AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್-ಶಿಲ್ಪಾ ಪ್ರೇಮ ಸಂಬಂಧ ಮುರಿದು ಬೀಳಲು ಕಾರಣ ಆಗಿದ್ದು ಯಾರು?

ಈ ಜೋಡಿ ಬೇರೆ ಆಗಲು ಹಲವು ಕಾರಣಗಳನ್ನು ನೀಡಲಾಗಿತ್ತು. ಆದರೆ ಅಕ್ಷಯ್ ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ನಿರ್ಮಾಪಕ ಸುನಿಲ್ ದರ್ಶನ್ ಅವರು ಸಂದರ್ಶನವೊಂದರಲ್ಲಿ, ಅಕ್ಷಯ್ ಮತ್ತು ಶಿಲ್ಪಾ ಒಮ್ಮೆ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರು ಎಂದು ಬಹಿರಂಗಪಡಿಸಿದರು. ಅವರ ಸಂಬಂಧ ಏಕೆ ಈ ರೀತಿ ಮುರಿದುಬಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಅಕ್ಷಯ್-ಶಿಲ್ಪಾ ಪ್ರೇಮ ಸಂಬಂಧ ಮುರಿದು ಬೀಳಲು ಕಾರಣ ಆಗಿದ್ದು ಯಾರು?
ಶಿಲ್ಪಾ-ಅಕ್ಷಯ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 09, 2025 | 11:02 AM

Share

ಬಾಲಿವುಡ್‌ನಲ್ಲಿ ಅನೇಕ ಜೋಡಿಗಳ ಪ್ರೇಮ ಸಂಬಂಧಗಳು ಮತ್ತು ಬ್ರೇಕಪ್​ಗಳು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಾ ಇರುತ್ತವೆ. ಅವರಲ್ಲಿ ಒಂದು ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಶೆಟ್ಟಿ ಜೋಡಿ. ಅವರ ಪ್ರೇಮ ಬಾಲಿವುಡ್ ವಲಯಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟಿತು. 90ರ ದಶಕದಲ್ಲಿ, ಈ ಜೋಡಿಯ ಬಗ್ಗೆ ಸಾಕಷ್ಟು ಸುದ್ದಿಗಳಿದ್ದವು. ಅವರ ಸಂಬಂಧವು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದು ಮಾತ್ರವಲ್ಲದೆ, ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ಇವರು ಬೇರೆ ಆದರು.

ಈ ಜೋಡಿ ಬೇರೆ ಆಗಲು ಹಲವು ಕಾರಣಗಳನ್ನು ನೀಡಲಾಗಿತ್ತು. ಆದರೆ ಅಕ್ಷಯ್ ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ನಿರ್ಮಾಪಕ ಸುನಿಲ್ ದರ್ಶನ್ ಅವರು ಸಂದರ್ಶನವೊಂದರಲ್ಲಿ, ಅಕ್ಷಯ್ ಮತ್ತು ಶಿಲ್ಪಾ ಒಮ್ಮೆ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರು ಎಂದು ಬಹಿರಂಗಪಡಿಸಿದರು. ಅವರ ಸಂಬಂಧ ಏಕೆ ಈ ರೀತಿ ಮುರಿದುಬಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

‘ವಿಧಿಗೆ ತನ್ನದೇ ಆದ ಯೋಜನೆಗಳಿವೆ’ ಎಂದು ಸುನೀಲ್ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ, ಟ್ವಿಂಕಲ್ ಖನ್ನಾ ಅವರ ತಂದೆ ರಾಜೇಶ್ ಖನ್ನಾ ಅವರ ಆಪ್ತ ಜ್ಯೋತಿಷಿಯೊಬ್ಬರು ಅಕ್ಷಯ್ ಮತ್ತು ಟ್ವಿಂಕಲ್ ಒಂದು ದಿನ ಮದುವೆಯಾಗುತ್ತಾರೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದರು ಎಂದು ಅವರು ಬಹಿರಂಗಪಡಿಸಿದರು. ಆ ಸಮಯದಲ್ಲಿ, ಸುನಿಲ್ ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ ಎಂದು ಒಪ್ಪಿಕೊಂಡರು. ಏಕೆಂದರೆ ಅವರ ಪ್ರಕಾರ, ಟ್ವಿಂಕಲ್ ಮತ್ತು ಅಕ್ಷಯ್ ಪರಸ್ಪರ ಯಾವುದೇ ಸಂಬಂಧ ಹೊಂದಿರಲಿಲ್ಲ.

‘ಶಿಲ್ಪಾಳ ಪೋಷಕರು ಕೆಲವು ಷರತ್ತುಗಳನ್ನು ವಿಧಿಸಿದ್ದರು. ಆ ಷರತ್ತುಗಳಿಂದಾಗಿ ಅವರ ಸಂಬಂಧ ಹದಗೆಡುತ್ತಿತ್ತು. ಇಲ್ಲದಿದ್ದರೆ ಅವರ ಜೀವನ ಬೇರೆಯೇ ತಿರುವು ಪಡೆಯುತ್ತಿತ್ತು’ ಎಂದು ಸುನಿಲ್ ಹೇಳಿದರು. ಆ ಷರತ್ತುಗಳ ಬಗ್ಗೆ ಕೇಳಿದಾಗ, ಸುನಿಲ್, ‘ಒಬ್ಬ ಪೋಷಕನಾಗಿ, ನಿಮ್ಮ ಮಗಳ ಬಗ್ಗೆ ಯೋಚಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಹೇಳಿದರು.

‘ಎಲ್ಲಾ ರೀತಿಯ ಭದ್ರತೆ ಬಗ್ಗೆ ಅಕ್ಷಯ್ ಬಳಿ ಶಿಲ್ಪಾ ತಂದೆ ಕೇಳಿದ್ದರು. ಎಲ್ಲಾ ಪೋಷಕರು ಬಯಸುವುದು ಅದನ್ನೇ’ ಎಂದು ಉತ್ತರಿಸಿದರು ಸುನೀಲ್. ಶಿಲ್ಪಾ ಅವರ ಪೋಷಕರ ಶೈಲಿಯನ್ನು ಅಕ್ಷಯ್ ಸಂಪೂರ್ಣವಾಗಿ ಒಪ್ಪಿಲ್ಲ. ‘ಪೋಷಕರ ಕಡೆಯಿಂದ ಕೇಳಿದ ಪ್ರಶ್ನೆಗಳು ತಪ್ಪು ಎಂದು ನಾನು ಭಾವಿಸಿದೆ. ಅದು ಹಾಗಿರಬಾರದಿತ್ತು’ ಎಂದು ಅಕ್ಷಯ್ ಆ ಬಳಿಕ ಅಂದುಕೊಂಡಿದ್ದರಂತೆ.

ಇದನ್ನೂ ಓದಿ: ‘ಇದು ಸಮಾಜಕ್ಕೂ ಅಪಾಯಕಾರಿ’; ಅಕ್ಷಯ್ ಕುಮಾರ್ ವಿಡಿಯೋ ಬಗ್ಗೆ ಕೋರ್ಟ್ ಕಳವಳ

‘ಏಕ್ ರಿಷ್ತಾ’ ಚಿತ್ರೀಕರಣಕ್ಕೆ ಸ್ವಲ್ಪ ಮೊದಲು ಶಿಲ್ಪಾ ಮತ್ತು ಅಕ್ಷಯ್ ಬೇರ್ಪಟ್ಟರು . ಆಗ ಅವರಿಗೆ ನೋವಾಗಲಿಲ್ಲ. ‘ಅವರಿಗೆ ಯಾವುದೇ ನೋವಾಗಿಲ್ಲ. ಅವರು ಚೆನ್ನಾಗಿದ್ದಾರೆಂದು ನಾನು ಭಾವಿಸಿದೆ. ಅವರು ಮತ್ತೆ ನಟಿಸುತ್ತಿದ್ದಾರೆ’ ಎಂದು ಸುನಿಲ್ ಉತ್ತರಿಸಿದರು. ಅವರು ತಮ್ಮ ಕೆಲಸದಲ್ಲಿ ತುಂಬಾ ನಿರತರಾಗಿದ್ದರು, ಅದೇ ಸಮಯದಲ್ಲಿ ಅವರು ಧಡ್ಕನ್, ಹೇರಾ ಫೇರಿ ಮತ್ತು ಏಕ್ ರಿಷ್ಟಾ ಸೇರಿದಂತೆ ಹಲವಾರು ಚಿತ್ರಗಳನ್ನು ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.