ಅಲ್ಲು ಅರ್ಜುನ್ ವಿವಾದದ ಬಳಿಕ ‘ಪುಷ್ಪ 2’ ಸಿನಿಮಾದ ಹಾಡಿಗೆ ಕತ್ತರಿ

Pushpa 2: ಅಲ್ಲು ಅರ್ಜುನ್ ಬಂಧನ, ಬಿಡುಗಡೆ ಆ ಬಳಿಕ ನಡೆದ ಬೆಳವಣಿಗೆಗಳ ಬಳಿಕ ಅಲ್ಲು ಅರ್ಜುನ್ ತುಸು ತಗ್ಗಿದ್ದಾರೆ, ಅಲ್ಲು ಅರ್ಜುನ್ ಮಾತ್ರವಲ್ಲ ಇಡೀ ‘ಪುಷ್ಪ 2’ ಚಿತ್ರತಂಡ ಕೊಂಚ ತಗ್ಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿದ್ದು ಯಾರನ್ನೂ ಯಾವ ರೀತಿಯಲ್ಲಿಯೂ ಪ್ರಚೋದನೆಗೆ ಒಳಪಡಿಸ ಬಾರದು ಎಂಬ ಕಾರಣಕ್ಕೆ ‘ಪುಷ್ಪ 2’ ಸಿನಿಮಾದಲ್ಲಿದ್ದ ಒಂದು ಹಾಡನ್ನು ಸಹ ತೆಗೆದು ಹಾಕಲಾಗಿದೆ.

ಅಲ್ಲು ಅರ್ಜುನ್ ವಿವಾದದ ಬಳಿಕ ‘ಪುಷ್ಪ 2’ ಸಿನಿಮಾದ ಹಾಡಿಗೆ ಕತ್ತರಿ
Pushpa 2
Follow us
ಮಂಜುನಾಥ ಸಿ.
|

Updated on: Dec 27, 2024 | 7:21 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಆದರೆ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುವ ಸ್ಥಿತಿಯಲ್ಲಿ ಅಲ್ಲು ಅರ್ಜುನ್ ಇಲ್ಲ. ಸಿನಿಮಾ ಬಿಡುಗಡೆ ಆಗಿ ಒಂದೇ ವಾರಕ್ಕೆ ಅಲ್ಲು ಅರ್ಜುನ್ ಅನ್ನು ಪೊಲೀಸರು ಬಂಧಿಸಿದ್ದರು. ಹೇಗೋ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಹೊರ ಬಂದರಾದರೂ ಆ ನಂತರವೂ ಅಲ್ಲು ಅರ್ಜುನ್ ಅನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು, ಅಲ್ಲು ಅರ್ಜುನ್ ಮನೆ ಮೇಲೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದರು.

ಆದರೆ ಅಲ್ಲು ಅರ್ಜುನ್ ಶಾಂತವಾಗಿಯೇ ಇದ್ದು, ಪತ್ರಿಕಾಗೋಷ್ಠಿ ನಡೆಸಿ ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೆ ತುಸು ತಗ್ಗಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮೂಲಕವೂ ಯಾರನ್ನೂ ಪ್ರಚೋದಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದು ಸಿನಿಮಾದಿಂದ ಒಂದು ಹಾಡನ್ನೇ ತೆಗೆದು ಬಿಟ್ಟಿದೆ ಪುಷ್ಪ 2 ಚಿತ್ರತಂಡ.

ಇದನ್ನೂ ಓದಿ:‘ಪುಷ್ಪ 2’ ಟಿಕೆಟ್​ ಕೊಟ್ಟು ‘ಬೇಬಿ ಜಾನ್’ ನೋಡುವಂತೆ ಒತ್ತಾಯಿಸಿದ ಪ್ರದರ್ಶಕರು

‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರರ ಸಿಂಡಿಕೇಟ್​ನ ಮುಖಂಡ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಅನ್ನು ಹಿಡಿಯಲು ಪೊಲೀಸ್ (ಶೆಖಾವತ್) ಒಬ್ಬ ಬಹಳ ಪ್ರಯತ್ನ ಪಡುತ್ತಿರುತ್ತಾನೆ. ಸೀನ್ ಒಂದರಲ್ಲಿ ಶೆಖಾವತ್​ಗೆ ಸವಾಲು ಹಾಕುವ ಪುಷ್ಪ (ಅಲ್ಲು ಅರ್ಜುನ್) ‘ದಮ್ಮಿದ್ರೆ ನನ್ನ ಅರೆಸ್ಟ್ ಮಾಡೊ ಶೆಖಾವತ್’ ಎಂದು ಹಾಡು ಹೇಳುತ್ತಾ ಸವಾಲು ಹಾಕುವ ದೃಶ್ಯವಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಬಂಧನ ಅದಾದ ಬಳಿಕ ನಡೆದ ವಿವಾದಗಳ ಬಳಿಕ ಆ ಹಾಡನ್ನು ಚಿತ್ರತಂಡ ಕತ್ತರಿಸಿ ತೆಗೆದಿದೆ.

ಅಲ್ಲು ಅರ್ಜುನ್ ಬಂಧನವಾಗಿ ಒಂದೇ ದಿನದಲ್ಲಿ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆ ಹಾಡು ವೈರಲ್ ಆಗುತ್ತಿದೆ. ಪೊಲೀಸರನ್ನು, ಆಂಧ್ರ ಸಿಎಂ ಅನ್ನು ಕಿಚಾಯಿಸಲು ಆ ಹಾಡನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಬಳಸುತ್ತಿದ್ದರು. ಇದೇ ಕಾರಣಕ್ಕೆ ಆ ಹಾಡನ್ನು ಚಿತ್ರತಂಡ ತೆಗೆದು ಹಾಕಿದೆ. ಸಿನಿಮಾದಲ್ಲಿ ಪೊಲೀಸರಿಗೆ ಅವಮಾನ ಆಗುವ ಇನ್ನೂ ಕೆಲವು ದೃಶ್ಯಗಳು ಇವೆ ಆದರೆ ಅವುಗಳನ್ನು ತೆಗೆಯಲಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ