ಮೈಕೆಲ್ ಜಾಕ್ಸನ್ ಭಾರತಕ್ಕೆ ಬಂದಾಗ ಷರತ್ತು ಹಾಕಿದ್ದ ‘ಪ್ರೀತ್ಸೆ’ ನಟಿ ಸೊನಾಲಿ ಬೇಂದ್ರೆ
ಮೈಕಲ್ ಜಾಕ್ಸನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗ ಸೊನಾಲಿ ಬೇಂದ್ರೆ ಅವರು ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ಆಯೋಜಕರಿಗೆ ಅವರು ಒಂದು ಕಂಡಿಷನ್ ಹಾಕಿದ್ದರು. ಆ ಘಟನೆಯನ್ನು ಈಗ ಸೊನಾಲಿ ಬೇಂದ್ರೆ ಅವರು ಮೆಲುಕು ಹಾಕಿದ್ದಾರೆ. ಅಂದಹಾಗೆ, ಈ ಘಟನೆ ನಡೆದಿದ್ದು 1996ರಲ್ಲಿ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಪಾಪ್ ಲೋಕದಲ್ಲಿ ಮೈಕಲ್ ಜಾಕ್ಸನ್ (Michael Jackson) ಹುಟ್ಟುಹಾಕಿದ್ದ ಕ್ರೇಜ್ ಅಷ್ಟಿಷ್ಟಲ್ಲ. ಅವರ ಹಾಡು ಮತ್ತು ಡ್ಯಾನ್ಸ್ ವಿಶ್ವಾದ್ಯಂತ ಫೇಮಸ್ ಆಗಿತ್ತು. ಮೈಕಲ್ ಜಾಕ್ಸನ್ ಅವರಿಗೆ ಎಲ್ಲ ದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ. ಅವರನ್ನು ಒಮ್ಮೆಯಾದರೂ ನೇರವಾಗಿ ನೋಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತಿತ್ತು. ಇನ್ನು, ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ.. ಯಾರಾದ್ರೂ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳಲೇಬೇಕು. ಆದರೆ ನಟಿ ಸೊನಾಲಿ ಬೇಂದ್ರೆ ಅವರು ಸ್ವಲ್ಪ ಡಿಫರೆಂಟ್. ಮೈಕಲ್ ಜಾಕ್ಸನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೂ ಕೂಡ ಸೊನಾಲಿ ಬೇಂದ್ರೆ (Sonali Bendre) ಅವರು ಒಂದು ಕಂಡಿಷನ್ ಹಾಕಿದ್ದರು!
ಅದು 1996ರ ಸಮಯ. ಮೈಕಲ್ ಜಾಕ್ಸನ್ ಅವರು ‘ಹಿಸ್ಟರಿ ವರ್ಲ್ಡ್ ಟೂರ್’ ಮಾಡುತ್ತಿದ್ದರು. ಹಲವು ದೇಶಗಳಿಗೆ ತೆರಳಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಒಟ್ಟು 35 ದೇಶಗಳಿಗೆ ಭೇಟಿ ನೀಡಿ, 57 ನಗರಗಳಲ್ಲಿ ಅವರು ಲೈವ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಭಾರತಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದೇ ನಟಿ ಸೊನಾಲಿ ಬೇಂದ್ರೆ. ಆದರೆ ಒಂದು ಷರತ್ತಿನ ಮೇರೆಗೆ.
ಮೈಕಲ್ ಜಾಕ್ಸನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಸ್ವಾಗತಿಸಲು ರಾಜ್ ಠಾಕ್ರೆ ಮತ್ತು ಸೊನಾಲಿ ಬೇಂದ್ರ ತೆರಳಿದ್ದರು. ಆದರೆ ಈ ಕೆಲಸ ಮಾಡಲು ಸೊನಾಲಿ ಬೇಂದ್ರೆ ಅವರು ಅಷ್ಟು ಸುಲಭಕ್ಕೆ ಒಪ್ಪಿಕೊಂಡಿರಲಿಲ್ಲ. ಆಗ ಬಾಲಿವುಡ್ನಲ್ಲಿ ಅವರು ಬಹುಬೇಡಿಕೆಯ ನಟಿ ಆಗಿದ್ದರು. ಆ ಘಟನೆಯನ್ನು ಅವರೀಗ ನೆನಪಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಭದಲ್ಲಿ ಸೊನಾಲಿ ಬೇಂದ್ರೆ ಅವರು ಆ ಘಟನೆ ವಿವರಿಸಿದ್ದಾರೆ. ‘ಮೈಕಲ್ ಜಾಕ್ಸನ್ ಅವರನ್ನು ಸ್ವಾಗತಿಸಬೇಕು ಅಂತ ನನಗೆ ಹೇಳಿದರು. ಆದರೆ ನಾನು ಷರತ್ತು ಹಾಕಿದೆ. ಮೈಕಲ್ ಜಾಕ್ಸನ್ ಅವರ ಕಾರ್ಯಕ್ರಮದ ಹಲವು ಟಿಕೆಟ್ಗಳನ್ನು ನೀಡದರೆ ಮಾತ್ರ ಸ್ವಾಗತಿಸಲು ಬರುತ್ತೇನೆ ಎಂದೆ. ನಮಗೆ ಸಾಕಷ್ಟು ಟಿಕೆಟ್ಸ್ ಸಿಕ್ಕವು. ನಾನು, ನನ್ನ ಸ್ನೇಹಿತೆಯರು, ನನ್ನ ಸಹೋದರಿ ಮತ್ತು ಆಕೆಯ ಫ್ರೆಂಡ್ಸ್ ಕೂಡ ಟಿಕೆಟ್ ಪಡೆದೆವು’ ಎಂದಿದ್ದಾರೆ ಸೊನಾಲಿ ಬೇಂದ್ರೆ.
ಇದನ್ನೂ ಓದಿ: ಮೈಕಲ್ ಜಾಕ್ಸನ್ ಸಾಯುವಾಗ ಇತ್ತು ಬರೋಬ್ಬರಿ 3,700 ಕೋಟಿ ರೂಪಾಯಿ ಸಾಲ
1994ರಲ್ಲಿ ಸೊನಾಲಿ ಬೇಂದ್ರೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದರು. ಕನ್ನಡದ ‘ಪ್ರೀತ್ಸೆ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಉಪೇಂದ್ರ ಜೊತೆ ಸೊನಾಲಿ ಬೇಂದ್ರೆ ಅಭಿನಯಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








