ಬಾಲಿವುಡ್ ನಟ ವಿಕ್ಕಿ ಕೌಶಲ್​ಗೆ ಇದೆ ವಿಚಿತ್ರ ಸಮಸ್ಯೆ; ಇದರಿಂದ ಲಾಭವೇ ಜಾಸ್ತಿ

ವಿಕ್ಕಿ ಕೌಶಲ್ ಅವರಿಗೆ ಅಸಾಮಾನ್ಯ ತೂಕದ ಸಮಸ್ಯೆ ಇದೆ. ಅವರು ಜಂಕ್ ಫುಡ್ ತಿಂದರೂ ತೂಕ ಕಡಿಮೆಯಾಗುತ್ತದೆ. ತೂಕ ಹೆಚ್ಚಿಸಲು ಅವರು ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ವ್ಯಾಯಾಮ ಪಾಲಿಸಬೇಕು. ವಿವಿಧ ಚಲನಚಿತ್ರಗಳಿಗಾಗಿ ತೂಕ ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಅವರ ವೃತ್ತಿಪರ ಅವಶ್ಯಕತೆ. 'ಉರಿ' ಮತ್ತು 'ಛಾವಾ' ಚಿತ್ರಗಳಿಗೆ ತೂಕ ಹೆಚ್ಚಿಸಿಕೊಂಡಿದ್ದರು.

ಬಾಲಿವುಡ್ ನಟ ವಿಕ್ಕಿ ಕೌಶಲ್​ಗೆ ಇದೆ ವಿಚಿತ್ರ ಸಮಸ್ಯೆ; ಇದರಿಂದ ಲಾಭವೇ ಜಾಸ್ತಿ
ವಿಕ್ಕಿ
Updated By: ರಾಜೇಶ್ ದುಗ್ಗುಮನೆ

Updated on: Apr 22, 2025 | 8:12 AM

ಸಾಮಾನ್ಯವಾಗಿ ಹೊರಗಿನ ಆಹಾರ ತಿಂದರೆ ಅದರಲ್ಲೂ ಚೀಸ್ ಹಾಕಿದ ವಸ್ತುಗಳ ಸೇವನೆ ಮಾಡಿದರೆ, ಜಂಕ್ ಫುಡ್​ಗಳನ್ನು ತಿಂದರೆ ದೇಹದ ತೂಕ ಅತಿಯಾಗಿ ಏರಿಕೆ ಆಗುತ್ತದೆ. ಇದು ಸೆಲೆಬ್ರಿಟಿಗಳ ಪಾಲಿಗೆ ದೊಡ್ಡ ಚಿಂತೆಯ ವಿಚಾರ. ಆದರೆ, ವಿಕ್ಕಿ ಕೌಶಲ್ (Vicky Kaushal) ಅವರು ದೇಹದ ರೀತಿಯೇ ಬೇರೆ. ಅವರಿಗೆ ಜಂಕ್ ಫುಡ್​ಗಳನ್ನು ತಿಂದರೂ ದೇಹದ ತೂಕ ಕಳೆದು ಹೋಗುತ್ತದೆ ಎಂದಿದ್ದರು. ವಿಕ್ಕಿ ಕೌಶಲ್ ಅವರ ದೇಹದ ರೀತಿಯನ್ನು ಕಂಡು ಅನೇಕರು ಅಚ್ಚರಿ ಹೊರಹಾಕಿದ್ದರು.

ಈ ಮೊದಲು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ ವಿಕ್ಕಿ ಕೌಶಲ್ ಅವರು ಆಗಮಿಸಿದ್ದರು. ಅವರು ಎಷ್ಟೇ ತಿಂದರೂ ದೇಹದ ತೂಕ ಏರುವುದಿಲ್ಲ ಎಂದಿದ್ದರು. ಅವರ ದೇಹದ ರೀತಿ ಆ ರೀತಿ ಇದೆ. ಆದಾಗ್ಯೂ ಅವರು ಜಂಕ್ ಫುಡ್​ಗಳನ್ನು ತಿನ್ನೋದಿಲ್ಲ.

ಇದನ್ನೂ ಓದಿ
ಶ್ರೀದೇವಿನ ಕನ್ನಡಕ್ಕೆ ತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?
ಚಾಕು ಇರಿತ ಪ್ರಕರಣ ನಡೆದ 3 ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್

‘ನನಗೆ ಸುಂದರ ಸಮಸ್ಯೆ ಇದೆ. ನನ್ನ ತೂಕ ಏರಲ್ಲ. ಪಿಜ್ಜಾ-ಬರ್ಗರ್ ತಿಂದು ದೇಹದ ತೂಕ ಇಳಿಸಿಕೊಳ್ಳಬಹುದು. ದೇಹದ ತೂಕ ಏರಿಸಿಕೊಳ್ಳಲು ಬೋರಿಂಗ್ ತಿಂಡಿ ತಿನ್ನಬೇಕು. ಗ್ರಿಲ್ ಆಹಾರ ಸೇವನೆ ಮಾಡಬೇಕು. ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡಬೇಕು’ ಎಂದಿದ್ದರು.

ವಿಕ್ಕಿ ಕೌಶಲ್ ದೇಹವು ದೇಹದ ತೂಕ ಏರದಂತೆ ನೋಡಿಕೊಳ್ಳುತ್ತದೆ. ಹೀಗಾಗಿ, ಅತ್ಯಧಿಕವಾಗಿ ತಿಂದು ಜಿಮ್​ನಲ್ಲಿ ವರ್ಕೌಟ್ ಮಾಡಿದರೆ ಮಾತ್ರ ತೂಕ ಏರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ವಿಕ್ಕಿ ಕೌಶಲ್ ಅವರು ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡುತ್ತಾರೆ.

ಸಿನಿಮಾದಿಂದ ಸಿನಿಮಾಗೆ ವಿಕ್ಕಿ ಕೌಶಲ್ ಅವರು ಭಿನ್ನ ಪಾತ್ರ ಮಾಡುತ್ತಾರೆ. ಒಮ್ಮೆ ತೂಕ ಇಳಿಸಿಕೊಳ್ಳಬೇಕಾದರೆ, ಒಮ್ಮೆ ಏರಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಸಿಂಪತಿ ಗಳಿಸಲು ತಮಗೆ ಕಷ್ಟ ಇತ್ತು ಎಂದು ಸುಳ್ಳು ಹೇಳಿದ್ರಾ ವಿಕ್ಕಿ ಕೌಶಲ್?

‘ಉರಿ’ ಸಿನಿಮಾಗಾಗಿ ವಿಕ್ಕಿ ಕೌಶಲ್ ಅವರು 15 ಕೆಜಿ ದೇಹದ ತೂಕ ಏರಿಸಿಕೊಂಡಿದ್ದರು. ‘ಛಾವಾ’ ಸಿನಿಮಾಗಾಗಿ 25 ಕೆಜಿ ಹೆಚ್ಚಿಸಿಕೊಂಡರು. ಅವರು ಈಗ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಅವರು ದೇಹದ ತೂಕ ಇಳಿಸಿಕೊಳ್ಳಬೇಕಿದೆ.  ವಿಕ್ಕಿ ಕೌಶಲ್ ಅವರು ಶಿಸ್ತಿನ ಡಯಟ್ ನಡೆಸುತ್ತಾರೆ. ಅವರು ಸಾಕಷ್ಟು ಎಗ್ಸಸೈಸ್ ಮಾಡುತ್ತಾರೆ. ಎಲ್ಲಿಯೂ ಜಂಕ್ ಫುಡ್​ಗಳನ್ನು ಮಾಡುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.