ಬೇರೆ ಆಗಿ ಎರಡು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್-ಐಶ್ವರ್ಯಾ ದಂಪತಿ
ಭಾರತೀಯ ನೀತಿ ಸಂಹಿತೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ ಸಲ್ಲಿಕೆ ಮಾಡಲಾಗಿದೆ. ಅಂದರೆ ಇಬ್ಬರೂ ಸಮ್ಮತಿಸಿಯೇ ವಿಚ್ಛೇದನ ಪಡೆಯುತ್ತಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಈ ಪ್ರಕರಣ ಶೀಘ್ರವೇ ಇತ್ಯರ್ಥ ಆಗಲಿದೆ.
ರಜನಿಕಾಂತ್ ಮಗಳು ಐಶ್ವರ್ಯಾ (Aishwarya) ಹಾಗೂ ನಟ ಧನುಷ್ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ಎರಡು ವರ್ಷಗಳ ಹಿಂದೆ ತಾವು ಬೇರೆ ಆಗುತ್ತಿರುವ ಬಗ್ಗೆ ಅವರು ಘೋಷಣೆ ಮಾಡಿದ್ದರು. ಆಗಲೇ ವಿಚ್ಛೇದನ ಆಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಸಲಿಗೆ ಇನ್ನೂ ಇವರು ವಿಚ್ಛೇದನಕ್ಕೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಈಗ ಇಬ್ಬರೂ ಡಿವೋರ್ಸ್ ಪೇಪರ್ನ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಚೆನ್ನೈನ ಕೌಂಟುಬಿಕ ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥ ಆಗಲಿದೆ.
ಭಾರತೀಯ ನೀತಿ ಸಂಹಿತೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ ಸಲ್ಲಿಕೆ ಮಾಡಲಾಗಿದೆ. ಅಂದರೆ ಇಬ್ಬರೂ ಸಮ್ಮತಿಸಿಯೇ ವಿಚ್ಛೇದನ ಪಡೆಯುತ್ತಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಈ ಪ್ರಕರಣ ಶೀಘ್ರವೇ ಇತ್ಯರ್ಥ ಆಗಲಿದೆ. ದೂರವಾಗುವ ಬಗ್ಗೆ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿರೋದು ಅನೇಕರಿಗೆ ಅಚ್ಚರಿ ತಂದಿದೆ.
2022ರ ಜನವರಿ ತಿಂಗಳಲ್ಲಿ ಈ ಬಗ್ಗೆ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದರು. ‘18 ವರ್ಷ ನಾವು ಗೆಳೆಯರಾಗಿ, ದಂಪತಿ ಆಗಿ, ಪೋಷಕರಾಗಿ ಜೊತೆಗಿದ್ದೆವು. ಈಗ ನಮ್ಮ ಹಾದಿ ಬೇರೆ ಆಗಿದೆ’ ಎಂದು ದಂಪತಿ ಬರೆದುಕೊಂಡಿದ್ದರು. ಈ ಮೂಲಕ ತಾವು ಬೇರೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದರು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ರಜನಿಕಾಂತ್ ಅವರನ್ನು ಧನುಷ್ ಸಾಕಷ್ಟು ಗೌರವಿಸುತ್ತಾರೆ. ಹೀಗಾಗಿ, ಅವರ ನೇತೃತ್ವದಲ್ಲಿ ಸಂಧಾನ ನಡೆದರೆ ಸರಿ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು.
ಇದನ್ನೂ ಓದಿ: ಕನ್ನಡದಲ್ಲೂ ಬರಲಿದೆ ಸಂಗೀತ ಮಾಂತ್ರಿಕ ಇಳಯರಾಜನ ಕಥೆ; ಧನುಷ್ ಹೀರೋ
ಧನುಷ್ ಹಾಗೂ ಐಶ್ವರ್ಯಾ 2004ರಲ್ಲಿ ವಿವಾಹ ಆದರು. ಈ ದಂಪತಿಗೆ ಯಾತ್ರ (2006) ಹಾಗೂ ಲಿಂಗ (2016) ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಇವರು ಮಕ್ಕಳಿಗಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ಧನುಷ್ ಹಾಗೂ ಐಶ್ವರ್ಯಾ ‘3’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದು ಐಶ್ವರ್ಯಾ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರದ ‘ಕೊಲವೆರಿ ಡಿ..’ ಹಾಡು ಸೂಪರ್ ಹಿಟ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ