Sreeja: ಚಿರಂಜೀವಿ ಕಿರಿಯ ಪುತ್ರಿಯ ವೈವಾಹಿಕ ಜೀವನದಲ್ಲಿ ಬಿರುಕು? ವದಂತಿಗೆ ಪುಷ್ಠಿ ನೀಡಿದ ಶ್ರೀಜಾ ನಡೆ

Sreeja: ಚಿರಂಜೀವಿ ಕಿರಿಯ ಪುತ್ರಿಯ ವೈವಾಹಿಕ ಜೀವನದಲ್ಲಿ ಬಿರುಕು? ವದಂತಿಗೆ ಪುಷ್ಠಿ ನೀಡಿದ ಶ್ರೀಜಾ ನಡೆ
ಶ್ರೀಜಾ ಹಾಗೂ ಕಲ್ಯಾಣ್ ದೇವ್

Chiranjeevi | Kalyan Dhev: ನಟ ಚಿರಂಜೀವಿ ಅವರ ಪುತ್ರಿ ಶ್ರೀಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದ. ಪತಿ ಕಲ್ಯಾಣ್ ದೇವ್ ಹೆಸರನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ಶ್ರೀಜಾ ಕೈಬಿಟ್ಟಿದ್ದು, ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.

TV9kannada Web Team

| Edited By: shivaprasad.hs

Jan 18, 2022 | 11:48 AM

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Chiranjeevi) ಕಿರಿಯ ಪುತ್ರಿ ಶ್ರೀಜಾ (Sreeja) ವೈವಾಹಿಕ ಜೀವನ ಕೊನೆಗೊಳಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಟಾಲಿವುಡ್ ಅಂಗಳದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿವೆ. ಈ ವದಂತಿಗಳಿಗೆ ಪೂರಕವಾಗಿ ಶ್ರೀಜಾ ತಮ್ಮ ಪತಿಯ ಹೆಸರನ್ನು ಇನ್ಸ್ಟಾಗ್ರಾಂ ಖಾತೆಯಿಂದ ಕೈಬಿಟ್ಟಿದ್ದು, ಮೂಲ ಹೆಸರಿಗೆ ಮರಳಿದ್ದಾರೆ. ಶ್ರೀಜಾ ಹಾಗೂ ಅವರ ಪತಿ ಕಲ್ಯಾಣ್ ದೇವ್ (Kalyan Dhev) 2016ರಲ್ಲಿ ವಿವಾಹವಾಗಿದ್ದರು. ನಂತರದಲ್ಲಿ ಶ್ರೀಜಾ ‘ಶ್ರೀಜಾ ಕಲ್ಯಾಣ್’ ಎಂಬ ಹೆಸರಿನಿಂದ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಇದೀಗ ಅವರು ಹೆಸರು ಬದಲಿಸಿಕೊಂಡಿದ್ದು, ಶ್ರೀಜಾ ಕೊಣಿದೆಲಾ ಎಂದು ಬದಲಿಸಿಕೊಂಡಿದ್ದಾರೆ. ಜತೆಗೆ ಕಲ್ಯಾಣ್ ಅವರನ್ನು ಅನ್​ಫಾಲೋ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಶ್ರೀಜಾ- ಕಲ್ಯಾಣ್ ದಂಪತಿಗೆ ಓರ್ವ ಪುತ್ರಿಯಿದ್ದಾಳೆ.

ಕಳೆದ ಕೆಲವು ಸಮಯದಿಂದ ಶ್ರೀಜಾ ಹಾಗೂ ಕಲ್ಯಾಣ್ ವಿಚ್ಛೇದನದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇದೆ. ಕಳೆದ ವಾರ ಕಲ್ಯಾಣ್ ಹಾಗೂ ರಚಿತಾ ರಾಮ್ ನಟನೆಯ ‘ಸೂಪರ್ ಮಚ್ಚಿ’ ತೆರೆಕಂಡಿತ್ತು. ಬಾಕ್ಸಾಫೀಸ್​ನಲ್ಲಿ ದಾರುಣವಾಗಿ ಸೋಲು ಕಂಡಿದ್ದ ಈ ಚಿತ್ರಕ್ಕೆ ಬಿಡುಗಡೆಯ ಸಂದರ್ಭದಲ್ಲಿ ಚಿರಂಜೀವಿ ಕುಟುಂಬದ ಯಾರೂ ಶುಭ ಕೋರಿರಲಿಲ್ಲ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದು ದಂಪತಿ ಬೇರೆಯಾಗುತ್ತಿದ್ದಾರೆ ಎಂಬ ವದಂತಿಗೆ ಮತ್ತಷ್ಟು ಬಲ ತುಂಬಿತ್ತು. ಇದೀಗ ಶ್ರೀಜಾ ಪತಿಯ ಹೆಸರನ್ನು ತಮ್ಮ ಖಾತೆಯಿಂದ ಕೈಬಿಟ್ಟಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ ಈರ್ವರೂ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಶ್ರೀಜಾ ಹಾಗೂ ಕಲ್ಯಾಣ್ ದೇವ್ 2016ರಲ್ಲಿ ಬೆಂಗಳೂರು ಸಮೀಪ ದೇವನಹಳ್ಳಿಯಲ್ಲಿರುವ ಕುಟುಂಬದ ಫಾರ್ಮ್ ಹೌಸ್​ನಲ್ಲಿ ವಿವಾಹವಾಗಿದ್ದರು. ದಕ್ಷಿಣ ಭಾರತದ ಚಿತ್ರರಂಗ ಅದರಲ್ಲಿ ಭಾಗವಹಿಸಿತ್ತು. ​​2018ರಲ್ಲಿ ದಂಪತಿ ಮೊದಲ ಮಗುವಿನ ಆಗಮನವನ್ನು ಘೋಷಿಸಿದ್ದರು.

ಕಲ್ಯಾಣ್​ಗೂ ಮೊದಲು ಶ್ರೀಜಾ ಸಿರೀಶ್ ಭರಧ್ವಾಜ್​ರನ್ನು ವಿವಾಹವಾಗಿದ್ದರು. ಆಗ ಶ್ರೀಜಾಗೆ ಕೇವಲ 19 ವರ್ಷ. ಪತಿಯ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಶ್ರೀಜಾ ಆರೋಪಿಸಿದ್ದರು. ಮತ್ತು ಪತಿಯ ವಿರುದ್ಧ ಕಿರುಕುಳ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಅಂತಿಮವಾಗಿ ಈರ್ವರೂ 2011ರಲ್ಲಿ ಬೇರ್ಪಟ್ಟಿದ್ದರು. ಶ್ರೀಜಾ- ಸಿರೀಶ್ ದಂಪತಿಗೆ ಓರ್ವ ಪುತ್ರಿಯಿದ್ದಾಳೆ.

ಕಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ತಾರಾ ಜೋಡಿಗಳು ಬೇರೆಯಾಗುತ್ತಿರುವುದು ಹೆಚ್ಚಾಗಿ ವರದಿಯಾಗುತ್ತಿದೆ. ನಿನ್ನೆಯಷ್ಟೇ ನಟ ಧನುಷ್ ಹಾಗೂ ರಜಿನಿ ಪುತ್ರಿ ಐಶ್ವರ್ಯಾ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಕೆಲ ತಿಂಗಳುಗಳ ಮೊದಲು ನಾಗ ಚೈತನ್ಯ ಹಾಗೂ ಸಮಂತಾ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:

Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?

Samantha: ‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’; ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ

Follow us on

Related Stories

Most Read Stories

Click on your DTH Provider to Add TV9 Kannada