ಯಶ್​ ಹಿಂದಿ ಪ್ರಾಜೆಕ್ಟ್​ ಬಗ್ಗೆ ಇನ್ನೊಂದು ವಿಷಯ ಬಹಿರಂಗ; ರಾವಣನ ಎಂಟ್ರಿ ಯಾವಾಗ?

ಏಪ್ರಿಲ್​ 2ರಂದು ನಿರ್ಮಾಪಕರ ಜನ್ಮದಿನವಾದ್ದರಿಂದ ಆ ದಿನವೇ ಸಿನಿಮಾದ ಶೂಟಿಂಗ್​ ಪ್ರಾರಂಭ ಮಾಡಬೇಕು ಎಂಬ ಆಸೆ ಅವರದ್ದಾಗಿತ್ತು. ಆದ್ದರಿಂದ ಸಣ್ಣ ಸನ್ನಿವೇಶದ ಮೂಲಕ ಅವರು ಶೂಟಿಂಗ್​ ಆರಂಭ ಮಾಡಿದರು. ಆದರೆ ಆ ಸೀನ್​ಗಳಲ್ಲಿ ಕೇವಲ ಬಾಲನಟರಷ್ಟೇ ಭಾಗಿ ಆಗಿದ್ದರು. ಯಶ್​ ಅವರು ಚಿತ್ರೀಕರಣದ ಸೆಟ್​ನತ್ತ ಸುಳಿಯಲಿಲ್ಲ.

ಯಶ್​ ಹಿಂದಿ ಪ್ರಾಜೆಕ್ಟ್​ ಬಗ್ಗೆ ಇನ್ನೊಂದು ವಿಷಯ ಬಹಿರಂಗ; ರಾವಣನ ಎಂಟ್ರಿ ಯಾವಾಗ?
ಯಶ್​

Updated on: Apr 03, 2024 | 5:28 PM

ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿರುವ ನಟ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರಿಗೆ ಸಖತ್​ ಬೇಡಿಕೆ ಇದೆ. ಅವರ ಕಾಲ್​ಶೀಟ್​ ಪಡೆಯಲು ಬಾಲಿವುಡ್​ ಮಂದಿ ಕಾದಿದ್ದಾರೆ. ಸದ್ಯಕ್ಕೆ ಯಶ್​ ಅವರು ‘ಟಾಕ್ಸಿಕ್​’ (Toxic) ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಈ ನಡುವೆ ಹಿಂದಿಯ ‘ರಾಮಾಯಣ’ (Ramayana) ಸಿನಿಮಾದಲ್ಲಿ ಯಶ್​ ನಟಿಸುತ್ತಾರೆ ಎಂಬ ಸುದ್ದಿ ಜೋರಾಗಿದೆ. ಆ ಬಗ್ಗೆ ಇನ್ನೊಂದು ಗಾಸಿಪ್​ ಕೇಳಿಬಂದಿದೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಮೂಡಿಬರಲಿದ್ದು, ಮೊದಲ ಪಾರ್ಟ್​ನಲ್ಲಿ ಯಶ್​ ನಟಿಸುವುದಿಲ್ಲ ಎನ್ನಲಾಗಿದೆ! ಈಗಾಗಲೇ ಈ ಸಿನಿಮಾದ ಶೂಟಿಂಗ್​ ಶುರುವಾಗಿದೆ.

ಏಪ್ರಿಲ್​ 2ರಂದು ನಿರ್ಮಾಪಕ ನಮಿತ್​ ಮಲ್ಹೋತ್ರಾ ಅವರ ಜನ್ಮದಿನ. ಆ ವಿಶೇಷ ದಿನದಂದೇ ರಾಮಾಯಣ ಸಿನಿಮಾದ ಶೂಟಿಂಗ್​ ಆರಂಭಿಸಬೇಕು ಎಂಬ ಆಸೆ ಅವರದ್ದಾಗಿತ್ತು. ಹಾಗಾಗಿ ಅವರು ಚಿಕ್ಕ ದೃಶ್ಯದ ಮೂಲಕ ಏ.2ರಂದು ಚಿತ್ರೀಕರಣ ಪ್ರಾರಂಭ ಮಾಡಿದರು. ಆದರೆ ಈ ದೃಶ್ಯಗಳಲ್ಲಿ ಕೇವಲ ಬಾಲನಟರು ಮಾತ್ರ ಭಾಗಿ ಆಗಿದ್ದರು ಎನ್ನಲಾಗಿದೆ. ಯಶ್​, ರಣಬೀರ್​ ಕಪೂರ್​, ಸಾಯಿ ಪಲ್ಲವಿ ಅವರು ಶೂಟಿಂಗ್​ ಸೆಟ್​ನತ್ತ ಸುಳಿಯಲಿಲ್ಲ.

ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಯಶ್​ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್​?

ಈ ಸಿನಿಮಾದಲ್ಲಿ ರಣಬೀರ್ ಕಪೂರ್​ ಅವರು ರಾಮನ ಪಾತ್ರ ಮಾಡಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನಲಾಗಿದೆ. ಅದೇ ರೀತಿ, ರಾಮಾಯಣದ ಇನ್ನೊಂದು ಪ್ರಮುಖ ಪಾತ್ರವಾದ ರಾವಣನಾಗಿ ಯಶ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿದೆ. ಅಚ್ಚರಿ ಏನೆಂದರೆ ಮೂರು​ ಪಾರ್ಟ್​ಗಳ ಈ ಸಿನಿಮಾದಲ್ಲಿ ರಾವಣನ ಎಂಟ್ರಿ ಆಗುವುದು 2ನೇ ಪಾರ್ಟ್​ನಲ್ಲಿ ಎನ್ನಲಾಗಿದೆ.

ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

‘ಬಾಲಿವುಡ್​ ಹಂಗಾಮಾ’ ವರದಿ ಪ್ರಕಾರ, ಮೊದಲ ಪಾರ್ಟ್​​ನಲ್ಲಿ ರಾವಣನ ಪಾತ್ರ ಇರುವುದಿಲ್ಲ. ಹಾಗಾಗಿ ಯಶ್​ ಅವರು ಮೊದಲ ಪಾರ್ಟ್​ನ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಿಲ್ಲ. ಅಲ್ಲಿಯ ತನಕ ಅವರು ‘ಟಾಕ್ಸಿಕ್​’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಲಿದ್ದಾರೆ. ‘ಟಾಕ್ಸಿಕ್​’ ಕೆಲಸಗಳು ಮುಗಿದ ನಂತರವಷ್ಟೇ ಅವರು ‘ರಾಮಾಯಣ’ ಶೂಟಿಂಗ್​ ಸೆಟ್​ಗೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೇಶ್​ ತಿವಾರಿ ಅವರು ರಾಮಾಯಣ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ರಣಬೀರ್​ ಕಪೂರ್​ ಅವರು ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us