Yash: ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್​ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್

ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್​ವರೆಗೆ ‘ರಾಮಾಯಣ 2’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೊತೆ ಅವರ ಕೆಲಸದ ವೇಳಾಪಟ್ಟಿ ಹೊಂದಾಣಿಕೆಯಾಗಿದೆ. ಚಿತ್ರದ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

Yash: ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್​ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್
ಯಶ್
Updated By: ಮಂಜುನಾಥ ಸಿ.

Updated on: Apr 18, 2025 | 3:18 PM

ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್​ನಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದ ಶೂಟ್​​ನಲ್ಲಿ ಯಶ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್​​ವರೆಗೆ ‘ರಾಮಾಯಣ’ (Ramayana Movie) ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅವರು ಬಹುತೇಕ ಸಮಯವನ್ನು ಮುಂಬೈನಲ್ಲೇ ಕಳೆಯಲಿದ್ದಾರೆ ಎಂದು ವರದಿ ಆಗಿದೆ.

ರಣಬೀರ್ ಕಪೂರ್ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ಹಾಗೂ ‘ರಾಮಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು, ‘ರಾಮಾಯಣ’ ಚಿತ್ರದ ಡೇಟ್ಸ್​ನ ಮ್ಯಾನೇಜ್ ಮಾಡಬೇಕಿದೆ. ಸೀತೆ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಹೆಚ್ಚಿನ ಗಮನ ‘ರಾಮಾಯಣ’ ಸಿನಿಮಾದ ಮೇಲೆ ಇದೆ. ಈ ಮೂವರ ಡೇಟ್ಸ್ ಹೊಂದಾಣಿಕೆ ಆಗಿದ್ದು ಮೇನಿಂದ ಶೂಟ್ ಆರಂಭ ಆಗಲಿದೆ.

‘ರಾಮಾಯಣ’ ಒಟ್ಟೂ ಎರಡು ಪಾರ್ಟ್​ನಲ್ಲಿ ಬರಲಿದೆ. ಮೊದಲ ಪಾರ್ಟ್ ಕೊನೆಯಲ್ಲಿ ಯಶ್ ಅವರ ಆಗಮನ ಆಗಲಿದೆ. ಈಗಾಗಲೇ ಇದರ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ. ಎರಡನೇ ಪಾರ್ಟ್​ನಲ್ಲಿ ಯಶ್ ಅವರ ಪಾತ್ರ ಹೆಚ್ಚಿರಲಿದೆ. ಮೇ ತಿಂಗಳಿಂದ ಆರಂಭ ಆಗೋದು ‘ರಾಮಾಯಣ 2’ ಚಿತ್ರದ ಶೂಟ್ ಎಂದು ಹೇಳಲಾಗುತ್ತಿದೆ. ಯಶ್ ಅವರು ಆರು ತಿಂಗಳ ಕಾಲ ಬಾಲಿವುಡ್​ನಲ್ಲಿ ಬ್ಯುಸಿ ಇರಲಿದ್ದಾರೆ

ಇದನ್ನೂ ಓದಿ
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ
ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?
ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಸಿನಿಮಾ

ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ವಾಟಿಕ ಪ್ರೋಷನ್​ನ ಶೂಟ್ ಕೂಡ ಇದರಲ್ಲೇ ನಡೆಯಲಿದೆ. ರಾವಣನು ಸೀತಾಳ ಬಂಧಿಸಿಟ್ಟ ಜಾಗ ಇದಾಗಿದೆ. ಹೀಗಾಗಿ, ಯಶ್​ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್​ನಲ್ಲಿ ಸಾಕಷ್ಟು ದೃಶ್ಯಗಳು ಇದರಲ್ಲಿ ಬರಲಿವೆ.

ಇದನ್ನೂ ಓದಿ: ‘ಕೆಜಿಎಫ್ 3’ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್: ಯಶ್ ಅಭಿಮಾನಿಗಳಿಗೆ ಖುಷಿ

ತಂಡ ನೀಡಿರುವ ಮಾಹಿತಿ ಪ್ರಕಾರ ಮೊದಲ ಪಾರ್ಟ್ 2026ರ ದೀಪಾವಳಿಗೆ ರಿಲೀಸ್ ಆಗಲಿದೆ. 2027ರ ದೀಪಾವಳಿಗೆ ಎರಡನೇ ಭಾಗದಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:47 pm, Fri, 18 April 25