Dhanush: ಟ್ರೋಲ್ ಆಯ್ತು ಧನುಶ್​ ಹೊಸ ಗೆಟಪ್​; ಬಾಬಾ ರಾಮ್​ದೇವ್​ ಬಯೋಪಿಕ್​ಗೆ ತಯಾರಿ ನಡೀತಾ ಇದೆಯಾ?

Dhanush New Getup: ಈ ಫೋಟೋ ತೋರಿಸಿ ಇದು ಧನುಶ್​ ಅಂತ ಹೇಳಿದರೆ ತಕ್ಷಣಕ್ಕೆ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗೆ ಬದಲಾಗಿದೆ ಅವರ ಗೆಟಪ್​.

Dhanush: ಟ್ರೋಲ್ ಆಯ್ತು ಧನುಶ್​ ಹೊಸ ಗೆಟಪ್​; ಬಾಬಾ ರಾಮ್​ದೇವ್​ ಬಯೋಪಿಕ್​ಗೆ ತಯಾರಿ ನಡೀತಾ ಇದೆಯಾ?
ಧನುಶ್​
Follow us
ಮದನ್​ ಕುಮಾರ್​
|

Updated on: May 30, 2023 | 5:13 PM

ಕಾಲಿವುಡ್​ನಲ್ಲಿ ನಟ ಧನುಶ್​​ (Dhanush) ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್​ ಮಂದಿಗೂ ಅವರು ಪರಿಚಿತರು. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಧನುಶ್​ ಕಾಣಿಸಿಕೊಂಡರು. ಅವರ ಲುಕ್​ (Dhanush New Look) ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಫೋಟೋ ತೋರಿಸಿ ಇದು ಧನುಶ್​ ಅಂತ ಹೇಳಿದರೆ ತಕ್ಷಣಕ್ಕೆ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗೆ ಬದಲಾಗಿದೆ ಅವರ ಗೆಟಪ್​. ಧನುಶ್​ ಅವರನ್ನು ನೋಡಿದ ಎಲ್ಲರಿಗೂ ಬಾಬಾ ರಾಮ್​ದೇವ್ (Baba Ramdev)​ ನೆನಪಾಗಿದ್ದಾರೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ‘ಬಾಬಾ ರಾಮ್​ದೇವ್​ ಅವರ ಬಯೋಪಿಕ್​ ಮಾಡಲು ಧನುಶ್​ ತಯಾರಿ ಮಾಡಿಕೊಳ್ಳುತ್ತಿದ್ದಾರಾ?’ ಎಂಬ ಪ್ರಶ್ನೆ ಕೂಡ ನೆಟ್ಟಿಗರಿಂದ ಎದುರಾಗಿದೆ. ಇದಕ್ಕೆ ಧನುಶ್​ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಫ್ಯಾಷನ್​ ವಿಚಾರದಲ್ಲಿ ಧನುಶ್​ ಅವರು ಯಾರನ್ನೂ ಕಾಪಿ ಮಾಡಿಲ್ಲ. ಯಾರು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆಯೂ ಅವರಿಗೆ ಇಲ್ಲ. ಈಗ ಅವರ ಹೊಸ ಗೆಟಪ್​ ನೋಡಿದ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಮೂಡಿವೆ. ಅವರ ಫ್ಯಾನ್ಸ್​ ವಲಯದಲ್ಲಿ ಈ ಫೋಟೋ ವೈರಲ್​ ಆಗಿದೆ. ಅಭಿಮಾನಿಗಳು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಕಾಲೆಳೆಯುವವರು ಟ್ರೋಲ್​ ಮಾಡುತ್ತಿದ್ದಾರೆ. ಸದ್ಯ ಧನುಶ್​ ಅವರು ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್​ ಮುಗಿಯಲಿದೆ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಸಲುವಾಗಿಯೇ ಅವರು ಈ ಗೆಟಪ್​ ಧರಿಸಿದ್ದಾರೆ ಎನ್ನಲಾಗುತ್ತಿದೆ.

ಹೇಗಿದೆ ಧನುಶ್​ ಲುಕ್​?

ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಧನುಶ್​ ಈಗ ಹೊಸ ಗೆಟಪ್​ ಧರಿಸಿದ್ದಾರೆ. ಉದ್ದವಾದ ಗಡ್ಡ ಮತ್ತು ತಲೆ ಕೂದಲು ಬಿಟ್ಟುಕೊಂಡು ಅವರು ಬೇರೆಯದೇ ಅವತಾರ ತಾಳಿದ್ದಾರೆ. ಒಮ್ಮೆಲೆ ನೋಡಿದರೆ ಅವರ ಗುರುತು ಸಿಗುವುದು ಕೂಡ ಕಷ್ಟ. ಇನ್ನು, ಅವರು ಕೂಲಿಂಗ್ ಗ್ಲಾಸ್ ಧರಿಸಿ ಬಂದರಂತೂ ಯಾರೆಂಬುದೇ ಗೊತ್ತಾಗುವುದಿಲ್ಲ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿ ಧನುಶ್​ ಅವರಿಗೆ ದ್ವಿಪಾತ್ರ ಇರಲಿದ್ದು, ತಂದೆ ಮತ್ತು ಮಗನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಕಾರಣದಿಂದಲೇ ಅವರು ಈ ಗೆಟಪ್​ ಧರಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ: ಧನುಶ್-ಐಶ್ವರ್ಯಾ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹಾಸನ್

ಧನುಶ್​ ನಟನೆಯ ‘ವಾತಿ’ ಸಿನಿಮಾ ಈ ವರ್ಷ ಫೆಬ್ರವರಿಯಲ್ಲಿ ತೆರೆಕಂಡು ಸೂಪರ್​ ಹಿಟ್​ ಆಯಿತು. ಅದರ ಯಶಸ್ಸಿನ ಬೆನ್ನಲ್ಲೇ ಅವರು ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಬಗ್ಗೆ ಕನ್ನಡಿಗರಿಗೂ ನಿರೀಕ್ಷೆ ಇದೆ. ಯಾಕೆಂದರೆ ‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ ಅವರು ಈ ಚಿತ್ರದಲ್ಲಿ ಧನುಶ್​ ಜೊತೆ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಹೇಗೆ ಮೂಡಿಬರಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರನ್ನೂ ಇದೆ. ಇದಲ್ಲದೇ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾದಲ್ಲೂ ಶಿವಣ್ಣ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ