ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಕಳೆದ ವರ್ಷ ಡ್ರಗ್ಸ್ ಕೇಸ್ನಲ್ಲಿ (Drug Case) ಅರೆಸ್ಟ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆ ಪ್ರಕರಣದಿಂದ ಆರ್ಯನ್ ಬದುಕಿನಲ್ಲಿ ಕಪ್ಪು ಚುಕ್ಕಿ ಬಿದ್ದಂತಾಗಿದೆ. ಈ ಕೇಸ್ನಲ್ಲಿ ಅವರಿಗೆ ಇತ್ತೀಚೆಗೆ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಾಗಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಆರ್ಯನ್ ಖಾನ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಕೂಡ ಅವರನ್ನು ತಿಂಗಳುಗಟ್ಟಲೆ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಇದರಿಂದ ಶಾರುಖ್ ಪುತ್ರನ ಇಮೇಜ್ಗೆ ಸಾಕಷ್ಟು ಧಕ್ಕೆ ಉಂಟಾಯಿತು. ಕಸ್ಟಡಿಯಲ್ಲಿ ಇದ್ದಾಗ ಎನ್ಸಿಬಿ ಅಧಿಕಾರಿಗಳಿಗೆ ಆರ್ಯನ್ ಖಾನ್ ಅವರು ಕೆಲವು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದ್ದರು. ಆ ಬಗ್ಗೆ ಹಿರಿಯ ಎನ್ಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಹಾಗಾದರೆ ಎನ್ಸಿಬಿ ಅಧಿಕಾರಿಗಳು ಮತ್ತು ಆರ್ಯನ್ ಖಾನ್ (Aryan Khan) ನಡುವೆ ನಡೆದ ಆ ಸಂಭಾಷಣೆಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ಡ್ರಗ್ಸ್ ಕೇಸ್ ಬಗ್ಗೆ ಆರ್ಯನ್ ಖಾನ್ ಅವರು ಈವರೆಗೂ ಮೌನ ಮುರಿದಿಲ್ಲ. ಆದರೆ ಅವರು ಕಸ್ಟಡಿಯಲ್ಲಿ ಇದ್ದಾಗ ಮಾತನಾಡಿದ್ದರ ಬಗ್ಗೆ ಹಿರಿಯ ಅಧಿಕಾರಿ ಸಂಜಯ್ ಸಿಂಗ್ ಬಾಯಿ ಬಿಟ್ಟಿದ್ದಾರೆ. ಸಂಜಯ್ ಸಿಂಗ್ ಅವರು ಎನ್ಸಿಬಿಯ ಉಪ ನಿರ್ದೇಶಕರಾಗಿದ್ದು, ಆರ್ಯನ್ ಕೇಸ್ನಲ್ಲಿ ವಿಶೇಷ ತನಿಖಾತಂಡದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಆಗಿದ್ದನ್ನು ಈಗ ಅವರು ವಿವರಿಸಿದ್ದಾರೆ.
ಸಂಜಯ್ ಸಿಂಗ್ ಪ್ರಕಾರ ಆರ್ಯನ್ ಖಾನ್ ಹೇಳಿದ್ದೇನು?
‘ಸರ್.. ನೀವು ನನ್ನನ್ನು ಇಂಟರ್ನ್ಯಾಷನಲ್ ಡ್ರಗ್ಸ್ ಟ್ರಾಫಿಕರ್ ರೀತಿ ಬಿಂಬಿಸಿದ್ದೀರಿ. ಮಾದಕ ವಸ್ತು ಸಾಗಣೆಗೆ ನಾನು ಆರ್ಥಿಕ ಬೆಂಬಲ ನೀಡಿದ್ದೇನೆ ಅನ್ನೋ ರೀತಿಯಲ್ಲಿ ಟ್ರೀಟ್ ಮಾಡಿದ್ದೀರಿ. ಇದೆಲ್ಲ ವಿಚಿತ್ರ ಆರೋಪಗಳಲ್ಲವೇ? ನನ್ನಲ್ಲಿ ಯಾವುದೇ ರೀತಿಯ ಡ್ರಗ್ಸ್ ಸಿಗದಿದ್ದರೂ ಕೂಡ ಅರೆಸ್ಟ್ ಮಾಡಿದ್ದೀರಿ. ನನ್ನ ವಿಚಾರದಲ್ಲಿ ನೀವು ತುಂಬಾ ತಪ್ಪು ಮಾಡಿದ್ದೀರಿ ಸರ್. ನನ್ನ ಪ್ರತಿಷ್ಠೆಯನ್ನು ಹಾಳು ಮಾಡಿದ್ದೀರಿ. ನಾನು ಯಾಕೆ ಇಷ್ಟು ವಾರಗಳ ಕಾಲ ಜೈಲಿನಲ್ಲಿ ಇರಬೇಕು? ಈ ಶಿಕ್ಷೆಗೆ ನಾನು ಅರ್ಹನೇ?’ ಎಂದು ಆರ್ಯನ್ ಖಾನ್ ಪ್ರಶ್ನಿಸಿದ್ದರು ಎಂದು ಸಂಜಯ್ ಸಿಂಗ್ ಹೇಳಿರುವುದಾಗಿ ವರದಿ ಆಗಿದೆ.
ಇದನ್ನೂ ಓದಿ: ‘ಆರ್ಯನ್ ಖಾನ್ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್ ಮಲಿಕ್ ಗಂಭೀರ ಆರೋಪ
ಸದ್ಯ ಆರ್ಯನ್ ಖಾನ್ ಅವರು ಈಗ ನಾರ್ಮಲ್ ಜೀವನಕ್ಕೆ ಮರಳಿದ್ದಾರೆ. ಸಾರ್ವಜನಿಕವಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರಗ್ಸ್ ಕೇಸ್ನ ಕಹಿ ಘಟನೆ ಕುರಿತು ಅವರು ಎಲ್ಲಿಯೂ ಮಾತನಾಡುತ್ತಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:56 pm, Sat, 11 June 22