ಸೆಲೆಬ್ರಿಟಿಗಳ ವಯಲದಲ್ಲೀಗ ಡಿವೋರ್ಸ್ (Divorce) ಟ್ರೆಂಡ್ ಜೋರಾಗಿದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಮಂದಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಆಮಿರ್ ಖಾನ್-ಕಿರಣ್ ರಾವ್, ನಾಗ ಚೈತನ್ಯ-ಸಮಂತಾ, ಧನುಷ್-ಐಶ್ವರ್ಯಾ ರಜನಿಕಾಂತ್ ಸೇರಿದಂತೆ ಅನೇಕರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈಗ ‘ಮೆಗಾ ಸ್ಟಾರ್’ ಚಿರಂಜೀವಿ ಪುತ್ರಿ ಶ್ರೀಜಾ (Sreeja Konidela) ಸಂಸಾರದಲ್ಲಿಯೂ ಬಿರುಕು ಮೂಡಿರುವುದು ತಿಳಿದುಬಂದಿದೆ. ಈ ಕುರಿತಂತೆ ಚಿರಂಜೀವಿ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಶ್ರೀಜಾ ಅವರ ನಡೆಯಿಂದಾಗಿ ಎಲ್ಲರಿಗೂ ಅಚ್ಚರಿ ಮೂಡಿದೆ. ಕೆಲವೇ ದಿನಗಳ ಹಿಂದೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಡನ ಹೆಸರು ತೆಗೆದು ಹಾಕಿದ್ದರು. ಶ್ರೀಜಾ ಕಲ್ಯಾಣ್ ಎಂದಿದ್ದ ಹೆಸರನ್ನು ಅವರು ಶ್ರೀಜಾ ಕೊನಿಡೆಲಾ ಎಂದು ಬದಲಾಯಿಸಿಕೊಂಡರು. ಈಗ ಗಂಡ ಕಲ್ಯಾಣ್ ದೇವ್ (Kalyaan Dhev) ಅವರನ್ನು ಶ್ರೀಜಾ ಅನ್ಫಾಲೋ ಮಾಡಿದ್ದಾರೆ. ಆ ಮೂಲಕ ಡಿವೋರ್ಸ್ ವದಂತಿಗೆ ಪೂರಕವಾಗುವಂತೆ ಅವರು ನಡೆದುಕೊಂಡಿದ್ದಾರೆ. ಈ ದಂಪತಿ ನಡುವೆ ಬಿರುಕು ಮೂಡಿದೆ ಎಂದು ಕೆಲವು ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ.
ತಮ್ಮ ಕುಟುಂಬದ ಇತರೆ ಎಲ್ಲರನ್ನೂ ಶ್ರೀಜಾ ಫಾಲೋ ಮಾಡುತ್ತಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಅವರ ಪತಿ ಕಲ್ಯಾಣ್ ದೇವ್ ಹೆಸರು ಇಲ್ಲ. ಆ ಮೂಲಕ ತಾವು ಪತಿಯಿಂದ ಅಂತರ ಕಾಯ್ದುಕೊಂಡಿರುವುದನ್ನು ಶ್ರೀಜಾ ಸೂಚಿಸಿದ್ದಾರೆ. ಆದರೆ ಸದ್ಯಕ್ಕಂತೂ ಕಲ್ಯಾಣ್ ದೇವ್ ಅವರು ಶ್ರೀಜಾ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಅಮೆರಿಕಾದಲ್ಲಿ ಆಭರಣಗಳ ಬಿಸ್ನೆಸ್ ನಡೆಸುತ್ತಿರುವ ಉದ್ಯಮಿಯ ಪುತ್ರನಾದ ಕಲ್ಯಾಣ್ ದೇವ್ ಜೊತೆ ಚಿರಂಜೀವಿ ಪುತ್ರಿ ಶ್ರೀಜಾ ಮದುವೆ 2016ರ ಮಾರ್ಚ್ನಲ್ಲಿ ನೆರವೇರಿತ್ತು. ಶ್ರೀಜಾಗೆ ಅದು ಎರಡನೇ ಮದುವೆ. ಮೊದಲ ಪತಿ ಸಿರೀಶ್ ಭಾರದ್ವಜ್ಗೆ ಅವರು ಅದಾಗಲೇ ವಿಚ್ಛೇದನ ನೀಡಿದ್ದರು. ಈಗ ಅವರು ಎರಡನೇ ಪತಿ ಕಲ್ಯಾಣ್ ದೇವ್ ಅವರಿಂದಲೂ ಡಿವೋರ್ಸ್ ಪಡೆಯಲಿದ್ದಾರಾ ಎಂಬ ಅನುಮಾನ ಬಲವಾಗಿದೆ.
ತಮ್ಮ ಸಂಸಾರದಲ್ಲಿ ಬಿರುಕು ಮೂಡಿರುವ ಬಗ್ಗೆ ಶ್ರೀಜಾ ಅವರಾಗಲಿ, ಕಲ್ಯಾಣ್ ದೇವ್ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಇಬ್ಬರು ಹೆಣ್ಣು ಮಕ್ಕಳ ಜೊತೆ ಶ್ರೀಜಾ ವಾಸಿಸುತ್ತಿದ್ದಾರೆ. ಪ್ರಸ್ತುತ ಕಲ್ಯಾಣ್ ದೇವ್ ಅವರು ಬಿಸ್ನೆಸ್ ಟ್ರಿಪ್ ಸಲುವಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಕಲ್ಯಾಣ್ ದೇವ್ ನಟನೆಯ ‘ಸೂಪರ್ ಮಚ್ಚಿ’ ಸಿನಿಮಾ ತೆರೆಕಂಡಿತು. ಆ ಚಿತ್ರದಲ್ಲಿ ಅವರಿಗೆ ಕನ್ನಡದ ನಟಿ ರಚಿತಾ ರಾಮ್ ಜೋಡಿ ಆಗಿದ್ದರು. ಆ ಚಿತ್ರಕ್ಕೆ ‘ಮೆಗಾ ಸ್ಟಾರ್’ ಫ್ಯಾಮಿಲಿ ಕಡೆಯಿಂದ ಯಾರೂ ಬೆಂಬಲ ನೀಡಲಿಲ್ಲ. ಆ ಕಾರಣದಿಂದಲೂ ಡಿವೋರ್ಸ್ ಕುರಿತ ಅನುಮಾನ ಬಲವಾಗಿದೆ.
ಇದನ್ನೂ ಓದಿ:
‘ಅವನಿಗೆ ನನ್ನ ಬಗ್ಗೆಯೇ ಹೆಚ್ಚು ಚಿಂತೆ ಆಗಿತ್ತು’; ಮಗನ ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ನಾಗಾರ್ಜುನ
‘ಧನುಷ್-ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ, ಇದು ಸಣ್ಣ ಜಗಳ ಅಷ್ಟೇ’; ಧನುಷ್ ತಂದೆ ಅಚ್ಚರಿಯ ಹೇಳಿಕೆ