AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್​​ಲಾಲ್​​ಗೆ ಫಾಲ್ಕೆ ಪ್ರಶಸ್ತಿ, ಅಭಿನಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Ashwini Vaishnaw-Mohanlal: ಕೇಂದ್ರ ರೈಲ್ವೆ ಸಚಿವ, ಮಾಹಿತಿ ಪ್ರಸಾರ ಖಾತೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರು ಸಹ ಮೋಹನ್​​ಲಾಲ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಮೋಹನ್​​ಲಾಲ್ ಅವರು ಚಿತ್ರರಂಗ ಮತ್ತು ಭಾರತೀಯ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ಅವರು ಕೊಂಡಾಡಿದ್ದಾರೆ.

ಮೋಹನ್​​ಲಾಲ್​​ಗೆ ಫಾಲ್ಕೆ ಪ್ರಶಸ್ತಿ, ಅಭಿನಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
Ashwini Vaishnaw Mohanlal
ಮಂಜುನಾಥ ಸಿ.
|

Updated on:Sep 20, 2025 | 9:27 PM

Share

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್ ಲಾಲ್ ಅವರನ್ನು ದಾದಾ ಸಾಹೇಬ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್ 23 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೋಹನ್ ಲಾಲ್ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಬೆನ್ನಲ್ಲೆ ಹಲವಾರು ಮಂದಿ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮೋಹನ್​​ಲಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಕೇಂದ್ರ ರೈಲ್ವೆ ಸಚಿವ, ಮಾಹಿತಿ ಪ್ರಸಾರ ಖಾತೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರು ಸಹ ಮೋಹನ್​​ಲಾಲ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಸಚಿವ ಅಶ್ವಿನಿ ವೈಷ್ಣವ್, ‘ಮೋಹನ್​​ಲಾಲ್ ಅವರಿಗೆ ಅಭಿನಂದನೆಗಳು, ಕೇರಳದ ಅಡಿಪೋಲಿಯಿಂದ ಆರಂಭಿಸಿ, ವಿಶ್ವದಾದ್ಯಂತ ಇರುವ ಸಿನಿಮಾ ಪ್ರೇಮಿಗಳ ಹೃದಯಗಳನ್ನು ತಲುಪಿದ್ದೀರಿ. ನಿಮ್ಮ ಕಾರ್ಯ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ ಬಂದಿದೆ ಹಾಗೂ ನಮ್ಮ ಆಸೆ, ಕನಸುಗಳಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಅದ್ಭುತ ಕಾರ್ಯ ಭಾರತದ ಕ್ರಿಯಾಶೀಲ ಗುಣಕ್ಕೆ ಇನ್ನಷ್ಟು ಸ್ಪೂರ್ತಿ ತುಂಬುತ್ತದೆ’ ಎಂದಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಸಹ ಮೋಹನ್​​ಲಾಲ್ ಅವರಿಗೆ ಅಭಿನಂದನೆ ತಿಳಿಸಿದ್ದು, ‘ದಶಕಗಳ ಕಾಲದ ವೃತ್ತಿಜೀವನದೊಂದಿಗೆ, ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸುತ್ತಾ ಮಲಯಾಳಂ ಚಿತ್ರರಂಗದ ದಾರಿದೀಪವಾಗಿ ಮಿಂಚಿದ್ದಾರೆ. ಕೇರಳದ ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹ ಮತ್ತು ವೈವಿಧ್ಯಮಯ ಮಾಧ್ಯಮಗಳಲ್ಲಿ ಅವರ ಪಾಂಡಿತ್ಯವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದೆ. ನೀವು ಪ್ರಶಸ್ತಿಗೆ ಅರ್ಹರು. ನೀವು ನಿಜವಾದ ಮಲಯಾಳಿ ಐಕಾನ್! ಈ ಗೌರವವು ನಿಮಗೆ ಮಾತ್ರವಲ್ಲ, ಎಲ್ಲಾ ಮಲಯಾಳಿಗಳಿಗೂ ಮತ್ತು ಕೇರಳದ ಚಲನಚಿತ್ರೋದ್ಯಮ ಮತ್ತು ನಿಮ್ಮ ಮತ್ತು ಅದರ ಸೃಜನಶೀಲತೆಗೆ, ವರ್ಷಗಳಲ್ಲಿನ ಮನ್ನಣೆಗೆ ಸಲ್ಲುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Sat, 20 September 25