ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಪ್ರತಿ ನಡೆಯೂ ಈಗ ಚರ್ಚೆಗೆ ಒಳಗಾಗುತ್ತಿದೆ. ಇತ್ತೀಚೆಗೆ ನಡೆದ ಗೋವಾ ಸಿನಿಮೋತ್ಸವದಲ್ಲಿ ಅವರ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬಂದಿದ್ದವು. ಸಿನಿಮೋತ್ಸವದ ಜ್ಯೂರಿ ಕಮಿಟಿಯ ಅಧ್ಯಕ್ಷರಾಗಿದ್ದ ನಡಾವ್ ಲಪಿಡ್ ಅವರು ಈ ಚಿತ್ರವನ್ನು ಕಟುವಾಗಿ ಟೀಕಿಸಿದ್ದರು. ಆ ವಿಚಾರವನ್ನೆಲ್ಲ ಬದಿಗಿಟ್ಟು ವಿವೇಕ್ ಅಗ್ನಿಹೋತ್ರಿ ಅವರು ಹೊಸ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಈ ಮೊದಲೇ ತಿಳಿಸಿರುವಂತೆ ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರು ಇಡಲಾಗಿತ್ತು. 2020ರಲ್ಲಿ ಕೊರೊನಾ ವೈರಸ್ ಹಾವಳಿ ಎದುರಾದಾಗ ಅದರ ವಿರುದ್ಧ ಭಾರತ ಹೇಗೆ ಹೋರಾಟ ನಡೆಸಿತು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲು ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ಅದರ ಬೆನ್ನಲ್ಲೇ ಕೆಲವು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ಮೋದಿ ಸರ್ಕಾರದ ಪರವಾಗಿ ಇದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಈಗ ಅವರು ವ್ಯಾಕ್ಸಿನ್ ಕುರಿತು ಮಾಡಲು ಹೊರಟಿರುವ ಚಿತ್ರ ಕೂಡ ಮೋದಿ ಸರ್ಕಾರವನ್ನು ಹೊಗಳುವ ಪ್ರಚಾರದ ಸಿನಿಮಾ ಆಗಲಿದೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಈ ಚಿತ್ರವನ್ನು ಮಾಡಲಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಶೂಟಿಂಗ್ಗೆ ಭರದ ಸಿದ್ಧತೆ ನಡೆದಿದೆ. ಇದನ್ನು ತಿಳಿಸುವ ಸಲುವಾಗಿ ವಿವೇಕ್ ಅಗ್ನಿಹೋತ್ರಿ ಅವರು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಸರ್ಕಾರದ ಪರವಾಗಿ ಸಿನಿಮಾ ಮಾಡುತ್ತಿರುವುದಕ್ಕೆ ‘ಇಡಿ ಮತ್ತು ಐಟಿ ದಾಳಿಯಿಂದ ತಪ್ಪಿಸಿಕೊಂಡಿದ್ದೀರಿ’ ಎಂಬ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ: Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್ ಅಗ್ನಿಹೋತ್ರಿ ಸವಾಲು
‘ಮುಂದಿನ ಬಾರಿ ನಡೆಯಲಿರುವ ಸಿನಿಮೋತ್ಸವಕ್ಕೆ ನಡಾವ್ ಲಪಿಡ್ ಅವರನ್ನು ಕರೆಯೋದು ಬೇಡ ಅಂತ ನಿಮ್ಮ ಸರ್ಕಾರಕ್ಕೆ ಹೇಳಿ. ವಿವೇಕ್ ಅಗ್ನಿಹೋತ್ರಿಯೇ ಜ್ಯೂರಿ ಕಮಿಟಿ ಅಧ್ಯಕ್ಷರಾಗಲಿ. ಅನುರಾಗ್ ಠಾಕೂರ್, ಅನುಪಮ್ ಖೇರ್, ರವಿ ಕಿಶನ್, ಅಕ್ಷಯ್ ಕುಮಾರ್ ಅವರು ಜ್ಯೂರಿ ತಂಡದಲ್ಲಿ ಇರಲಿ’ ಎಂದು ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ.
Getting ready to shoot. #TheVaccineWar #Research pic.twitter.com/xo53Lk00yb
— Vivek Ranjan Agnihotri (@vivekagnihotri) December 10, 2022
Ask your master govt. not to invite Mr. Nadav Lapid and the other jurors in the next IFFI.
Instead, V for Vulgar Agnihotri should head the jury n Anurag Thakur, Anupam Kher, Ravi Kishan and Akshay Kumar should be the other jurors…— Talukdar Symanta Choudhury (@symanta2001) December 10, 2022
2024 election ki taiyari…?? Chalo ED aur income tax se Bach jaoge… ?
— MR. Lazy..?? (@happyladka021) December 10, 2022
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಿತು. ಅದರ ಜೊತೆಗೆ ವಿವಾದಗಳು ಕೂಡ ಶುರುವಾದವು. ‘ವ್ಯಾಕ್ಸಿನ್ ವಾರ್’ ಚಿತ್ರದ ಶೂಟಿಂಗ್ ಆರಂಭವಕ್ಕೂ ಮುನ್ನವೇ ಕೆಲವರಿಂದ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.