‘ಚಹಲ್ಗೂ ಅವಮಾನ ಮಾಡಬಹುದಿತ್ತು, ಗಂಡ ಆಗಿದ್ದ ಅಂತ ಸುಮ್ನೆ ಇದೀನಿ’; ಧನಶ್ರೀ ಖಡಕ್ ವಾರ್ನಿಂಗ್
Dhanashree Verma: ಧನಶ್ರೀ ವರ್ಮ ಮತ್ತು ಯಜುವೇಂದ್ರ ಚಹಲ್ ಅವರ ವಿಚ್ಛೇದನದ ನಂತರ, ಚಹಲ್ ಅವರು ಧನಶ್ರೀ ಅವರನ್ನು ಟೀಕಿಸಿದ್ದರು. ಈಗ, 'ರೈಸ್ ಆ್ಯಂಡ್ ಫಾಲ್' ಶೋನಲ್ಲಿ ಧನಶ್ರೀ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಚಹಲ್ ಗೌರವದಿಂದ ವರ್ತಿಸಬೇಕಿತ್ತು ಎಂದು ಹೇಳಿದ್ದಾರೆ.

ಡ್ಯಾನ್ಸರ್ ಹಾಗೂ ನಟಿ ಧನಶ್ರೀ ವರ್ಮ (Dhanshree) ಹಾಗೂ ಕ್ರಿಕೆಟರ್ ಯಜುವೇಂದ್ರ ಚಹಲ್ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿ ಆ ಬಳಿಕ ಬೇರೆ ಆದರು. ವಿಚ್ಛೇದನಕ್ಕೆ ಯಾರು ಕಾರಣ ಎಂಬ ವಿಚಾರ ರಿವೀಲ್ ಆಗಿಲ್ಲ. ವಿಚ್ಛೇದನದ ಬಳಿಕ ಚಹಲ್ ಅವರು ಧನಶ್ರೀ ಅವರನ್ನು ಪರೋಕ್ಷವಾಗಿ ಸಾಕಷ್ಟು ಟೀಕೆ ಮಾಡಿದ್ದರು. ಅಮೇಜಾನ್ ಎಂಎಕ್ಸ್ ಪ್ಲೇಯರ್ನ ‘ರೈಸ್ ಆ್ಯಂಡ್ ಫಾಲ್’ ಶೋನಲ್ಲಿ ಧನಶ್ರೀ ವರ್ಮಾ ಈ ಬಗ್ಗೆ ಮಾತನಾಡಿದ್ದಾರೆ.
‘ಧನಶ್ರೀ ಹಣಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ’ ಎಂದು ಚಹಲ್ ಅವರು ಪರೋಕ್ಷವಾಗಿ ಹೇಳಿದ್ದರು. ಟ್ರೋಲ್ ಪೇಜ್ಗಳು ಇದೇ ಅರ್ಥ ಬರುವ ರೀತಿಯಲ್ಲಿ ಧನಶ್ರೀ ಅವರನ್ನು ಬಿಂಬಿಸಿದ್ದಾರೆ. ಅಲ್ಲದೆ, ವಿಚ್ಛೇದನದ ದಿನ ಶರ್ಟ್ ಮೇಲೆ ಧನಶ್ರೀ ಅವರ ಮೇಲೆ ಟೀಕೆಗಳು ಬರುವ ರೀತಿಯ ಸಾಲುಗಳು ಹಾಕಿಕೊಂಡು ಬಂದಿದ್ದರು ಚಹಲ್. ಈ ಬಗ್ಗೆ ಧನಶ್ರೀ ಶೋನಲ್ಲಿ ಮೌನ ಮುರಿದಿದ್ದಾರೆ.
‘ನಮ್ಮ ಮಧ್ಯೆ ಏನೋ ಜಗಳ ಆಯಿತು, ಒಬ್ಬರು ಸಂಬಂಧ ಕೊನೆ ಮಾಡಿಕೊಳ್ಳೋಣ ಎಂದು ಹೇಳಿದರು ಎಂದಿಟ್ಟುಕೊಳ್ಳಿ. ಆ ಮಾತಿಗೆ ಬದ್ಧವಾಗಿರಬೇಕು. ಪ್ರತಿಯೊಬ್ಬರ ಕೈಯಲ್ಲಿ ತಮ್ಮದೇ ಆದ ಗೌರವವಿರುತ್ತದೆ. ನೀವು ಮದುವೆ ಆದ ಬಳಿಕ ಇನ್ನೊಬ್ಬ ವ್ಯಕ್ತಿಯ ಗೌರವವೂ ನಿಮ್ಮ ಕೈಯಲ್ಲಿರುತ್ತದೆ’ ಎಂದಿದ್ದಾರೆ ಧನಶ್ರೀ.
View this post on Instagram
‘ನನಗೂ ಅಗೌರವ ಸೂಚಿಸಲು, ಅವಮಾನ ಮಾಡಲು ಬರುತ್ತಿತ್ತು. ಆದರೆ, ಅವರು ನನ್ನ ಪತಿ ಆಗಿದ್ದರು. ನಾನು ಮದುವೆ ಆದ ಬಳಿಕ ಅವರಿಗೆ ಗೌರವ ನೀಡಿದ್ದೆ. ಈಗಲೂ ನಾನು ಮದುವೆಯಾದ ವ್ಯಕ್ತಿಯನ್ನು ಗೌರವಿಸಬೇಕು’ ಎಂದು ಧನಶ್ರೀ ವರ್ಮಾ ಹೇಳಿದರು. ಮತ್ತೆ ಪ್ರೀತಿಸಬೇಕು ಎಂಬ ಬಗ್ಗೆ ಅವರಿಗೆ ಆಸಕ್ತಿ ಉಳಿದಿಲ್ಲ.
ಇದನ್ನೂ ಓದಿ: ಚಹಲ್ ‘ಶುಗರ್ ಡ್ಯಾಡಿ’ ಟಿ-ಶರ್ಟ್ ಮೆಸೇಜ್ಗೆ ಖಡಕ್ ಆಗಿ ಉತ್ತರಿಸಿದ ಧನಶ್ರೀ ವರ್ಮಾ
ಧನಶ್ರೀ ವರ್ಮ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಧನಶ್ರೀ ಪರವಾಗಿ ಎಲ್ಲರೂ ಧ್ವನಿ ಎತ್ತುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








