿಗೊಡಬಾರದು. ಆದರೆ ಎಲ್ಲವನ್ನೂ ನಿರ್ಲಕ್ಷಿಸೋಕೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಈಗ ದರ್ಶೀಲ್​ ಸಫಾರಿ ಬೆಳೆದು ದೊಡ್ಡವರಾಗಿದಾರೆ. ಇತ್ತೀಚೆಗೆ ಅವರು ನಟಿಸಿದ ‘ಕ್ಯಾಪಿಟಲ್​ ಎ, ಸ್ಮಾಲ್ ಎ’ ಕಿರುಚಿತ್ರ ಬಿಡುಗಡೆ ಆಯಿತು. ಅಮೇಜಾನ್​ ಮಿನಿ ಟಿವಿಯಲ್ಲಿ ಬಿತ್ತರವಾದ ಈ ಕಿರುಚಿತ್ರದಲ್ಲಿ ಅವರು ರೊಮ್ಯಾಂಟಿಕ್ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ರೇವತಿ ಪಿಳ್ಳೈ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Fri, 18 November 22