ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು 2023ರ ಕಾನ್ ಚಿತ್ರೋತ್ಸವಲ್ಲಿ (Cannes Film Festival 2023) ಪಾಲ್ಗೊಂಡಿದ್ದಾರೆ. ಮೇ 16ರಿಂದ ಮೇ 27ರವರೆಗೆ ನಡೆಯುವ ಈ ಸಿನಿಮೋತ್ಸವದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿನ ರೆಡ್ ಕಾರ್ಪೆಟ್ ಪ್ರಮುಖ ಆಕರ್ಷಣೆ. ವಿವಿಧ ದೇಶದ ಸೆಲೆಬ್ರಿಟಿಗಳು ಬಣ್ಣ ಬಣ್ಣದ ಉಡುಗೆ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ. ಅದೇ ರೀತಿ ಐಶ್ವರ್ಯಾ ರೈ ಬಚ್ಚನ್ ಕೂಡ ತಮ್ಮಿಷ್ಟದ ಕಾಸ್ಟ್ಯೂಮ್ ಧರಿಸಿ ಪೋಸ್ ನೀಡಿದ್ದಾರೆ. ಆದರೆ ಅವರ ಉದ್ದದ ಬಟ್ಟೆಯನ್ನು ನಿಭಾಯಿಸಲು ಓರ್ವ ವ್ಯಕ್ತಿಯನ್ನು ಅವರು ನೇಮಿಸಿಕೊಂಡಿದ್ದರು. ಆ ರೀತಿಯ ಸಹಾಯಕರಿಗೆ ‘ಕಾಸ್ಟ್ಯೂಮ್ ಸ್ಲೇವ್ಸ್’ ಎಂದು ಕರೆಯಲಾಗುತ್ತದೆ. ಇಂಥ ಪದ್ಧತಿ ಸರಿಯಲ್ಲ ಎಂದು ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಟೀಕೆ ಮಾಡಿದ್ದಾರೆ. ಅಲ್ಲದೇ ಇದನ್ನು ಮೂರ್ಖತನ ಎಂದು ಅವರು ಕರೆದಿದ್ದಾರೆ. ಇದು ಐಶ್ವರ್ಯಾ ರೈ ಬಚ್ಚನ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.
‘ಕಾಸ್ಟ್ಯೂಮ್ ಗುಲಾಮರು’ ಎಂಬ ಪದವನ್ನು ನೀವು ಕೇಳಿದ್ದೀರಾ? ಅವರು ಹೆಚ್ಚಾಗಿ ಹುಡುಗಿಯರಾಗಿರುತ್ತಾರೆ. ನೀವು ಅವರನ್ನು ಈಗ ಭಾರತದಲ್ಲಿಯೂ ಸಹ ಪ್ರತಿಯೊಬ್ಬ ಮಹಿಳಾ ಸೆಲೆಬ್ರಿಟಿಗಳ ಜೊತೆ ನೋಡಬಹುದು. ಹೊಂದಿಕೆ ಆಗದಂತಹ ಫ್ಯಾಷನ್‌ಗಾಗಿ ನಾವು ಏಕೆ ಮೂರ್ಖರಾಗಿದ್ದೇವೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದೇವೆ?’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ.
Have you guys heard of a term called ‘Costume Slaves’. They are mostly girls (a suited man in this case). You can see them now in India too with almost every female celeb. Why are we becoming so stupid and oppressive just for such uncomfortable fashion? pic.twitter.com/bWYavPYjvS
— Vivek Ranjan Agnihotri (@vivekagnihotri) May 19, 2023
ನೆಟ್ಟಿಗರು ಐಶ್ವರ್ಯಾ ರೈ ಬಚ್ಚನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ನಿಮ್ಮನ್ನು ಕಾನ್ ಚಿತ್ರೋತ್ಸವಕ್ಕೆ ಕರೆದಿಲ್ಲ ಅಂತ ಹೊಟ್ಟೆ ಕಿಚ್ಚು ಆಗುತ್ತಿದೆಯೇ’ ಎಂದು ವಿವೇಕ್ ಅಗ್ನಿಹೋತ್ರಿಗೆ ಜನರು ಪ್ರಶ್ನಿಸಿದ್ದಾರೆ. ತಮಗೆ ಸಂಬಂಧ ಇಲ್ಲದ ಅನೇಕ ವಿಚಾರಗಳ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಹಿಟ್ ಆದ ಬಳಿಕ ಅವರಿಗೆ ಖ್ಯಾತಿ ಹೆಚ್ಚಿತು.
ದೆಹಲಿ ಮೆಟ್ರೋದಲ್ಲಿ ಪೊಲೀಸ್ ನಿಯೋಜನೆ ಮಾಡುವ ಬಗ್ಗೆಯೂ ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ಕೆಲವೇ ದಿನಗಳ ಹಿಂದೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಿಂದ ಆಕ್ಷೇಪಾರ್ಹ ವರ್ತನೆ ಕಂಡು ಬಂದ ಹಿನ್ನೆಲೆಯಲ್ಲಿ ಕೋಚ್‌ಗಳ ಒಳಗೆ ಪೊಲೀಸ ಗಸ್ತು ಇರುತ್ತದೆ ಎಂದು ವರದಿಯಾಗಿತ್ತು. ಆ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದರು. ‘ಇದು ತುಂಬಾ ಮೂರ್ಖತನ’ ಎಂದು ಪೋಸ್ಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.