
ಅಲ್ಲು ಅರ್ಜುನ್ (Allu Arjun) ಹಾಗೂ ಅಟ್ಲಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಘೋಷಣೆ ಆಗಿ ಕೆಲವು ತಿಂಗಳು ಕಳೆದಿವೆ. ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ ಎಂದು ಈ ಮೊದಲು ಹೇಳಲಾಗುತ್ತಿತ್ತು. ಈ ಬಗ್ಗೆ ಭರ್ಜರಿ ಚರ್ಚೆಗಳು ಕೂಡ ನಡೆದಿದ್ದವು. ಈಗ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ದೀಪಿಕಾ ಪಡುಕೋಣೆ ಅವರು ಅಧಿಕೃತವಾಗಿ ತಂಡ ಸೇರಿಕೊಂಡಿದ್ದಾರೆ. ಈ ಪ್ರೋಮೋನ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಅವರ ಪಾತ್ರ ಯಾವ ರೀತಿ ಇರಬಹುದು ಎನ್ನುವುದ ಝಲಕ್ ಕೂಡ ಸಿಕ್ಕಿದೆ.
ದೀಪಿಕಾ ಪಡುಕೋಣೆ ಅವರು ಸಾಮಾನ್ಯವಾಗಿ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುವಾಗ ಸಾಕಷ್ಟು ಯೋಚಿಸುತ್ತಾರೆ. ಇದಕ್ಕೆ ಕಾರಣ ಈಗ ಅವರಿಗೆ ಇರೋ ವಿಶೇಷ ಜವಾಬ್ದಾರಿ. ದೀಪಿಕಾ ಈಗ ಮುಗುವಿನ ಪಾಲನೆ ಮಾಡಬೇಕಿದೆ. ಹೀಗಾಗಿ ದಿನಕ್ಕೆ 8 ಗಂಟೆ ಮಾತ್ರ ಅವರು ಕೆಲಸ ಮಾಡಲು ಸಿದ್ಧರಿದ್ದಾರೆ. ಇನ್ನು ಇದಕ್ಕೆ ತಕ್ಕಂತೆ ದೊಡ್ಡ ಸಂಭಾವನೆ ಕೂಡ ಅವರು ಪಡೆಯುತ್ತಾರೆ. ಇವರ ಎಲ್ಲಾ ಬೇಡಿಕೆಗೆ ಸನ್ ಪಿಕ್ಚರ್ಸ್ ಒಪ್ಪಿಗೆ ಕೊಟ್ಟಿದೆ. ಹೀಗಾಗಿ ಅವರು ಅಟ್ಲಿ-ಅಲ್ಲು ಅರ್ಜುನ್ ಸಿನಿಮಾ ತಂಡ ಸೇರಿದ್ದಾರೆ.
The Queen marches to conquer!❤🔥
Welcome onboard @deepikapadukone✨#TheFacesOfAA22xA6▶️ https://t.co/LefIldi0M5#AA22xA6 – A Magnum Opus from Sun Pictures💥@alluarjun @Atlee_dir#SunPictures #AA22 #A6 pic.twitter.com/85l7K31J8z
— Sun Pictures (@sunpictures) June 7, 2025
ಅಲ್ಲು ಅರ್ಜುನ್ ಹಾಗೂ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಬಕ್ರೀದ್ ಪ್ರಯುಕ್ತ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಅಟ್ಲಿ ಅವರು ದೀಪಿಕಾಗೆ ಸಿನಿಮಾದ ಕಥೆಯನ್ನು ವಿವರಿಸುವ ರೀತಿಯಲ್ಲಿ ಇದೆ. ಕಥೆ ಹಾಗೂ ಅವರ ಪಾತ್ರದ ಬಗ್ಗೆ ಕೇಳಿ ದೀಪಿಕಾ ಎಗ್ಸೈಟ್ ಆಗುತ್ತಾರೆ. ಆ ಬಳಿಕ ಪಾತ್ರದ ಶೂಟ್ನ ಒಂದು ತುಣಕನ್ನೂ ಕೂಡ ತೋರಿಸಲಾಗಿದೆ. ದೀಪಿಕಾ ಗೆಟಪ್ ಅನೇಕರ ಗಮನ ಸೆಳೆದಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊರಗಾಗುತ್ತಾರೆಯೇ ದೀಪಿಕಾ ಪಡುಕೋಣೆ?
ಸದ್ಯ ದೀಪಿಕಾ ಪಡುಕೋಣೆ ಬಗ್ಗೆ ಕೆಲವು ನೆಗೆಟಿವ್ ಟಾಕ್ಗಳು ಸೃಷ್ಟಿ ಆಗಿವೆ. ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಾರೆ, ಸಿನಿಮಾಗಾಗಿ ದಿನಕ್ಕೆ 8 ಗಂಟೆ ಕೊಡಲು ಮಾತ್ರ ರೆಡಿ ಇದ್ದಾರೆ ಎಂದೆಲ್ಲ ಸಂದೀಪ್ ರೆಡ್ಡಿ ವಂಗ ಪರೋಕ್ಷವಾಗಿ ಆರೋಪಿಸಿದ್ದರು. ಆದರೆ, ತಮಗೆ ಬೇಡಿಕೆ ಇರುವುದರಿಂದ ತಾವು ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದೇನೆ ಎಂದು ದೀಪಿಕಾ ವಾದ ಮುಂದಿಡುತ್ತಿದ್ದಾರೆ. ಈ ಸಂದರ್ಭದಲ್ಲೇ ಹೊಸ ಚಿತ್ರದ ಪ್ರೋಮೋ ರಿಲೀಸ್ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sat, 7 June 25