ಸಂಕ್ರಾಂತಿಗೆ ಒಟ್ಟಿಗೆ ರಿಲೀಸ್ ಆಗಲಿದೆ ಚಿರಂಜೀವಿ ನಟನೆಯ ಎರಡು ಸಿನಿಮಾಗಳು?

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಕಾಕಾ' ಸಿನಿಮಾದ ಶೂಟಿಂಗ್ ನಿಂತಿದೆ ಎಂಬ ವದಂತಿಗಳಿಗೆ ಬರಹಗಾರ ಕೋನಾ ವೆಂಕಟ್ ತೆರೆ ಎಳೆದಿದ್ದಾರೆ. ಚಿತ್ರವು ಯಾವುದೇ ಕಾರಣಕ್ಕೂ ಸ್ಥಗಿತಗೊಂಡಿಲ್ಲ. ಬರುವ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13 ರಂದು ತೆರೆ ಕಾಣಲಿದೆ ಎಂದು ಸ್ಪಷ್ಟಪಡಿಸುವ ಮೂಲಕ ಅಭಿಮಾನಿಗಳ ಅನುಮಾನಗಳಿಗೆ ಪರಿಹಾರ ನೀಡಿದ್ದಾರೆ.

ಸಂಕ್ರಾಂತಿಗೆ ಒಟ್ಟಿಗೆ ರಿಲೀಸ್ ಆಗಲಿದೆ ಚಿರಂಜೀವಿ ನಟನೆಯ ಎರಡು ಸಿನಿಮಾಗಳು?
ಚಿರಂಜೀವಿ
Edited By:

Updated on: Nov 07, 2026 | 11:01 AM

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಮುಂಬರುವ ‘ಕಾಕಾ’ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ ಎಂಬ ವದಂತಿಗಳಿಗೆ ತೆರೆಬಿದ್ದಿದೆ. ಈ ಸಿನಿಮಾ ರಜನಿಕಾಂತ್ ಅಭಿನಯದ ಸೂಪರ್‌ಹಿಟ್ ‘ಬಾಷಾ’ ಚಿತ್ರದ ಕಥೆಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ಫಿಲ್ಮ್ ಇಂಡಸ್ಟ್ರಿಯಲ್ಲಿ ಸುದ್ದಿಯಾಗಿತ್ತು. ಆದರೆ ಚಿತ್ರತಂಡವು ಈ ಎಲ್ಲ ಮಾತುಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದು, ಅಭಿಮಾನಿಗಳಲ್ಲಿ ಹಬ್ಬಿದ್ದ ಗೊಂದಲವನ್ನು ಪರಿಹರಿಸಿದೆ. ಜೊತೆಗೆ ಚಿರಂಜೀವಿ ನಟನೆಯ ಎರಡು ಸಿನಿಮಾಗಳು ಒಟ್ಟಿಗೆ ಬರುತ್ತಿವೆ ಎನ್ನಲಾಗಿದೆ.

ಸುಮಾರು ಶೇಕಡಾ 70 ರಷ್ಟು ಚಿತ್ರೀಕರಣ ಮುಗಿದ ನಂತರ ಚಿರಂಜೀವಿ ಅವರಿಗೆ ಈ ಸಂಶಯ ಮೂಡಿತ್ತು ಎನ್ನಲಾಗಿತ್ತು. ಆದರೆ ಚಿತ್ರದ ಬರಹಗಾರ ಕೋನಾ ವೆಂಕಟ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸುದ್ದಿ ಸುಳ್ಳಾಗಲಿ ಎಂದು ಬಯಸಿದವರಿಗೆ ‘ನಿಮಗೆ ನಿರಾಶೆ ಮಾಡಿದ್ದಕ್ಕೆ ಕ್ಷಮೆ ಇರಲಿ’ ಎಂದು ಅವರು ಹಾಸ್ಯಸ್ಪರ್ಶದ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

Loading...

ಇದರ ಜೊತೆಗೆ ‘ಕಾಕಾ’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ಅವರು ಖಚಿತಪಡಿಸಿದ್ದಾರೆ. ಚಿರಂಜೀವಿ ಅವರೊಂದಿಗೆ ಇರುವ ಹೊಸ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ರಿಲೀಸ್ ಕುರಿತಾದ ಅನುಮಾನಗಳಿಗೆ ಇತ್ಯರ್ಥ ಹಾಡಿದ್ದಾರೆ. ಹೀಗಾಗಿ ಈ ಮುಂಚೆ ಹರಡಿದ್ದ ಶೂಟಿಂಗ್ ಸ್ಥಗಿತದ ಸುದ್ದಿಗಳು ಕೇವಲ ಕಟ್ಟುಕಥೆ ಎಂಬುದು ಸ್ಪಷ್ಟವಾಗಿದೆ.

ಇದೇ ವೇಳೆ ಚಿರಂಜೀವಿ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ವಿಶ್ವಂಭರ’ ಕೂಡ ಸಂಕ್ರಾಂತಿ ಹಬ್ಬದ ರೇಸ್‌ನಲ್ಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಒಟಿಟಿ ಒಪ್ಪಂದಗಳ ಕಾರಣದಿಂದ ವಿಶ್ವಂಭರ ಚಿತ್ರತಂಡ ಹಬ್ಬದ ಅವಧಿಯಲ್ಲೇ ಸಿನಿಮಾವನ್ನು ತರಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಆದಾಗ್ಯೂ ‘ಕಾಕಾ’ ಚಿತ್ರತಂಡವು ತಮ್ಮ ಬಿಡುಗಡೆ ದಿನಾಂಕಕ್ಕೆ ಬದ್ಧವಾಗಿದ್ದು, ಹಬ್ಬಕ್ಕೆ ಮುಖಾಮುಖಿಯಾಗುವ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಬಾಬಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಾಕಾ’ ಸಿನಿಮಾದಲ್ಲಿ ಚಿರಂಜೀವಿ ಅವರು ಸೂಪರ್‌ವೈಸರ್ ಸತ್ಯಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅನಸ್ವರ ರಾಜನ್, ನಿವೇತಾ ಪೇತುರಾಜ್, ಕಮೆಡಿಯನ್ ಸುನಿಲ್ ಹಾಗೂ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸಂಕ್ರಾಂತಿಗೆ ಮೆಗಾಸ್ಟಾರ್ ಅಭಿನಯದ ಧಮಾಕಾ ಸಿನಿಮಾ ಪ್ರೇಕ್ಷಕರನ್ನು ರಂಜಿಸುವುದು ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us